Prabhas: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಆಸ್ತಿ ಮೌಲ್ಯ ಇಷ್ಟೊಂದಾ?; ಇಲ್ಲಿದೆ ಕುತೂಹಲಕರ ಮಾಹಿತಿ

Prabhas Net Worth: ಟಾಲಿವುಡ್ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ಇದೀಗ ದೇಶದಾದ್ಯಂತ ಮನೆಮಾತಾಗಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ಕುತೂಹಲಕರ ಮಾಹಿತಿ.

Prabhas: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಆಸ್ತಿ ಮೌಲ್ಯ ಇಷ್ಟೊಂದಾ?; ಇಲ್ಲಿದೆ ಕುತೂಹಲಕರ ಮಾಹಿತಿ
‘ರಾಧೆ ಶ್ಯಾಮ್’ ಚಿತ್ರದಲ್ಲಿ ಪ್ರಭಾಸ್
Edited By:

Updated on: Oct 24, 2021 | 6:33 PM

ಟಾಲಿವುಡ್ ನಟ ಪ್ರಭಾಸ್ ಅಭಿಮಾನಿಗಳಿಂದ ರೆಬೆಲ್ ಸ್ಟಾರ್ ಎಂದು ಕರೆಸಿಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಅವರು ಆಕ್ಷನ್ ಸಿನಿಮಾಗಳಿಂದ ಮೊದಲು ಎಲ್ಲರ ಮನಗೆದ್ದಿದ್ದರು. ಆದರೆ ‘ಬಾಹುಬಲಿ’ ಸರಣಿಯಲ್ಲಿ ಅವರು ಕಾಣಿಸಿಕೊಂಡ ನಂತರ ಅವೆರ ಇಮೇಜ್ ಸಂಪೂರ್ಣ ಬದಲಾಯಿತು. ಟಾಲಿವುಡ್ ಸ್ಟಾರ್ ಇಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಅವರು ಬದಲಾದರು. ಅಲ್ಲದೇ ಪ್ರಸ್ತುತ ಬೇರಾವ ನಟನೂ ಭಾಗಿಯಾಗಿಲ್ಲದ ಒಂದು ದಾಖಲೆಯಲ್ಲಿ ಪ್ರಭಾಸ್ ಇದ್ದಾರೆ. ಅದೇನೆಂದರೆ, ಅವರ ಮುಂದಿನ ಚಿತ್ರಗಳೆಲ್ಲವೂ ಪ್ಯಾನ್ ಇಂಡಿಯಾ ಚಿತ್ರಗಳು. ಜೊತೆಗೆ ಪ್ರಭಾಸ್ ಬತ್ತಳಿಕೆಯಲ್ಲಿ ಸದ್ಯ ಮೂರು ಚಿತ್ರಗಳಿವೆ. ಆದ್ದರಿಂದಲೇ ಬ್ಯುಸಿಯಿರುವ, ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿ ಪ್ರಭಾಸ್ ಗುರುತಿಸಿಕೊಂಡಿದ್ದಾರೆ. ಹಾಗಾದರೆ ಪ್ರಭಾಸ್ ಬಳಿ ಒಟ್ಟು ಆಸ್ತಿ ಎಷ್ಟಿದೆ? ಈ ಕುರಿತ ಮಾಹಿತಿ ಇಲ್ಲಿದೆ.

ಪ್ರಭಾಸ್ ಅವರ ಆದಾಯ ಜಾಹಿರಾತು, ಚಿತ್ರಗಳು ಹಾಗೂ ಉದ್ಯಮದಿಂದ ಬರುತ್ತದೆ. ಬಾಹುಬಲಿಗೂ ಮುನ್ನ ಪ್ರಭಾಸ್ ಕೇವಲ ತೆಲುಗು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ಅವರ ಬ್ರಾಂಡ್ ಮೌಲ್ಯ ಹೆಚ್ಚಾಗಿದ್ದು, ಬಹಳಷ್ಟು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಭಾಸ್ ಅವರ ಆದಾಯದ ಕುರಿತು caknowledge.com ವರದಿ ಮಾಡಿದೆ. ಆ ವರದಿಯ ಪ್ರಕಾರ, ಪ್ರಭಾಸ್ ಪ್ರಸ್ತುತ ₹ 215 ಕೋಟಿ ರೂಗಳ ಒಡೆಯರಾಗಿದ್ದಾರೆ. ಆದರೆ ಈಗಿನ ಲೆಕ್ಕಾಚಾರಗಳನ್ನು ಗಮನಿಸಿದಾಗ, ಒಂದು ಮೂಲವು ಅವರ ಆಸ್ತಿಯು ಇನ್ನು ಮೂರು ವರ್ಷಗಳಲ್ಲಿ ಸುಮಾರು 65 ಪ್ರತಿಶತ ಹೆಚ್ಚಾಗಲಿದೆ ಎಂದಿದೆ. ಈ ಮೂಲಕ ಕೆಲವೇ ವರ್ಷಗಳಲ್ಲಿ ಪ್ರಭಾಸ್ ₹ 500 ಕೋಟಿಯ ಕ್ಲಬ್​ಗೆ ಸೇರಬಹುದು.

ಪ್ರಭಾಸ್ ಹೈದರಾಬಾದ್​ ಐಷಾರಾಮಿ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. 2014ರಲ್ಲಿ ಪ್ರಭಾಸ್ ಆ ಮನೆಯನ್ನು ಪ್ರವೇಶಿಸಿದ್ದರು. ಇವುಗಳಲ್ಲದೇ ಪ್ರಭಾಸ್​ಗೆ ಕಾರುಗಳ ಕುರಿತು ಕ್ರೇಜ್ ತುಸು ಜಾಸ್ತಿಯೇ ಇದೆ. ಅವರು ಜಾಗ್ವಾರ್, ರೋಲ್ಸ್ ರಾಯ್ಸ್ ಸೇರಿದಂತೆ ಅನೇಕ ಕಾರುಗಳ ಒಡೆಯರಾಗಿದ್ದಾರೆ.

ಪ್ರಭಾಸ್ ವೃತ್ತಿ ಜೀವನದ ವಿಚಾರಕ್ಕೆ ಬಂದರೆ, 2002ರಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡ ಪ್ರಭಾಸ್ ಬಳಿ, ಸದ್ಯ ಸಾಲು ಸಾಲು ಸಿನಿಮಾಗಳಿವೆ. ಈಗ ಅವರು ಒಪ್ಪಿಕೊಳ್ಳುತ್ತಿರುವ ಚಿತ್ರಗಳಿಗ ಸುಮಾರು ₹ 100 ಕೋಟಿಯಷ್ಟು ಸಂಭಾವನೆಯನ್ನೂ ಪಡೆಯುತ್ತಿದ್ದಾರೆ ಎಂದು ವರದಿಗಳು ಉಲ್ಲೇಖಿಸಿದ್ದು, ಇತ್ತೀಚೆಗೆ ಸುದ್ದಿಯಾಗಿತ್ತು. ರಾಮಾಯಣವನ್ನು ಆಧರಿಸಿದ ‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರದಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ‘ರಾಧೆ ಶ್ಯಾಮ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಜನವರಿ 14ರಂದು ತೆರೆಕಾಣಲಿದೆ. ಈ ಚಿತ್ರ ಕನ್ನಡದಲ್ಲೂ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

‘ಸೂರ್ಯವಂಶಿ’ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮೇಲೆ ನಿಂತಿದೆ ರಾಜಮೌಳಿ ‘ಆರ್​ಆರ್​ಆರ್’ ಭವಿಷ್ಯ; ಏನಿದು ಸಮಾಚಾರ?

ಪ್ರತಿ ಜಾಹಿರಾತಿಗೆ ಕೋಟಿ ಕೋಟಿ ಪಡೆಯುವ ಶಾರುಖ್ ಇದೀಗ ನಿಮ್ಮ ಅಂಗಡಿಗೆ ಉಚಿತವಾಗಿ ಜಾಹಿರಾತು ನೀಡಬಲ್ಲರು; ಹೇಗೆ?

Published On - 6:31 pm, Sun, 24 October 21

Follow Us