ನೆಚ್ಚಿನ ನಟನ ಸಿನಿಮಾ ಚಿತ್ರಮಂದಿರದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಬೇಕು, 100 ದಿನ ಓಡಬೇಕು ಎಂಬುದು ಫ್ಯಾನ್ಸ್ ಆಸೆ. ಆದರೆ, ಕೆಲವೊಮ್ಮೆ ಸಿನಿಮಾ ಅಂದುಕೊಂಡ ರೀತಿಯಲ್ಲಿ ಮೂಡಿ ಬಂದಿರುವುದಿಲ್ಲ. ಹೀಗಾದಾಗ, ಅಭಿಮಾನಿಗಳಿಗೆ ಬೇಸರ ಆಗಿಯೇ ಆಗುತ್ತದೆ. ಆದರೆ, ಸಿನಿಮಾ ಉತ್ತಮವಾಗಿದ್ದೂ, ಯಶಸ್ಸು ಕಂಡಿಲ್ಲ ಎಂದರೆ ಅಭಿಮಾನಿಗಳಿಗೆ ದುಪ್ಪಟ್ಟು ಬೇಸರವಾಗುತ್ತದೆ. ಈಗ ಪುನೀತ್ ರಾಜ್ಕುಮಾರ್ ಫ್ಯಾನ್ಸ್ಗೂ ಇದೇ ರೀತಿ ಆಗಿದೆ. ಯುವರತ್ನ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಎರಡನೇ ವಾರಕ್ಕೆ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವುದು ಬೇಸರ ತರಿಸಿದೆ.
ಭಾರೀ ನಿರೀಕ್ಷೆಗಳೊಂದಿಗೆ ಯುವರತ್ನ ಸಿನಿಮಾ ಏಪ್ರಿಲ್ 1ರಂದು ತೆರೆಗೆ ಬಂದಿತ್ತು. ಸಿನಿಮಾ ತೆರೆಕಂಡ ಎರಡೇ ದಿನಕ್ಕೆ ಹೌಸ್ಫುಲ್ ಪ್ರದರ್ಶನಕ್ಕೆ ಸರ್ಕಾರ ತಡೆ ನೀಡಿತ್ತು. ಇದು ಅಭಿಮಾನಿಗಳು ಹಾಗೂ ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿತ್ತು. ಪುನೀತ್ ಹಾಗೂ ಅಭಿಮಾನಿಗಳ ಮನವಿಗೆ ಮಣಿದ ಸರ್ಕಾರ ಕೆಲ ದಿನಗಳವರೆಗೆ ಹೌಸ್ಫುಲ್ ಪ್ರದರ್ಶನಕ್ಕೆ ಅವಕಾಶ ನೀಡಿತ್ತು.
Delighted to inform you all that @hombalefilms is all set to launch #Yuvarathnaa on @PrimeVideoIN.
The movie will continue to be screened in theatres. We seek cooperation from all fans, the film fraternity, and all our well-wishers.#YuvarathnaaOnPrime from April 9. pic.twitter.com/b6cSoNZmQC— Hombale Films (@hombalefilms) April 8, 2021
ಈಗ ಚಿತ್ರಮಂದಿರಗಳಲ್ಲಿ ಮತ್ತೆ ಶೇ. 50 ಆಸನ ವ್ಯವಸ್ಥೆ ಜಾರಿಗೆ ಬಂದಿದೆ. ಅಂದರೆ, ಥಿಯೇಟರ್ನಲ್ಲಿರುವ ಒಟ್ಟು ಆಸನದಲ್ಲಿ ಅರ್ಧದಷ್ಟು ಮಂದಿ ಮಾತ್ರ ಕೂರಬಹುದು. ಹೀಗಾದಾಗ, ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಹೋಗೋದು ಕಡಿಮೆ ಆಗಲಿದೆ. ಇದು ನೇರವಾಗಿ ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ.
UNFAIR !!!! No matter what the situation is. This is unfair to a movie which is having good talk all around. Should have waited atleast a month! #Yuvarathnaa #Yuvarathna #yuvarathnaaonprime https://t.co/aCOhIYEssD
— Appu Ultras (@AppuUltras) April 8, 2021
ಇದನ್ನು ಅರಿತ ಚಿತ್ರತಂಡ ಏಪ್ರಿಲ್ 9ಕ್ಕೆ ಯುವರತ್ನ ಸಿನಿಮಾವನ್ನು ಪ್ರೈಮ್ನಲ್ಲಿ ರಿಲೀಸ್ ಮಾಡುತ್ತಿದೆ. ಇದು ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ. ಪುನೀತ್ ನಟನೆಯ ಸಿನಿಮಾ ರಿಲೀಸ್ ಆದ ಎಂಟೇ ದಿನಕ್ಕೆ ಒಟಿಟಿ ಪ್ಲಾಟ್ಫಾರ್ಮ್ಗೆ ಬರುತ್ತಿರುವುದೇಕೆ? ಹೀಗೆ ಮಾಡುತ್ತಿರುವುದು ಸರಿಯಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆದರೆ ನಂತರ ಚಿತ್ರಮಂದಿರದತ್ತ ಯಾರೂ ಹೆಜ್ಜೆ ಹಾಕುವುದಿಲ್ಲ. ಹೀಗಾಗಿ, ಯುವರತ್ನ 25ನೇ ದಿನ ಸಂಭ್ರಮಾಚರಣೆಯನ್ನೂ ಆಚರಿಸಿಕೊಳ್ಳುವುದು ಅನುಮಾನವಿದೆ. ಇದು ಅಭಿಮಾನಿಗಳಿಗೆ ತೀವ್ರ ಬೇಸರಮೂಡಿಸಿದೆ.
Published On - 3:08 pm, Thu, 8 April 21