ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ (Pushpa Movie) ಸಿನಿಮಾದಲ್ಲಿ ನಟಿ ಸಮಂತಾ (Samantha) ಅವರು ಒಂದು ಐಟಂ ಡ್ಯಾನ್ಸ್ ಮಾಡಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ಅವರು ಶೂಟಿಂಗ್ ಕೂಡ ಶುರು ಮಾಡಿದ್ದಾರೆ. ಈ ನಡುವೆ ಒಂದು ಸ್ಪೆಷಲ್ ನ್ಯೂಸ್ ಕೇಳಿಬಂದಿದೆ. ಸಮಂತಾ ಹೆಜ್ಜೆ ಹಾಕಲಿರುವ ಐಟಂ ಸಾಂಗ್ಗೆ ನೃತ್ಯ ನಿರ್ದೇಶನ ಮಾಡಲು ಬಾಲಿವುಡ್ನ ಖ್ಯಾತ ಕೋರಿಯೋಗ್ರಾಫರ್ ಗಣೇಶ್ ಆಚಾರ್ಯ ಅವರನ್ನು ಕರೆತರಲಾಗಿದೆ. ಗಣೇಶ್ ಆಚಾರ್ಯ (Ganesh Acharya) ಅವರು ಹೈದರಾಬಾದ್ಗೆ ಬಂದಿದ್ದು, ಈಗಾಗಲೇ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಆರಂಭಿಸಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ನಿರ್ದೇಶಕ ಸುಕುಮಾರ್ ಅವರು ಈ ಐಟಂ ಸಾಂಗ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿ.
ಸಮಂತಾ ಅವರು ವಿಚ್ಛೇದನ ಪಡೆದ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿರುವ ಅವರು ಸಿನಿಮಾಗಳ ಆಯ್ಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ‘ಪುಷ್ಪ’ ಸಿನಿಮಾದ ಐಟಂ ಸಾಂಗ್ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸಂಭಾವನೆ ವಿಚಾರದ ಬಗ್ಗೆ ಚಿತ್ರತಂಡದಿಂದಾಗಲೀ ಸಮಂತಾ ಕಡೆಯಿಂದಾಗಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಅವರು ಪಡೆಯುತ್ತಾರೆ ಎನ್ನಲಾದ ಸಂಭಾವನೆ ಮೊತ್ತ ಕೇಳಿ ಎಲ್ಲರಿಗೂ ಅಚ್ಚರಿ ಆಗಿದೆ. ಈ ಐಟಂ ಸಾಂಗ್ನಲ್ಲಿ ನಟಿಸಲು ಸಮಂತಾ ಬರೋಬ್ಬರಿ 1.5 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಸುದ್ದಿ ಹರಡಿದೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರಕ್ಕೆ ಖ್ಯಾತ ನಿರ್ದೇಶಕ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಅವರ ಬಹುತೇಕ ಸಿನಿಮಾಗಳಲ್ಲಿ ಒಂದು ಐಟಂ ಸಾಂಗ್ ಇರುತ್ತದೆ. ಅದೇ ರೀತಿ ‘ಪುಷ್ಪ’ ಸಿನಿಮಾದಲ್ಲೂ ಒಂದು ಭರ್ಜರಿ ಐಟಂ ಸಾಂಗ್ ಇಟ್ಟಿದ್ದಾರಂತೆ. ಈ ಹಾಡಿನಲ್ಲಿ ನರ್ತಿಸಲು ಈ ಮೊದಲು ಪೂಜಾ ಹೆಗ್ಡೆ ಮತ್ತು ಸನ್ನಿ ಲಿಯೋನ್ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಆ ನಟಿಯರು ಒಪ್ಪಿಕೊಂಡಿಲ್ಲ. ಅಂತಿಮವಾಗಿ ಸಮಂತಾ ಅವರು ಒಪ್ಪಿಕೊಂಡರು.
ಇದನ್ನೂ ಓದಿ:
ಗಂಡು-ಹೆಣ್ಣು ಇಬ್ಬರ ಜತೆಗೂ ಲೈಂಗಿಕ ಆಸಕ್ತಿ ಇರುವ ಮಹಿಳೆ ಪಾತ್ರದಲ್ಲಿ ಸಮಂತಾ; ಮತ್ತೆ ವಿವಾದಕ್ಕೆ ನಾಂದಿ?
ಮಾಜಿ ಪತಿ ಬರ್ತ್ಡೇ ಕಾರಣಕ್ಕೆ ಟೀಕೆ ಎದುರಿಸಿ, ಮರುದಿನವೇ ನಾಯಿ ಜನ್ಮದಿನ ಆಚರಿಸಿದ ಸಮಂತಾ