ತಂತ್ರಜ್ಞಾನ ಮುಂದುವರಿದಂತೆ ಸಿನಿಮಾ ಮೇಕಿಂಗ್ನಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ನಿರ್ದೇಶಕರು ಹಾಗೂ ನಿರ್ಮಾಪಕರು ಹೊಸಹೊಸ ಪ್ರಯೋಗಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಈಗ ತೆಲುಗಿನಲ್ಲಿ ಹೊಸ ಸಿನಿಮಾ ಒಂದು ಸಿದ್ಧಗೊಳ್ಳುತ್ತಿದೆ. ಈ ಚಿತ್ರದ ಅವಧಿ 105 ನಿಮಿಷ ಅಂದರೆ ಸುಮಾರು ಎರಡು ಗಂಟೆ ಇರಲಿದ್ದು, ಒಂದೇ ಟೇಕ್ನಲ್ಲಿ ಚಿತ್ರೀಕರಿಸಲಾಗಿದೆ ಅನ್ನೋದು ವಿಶೇಷ.
ಕನ್ನಡದ ‘ಬಿಂದಾಸ್’ ಸಿನಿಮಾದಲ್ಲಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ ಟಾಲಿವುಡ್ನಲ್ಲಿ ಬ್ಯುಸಿಯಾಗಿದ್ದಾರೆ. ‘105’ ಹೆಸರಿನ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇಡೀ ಚಿತ್ರದಲ್ಲಿ ಬರುವುದು ಒಂದೇ ಪಾತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ಇಡೀ ಸಿನಿಮಾ ಒಂದೇ ಶಾಟ್ನಲ್ಲಿ ತೆಗೆಯಲಾಗಿದೆ. ಹೈದರಾಬಾದ್ನ ಒಂದು ಮನೆಯಲ್ಲಿ ಈ ಸಿನಿಮಾ ಶೂಟ್ ಮಾಡಲಾಗಿದೆ. ರಾಜಾ ದುಸ್ಸಾ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಚಿತ್ರ.
ಆಗಸ್ಟ್ 9ರಂದು ಹನ್ಸಿಕಾ ಅವರ ಜನ್ಮದಿನವಾಗಿತ್ತು. ಈ ವಿಶೇಷ ದಿನದಂದು ‘105’ರ ಮೊದಲ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಈ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭಗೊಂಡಿವೆ. ಈ ಸಿನಿಮಾಗಾಗಿ 20 ದಿನಗಳ ಕಾಲ ಹನ್ಸಿಕಾ ಪ್ರಾಕ್ಟಿಸ್ ಮಾಡಿಕೊಂಡಿದ್ದರು ಅನ್ನೋದು ವಿಶೇಷ. ಈಗ ಚಿತ್ರತಂಡದಿಂದ ಹೊಸ ಅಪ್ಡೇಟ್ ಒಂದು ಕೇಳಿ ಬರುತ್ತಿದೆ.
ತಮಿಳು, ತೆಲುಗು, ಹಿಂದಿ ಮಾತ್ರವಲ್ಲದೆ ಚೀನಾ, ಕೊರಿಯಾ ಹಾಗೂ ಇನ್ನೂ ಅನೇಕ ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಅಲ್ಲಿಯೂ ಈ ಚಿತ್ರಕ್ಕೆ ಬೇಡಿಕೆ ಸೃಷ್ಟಿ ಆಗಿದೆ ಎನ್ನುವ ಮಾತು ಕೇಳಿ ಬಂದಿದೆ. ಈ ಮೂಲಕ ಹೊಸ ದಾಖಲೆಗೆ ಸಿನಿಮಾ ರೆಡಿ ಆಗಿದೆ. ಈಗಾಗಲೇ ಇದಕ್ಕೆ ಸಿನಿಮಾ ತಂಡ ರೆಡಿ ಆಗಿದ್ದು, ಡಬ್ ಮಾಡಿ ಈ ಸಿನಿಮಾವನ್ನು ಬೇರೆ ದೇಶಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
2008ರಲ್ಲಿ ಬಿಂದಾಸ್ ಸಿನಿಮಾ ತೆರೆಗೆ ಬಂದಿತ್ತು. ಪುನೀತ್ ಆ ಚಿತ್ರದ ಹೀರೋ. ಆ ಸಿನಿಮಾಗೆ ಹನ್ಸಿಕಾ ನಾಯಕಿಯಾಗಿದ್ದರು. ಟದು ಅವರ ಮೊದಲ ಕನ್ನಡ ಸಿನಿಮಾ. ಅದಾದ ನಂತರದಲ್ಲಿ ಅವರು ಯಾವುದೇ ಕನ್ನಡ ಚಿತ್ರದಲ್ಲಿ ನಟಿಸಿಲ್ಲ.
ಇದನ್ನೂ ಓದಿ: Dhananjay: ಇದು ಡಾಲಿ ಅಲ್ಲ ರತ್ನಾಕರ; ಹೊಸ ಪ್ರಪಂಚದ ಸ್ಯಾಂಪಲ್ ತೋರಿಸಿದ ಧನಂಜಯ್
‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’; ‘ಜೇಮ್ಸ್’ ಚಿತ್ರದ ಪುನೀತ್ ಪವರ್ಫುಲ್ ಲುಕ್ ಅನಾವರಣ