Happy Birthday Karan Johar: ಕರಣ್​ ಜೋಹರ್​ 49ನೇ ಜನ್ಮದಿನ; ಲಾಕ್​ಡೌನ್​ನಲ್ಲೂ ಪಾರ್ಟಿ?

Karan Johar Birthday: ಪ್ರತಿ ವರ್ಷ ಕರಣ್​ ಜೋಹರ್ ತಮ್ಮ ಮನೆಯಲ್ಲೇ ಬರ್ತ್​ ಡೇ ಆಚರಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಅವರು ಪ್ಲ್ಯಾನ್​ ಚೇಂಜ್​ ಮಾಡಿದ್ದಾರೆ. ಅಲಿಬಾಗ್​ನ ರೆಸಾರ್ಟ್​ನಲ್ಲಿ ಬರ್ತ್​ಡೇ ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

Happy Birthday Karan Johar: ಕರಣ್​ ಜೋಹರ್​ 49ನೇ ಜನ್ಮದಿನ; ಲಾಕ್​ಡೌನ್​ನಲ್ಲೂ ಪಾರ್ಟಿ?
ಕರಣ್​ ಜೋಹರ್
Edited By:

Updated on: May 25, 2021 | 7:32 AM

ಸಾಕಷ್ಟು​ ಸ್ಟಾರ್​ ಕಿಡ್​ಗಳನ್ನು ಬಾಲಿವುಡ್​ಗೆ ಪರಿಚಯಿಸಿದ ಖ್ಯಾತಿ ಕರಣ್​ ಜೋಹರ್​ ಅವರದ್ದು. ಯಾವುದೇ ಸ್ಟಾರ್​ ಮಕ್ಕಳು ಚಿತ್ರರಂಗ ಪ್ರವೇಶಿಸಬೇಕು ಎಂದರೆ, ಮೊದಲು ಅಪ್ರೋಚ್​ ಮಾಡುವುದು ಕರಣ್​ ಅವರನ್ನು. ಇಂದು (ಮೇ 25) ಅವರು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಎಲ್ಲಾ ಕಡೆ ಲಾಕ್​ಡೌನ್​ ಜಾರಿಯಲ್ಲಿದೆ. ಆದಾಗ್ಯೂ ಪಾರ್ಟಿ ಮಾಡುವ ಆಲೋಚನೆಯನ್ನು ಕರಣ್​ ಕೈಬಿಟ್ಟಿಲ್ಲ ಎನ್ನಲಾಗಿದೆ.

ಪ್ರತಿ ವರ್ಷ ಕರಣ್​ ಜೋಹರ್ ತಮ್ಮ ಮನೆಯಲ್ಲೇ ಬರ್ತ್​ ಡೇ ಆಚರಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಅವರು ಪ್ಲ್ಯಾನ್​ ಚೇಂಜ್​ ಮಾಡಿದ್ದಾರೆ. ಅಲಿಬಾಗ್​ನ ರೆಸಾರ್ಟ್​ನಲ್ಲಿ ಬರ್ತ್​ಡೇ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಅಂದಹಾಗೆ, ಸ್ಟಾರ್​ಗಳಿಗೆ ಆಹ್ವಾನ ನೀಡಲಾಗಿದೆ. ವಿರಾಟ್​ ಕೊಹ್ಲಿ, ಅನುಷ್ಕಾ ಶರ್ಮಾ, ರಣಬೀರ್ ಕಪೂರ್​, ಆಲಿಯಾ ಭಟ್​, ಸಿದ್ಧಾರ್ಥ್​ ಮಲ್ಹೋತ್ರ, ಕಿಯಾರಾ ಆಡ್ವಾಣಿ. ಶಾರುಖ್​ ಖಾನ್​, ಗೌರಿ ಖಾನ್​, ವಿಕ್ಕಿ ಕೌಶಲ್. ಕತ್ರಿನಾ ಕೈಫ್​, ವರುಣ್​ ಧವನ್​, ನತಾಶಾ ದಲಾಲ್​, ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ ಸೇರಿದಂತೆ ಅನೇಕರಿಗೆ ಆಮಂತ್ರಣ ಪತ್ರ ತಲುಪಿದೆ ಎನ್ನಲಾಗಿದೆ.

ಮೇ 24ರಿಂದಲೇ ಸಂಭ್ರಮಾಚಾರಣೆ ಆರಂಭವಾಗಿದೆ. ಒಮ್ಮೆಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತಿಲ್ಲ. ಹೀಗಾಗಿ, ಹಂತಹಂತವಾಗಿ ಸೆಲೆಬ್ರಿಟಿಗಳು ಇಲ್ಲಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ರಣವೀರ್, ದೀಪಿಕಾ, ಕರೀನಾ, ಸೈಫ್​ ಅಲಿ ಖಾನ್, ರಾಣಿ ಮುಖರ್ಜಿ, ಆದಿತ್ಯಾ ಚೋಪ್ರಾ, ಅನುಷ್ಕಾ ಶರ್ಮ, ವಿರಾಟ್​ ಕೊಹ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳೋದು ಅನುಮಾನ ಎನ್ನಲಾಗಿದೆ.

ಕರಣ್ ನಿರ್ಮಾಣದ ಸಾಕಷ್ಟು ಸಿನಿಮಾಗಳು ಶೂಟಿಂಗ್ ಹಂತದಲ್ಲಿವೆ. ಶೇರ್ಶಾ, ದೋಸ್ತಾನಾ 2, ಜುಗ್ ಜುಗ್ ಜೀಯೋ, ಲೈಗರ್ ಸೇರಿ ಸಾಕಷ್ಟು ಸಿನಿಮಾಗಳಿಗೆ ಧರ್ಮಾ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ.  ಈ ಸಿನಿಮಾಗಳಲ್ಲಿ ಕೆಲವು ಶೂಟಿಂಗ್​ ಹಂತದಲ್ಲಿದ್ದರೆ, ಇನ್ನೂ ಕೆಲವು ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ.

ಇದನ್ನೂ ಓದಿ: ಕಾರ್ತಿಕ್​ ಆರ್ಯನ್​ಗೆ ಗೇಟ್​ ಪಾಸ್​ ಕೊಟ್ಟ ಬೆನ್ನಲ್ಲೇ ಕರಣ್​​ ಜೋಹರ್​ಗೆ ಬಿಗ್​ ಶಾಕ್​

ಕೊಹ್ಲಿ ಮದುವೆ ನಂತರ ಅನುಷ್ಕಾ ಶರ್ಮಾಗೆ ಕರಣ್​ ಜೋಹರ್​ ಬಳಸಿದ ಆ ಒಂದು ಶಬ್ದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us