ಹೊಸ ಕಾರು ಖರೀದಿಸಿದ ವಸಿಷ್ಠ-ಹರಿಪ್ರಿಯಾ: ಬೆಲೆ ಎಷ್ಟು ಲಕ್ಷ?

Haripriya and Vasishta Simha: ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಅವರು ಸ್ಯಾಂಡಲ್​​ವುಡ್​​ನ ಕ್ಯೂಟ್ ಜೋಡಿಗಳಲ್ಲಿ ಒಂದು. ಪ್ರೀತಿಸಿ ಮದುವೆ ಆದ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಇದೀಗ ಒಂದು ಮುದ್ದಾದ ಮುಗುವಿನ ಪೋಷಕರು ಸಹ ಆಗಿದ್ದಾರೆ. ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿರುವ ಈ ಜೋಡಿ ಇದೀಗ ತಮ್ಮ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಈ ಜೋಡಿ ಹೊಸ ಐಶಾರಾಮಿ ಕಾರೊಂದನ್ನು ಈ ಜೋಡಿ ಖರೀದಿ ಮಾಡಿದೆ. ಕಾರಿನ ವೈಶಿಷ್ಟ್ಯತೆಗಳೇನು? ಕಾರಿನ ಬೆಲೆ ಎಷ್ಟು? ಮಾಹಿತಿ ಇಲ್ಲಿದೆ.

ಹೊಸ ಕಾರು ಖರೀದಿಸಿದ ವಸಿಷ್ಠ-ಹರಿಪ್ರಿಯಾ: ಬೆಲೆ ಎಷ್ಟು ಲಕ್ಷ?
Haripriya Vasishta

Updated on: Feb 07, 2026 | 5:03 PM

ವಸಿಷ್ಠ ಸಿಂಹ ಮತ್ತು ಹರಿಪ್ರಿಯ (Haripriya) ಅವರು ಸ್ಯಾಂಡಲ್​​ವುಡ್​​ನ ಕ್ಯೂಟ್ ಜೋಡಿಗಳಲ್ಲಿ ಒಂದು. ಪ್ರೀತಿಸಿ ಮದುವೆ ಆದ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಇದೀಗ ಒಂದು ಮುದ್ದಾದ ಮುಗುವಿನ ಪೋಷಕರು ಸಹ ಆಗಿದ್ದಾರೆ. ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿರುವ ಈ ಜೋಡಿ ಇದೀಗ ತಮ್ಮ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಈ ಜೋಡಿ ಹೊಸ ಐಶಾರಾಮಿ ಕಾರೊಂದನ್ನು ಈ ಜೋಡಿ ಖರೀದಿ ಮಾಡಿದೆ. ದುಬಾರಿ ಬೆಲೆಯ ಈ ಕಾರು ಸಾಕಷ್ಟು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಅವರು ಟೊಯೊಟಾ ಇನ್ನೊವಾ ಹೈಕ್ರಾಸ್ ಕಾರನ್ನು ಖರೀದಿ ಮಾಡಿದ್ದಾರೆ. ಹೊಸ ಕಾರಿನ ಡೆಲಿವರಿ ಪಡೆಯುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಶೋರೂಮ್‌ನಲ್ಲಿ ದಂಪತಿಗಳು ಕೇಕ್ ಕತ್ತರಿಸಿ, ಹೊಸ ವಾಹನವನ್ನು ಬರಮಾಡಿಕೊಂಡಿದ್ದಾರೆ. ಬಿಳಿ ಬಣ್ಣದ ಈ ಹೊಸ ಕಾರಿನೊಂದಿಗೆ ಈ ಜೋಡಿ ಫೋಸ್ ನೀಡಿದ್ದು, ಮಗುವನ್ನು ಸಹ ಕಾರಿನ ಮೇಲೆ ಕೂರಿಸಿ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಅಭಿಮಾನಿಗಳು “ಹೊಸ ಅತಿಥಿಯ ಆಗಮನಕ್ಕೆ ಅಭಿನಂದನೆಗಳು” ಎಂದು ಶುಭ ಹಾರೈಸುತ್ತಿದ್ದಾರೆ. ಕಾರಿನ ಡೆಲಿವರಿ ವೇಳೆ ವಿವಾ ಟೊಯೊಟಾದ ಸಿಬ್ಬಂದಿಯ ಸಹಾಯಕ್ಕೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಧನ್ಯವಾದ ಹೇಳಿದ್ದಾರೆ.

ವಸಿಷ್ಠ ಸಿಂಹ ಮತ್ತು ಹರಿಪ್ರಿಯ ಖರೀದಿ ಮಾಡಿರುವ ಟೊಯೋಟಾ ಇನ್ನೋವಾ ಹೈಕ್ರಾಸ್ ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿರುವ ಎಂಪಿವಿ (MPV) ಮಾದರಿಯಾಗಿದೆ. ಈ ಜೋಡಿಯು ಹೈಕ್ರಾಸ್​ನ ಜೆಡ್​​ಎಕ್ಸ್ ಮಾದರಿಯನ್ನು ಖರೀದಿ ಮಾಡಿದ್ದು, ಈ ಕಾರು ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು, ಅತ್ಯುತ್ತಮ ಮೈಲೇಜ್ ಮತ್ತು ಪರಿಸರ ಸ್ನೇಹಿ ಚಾಲನೆಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಲ್ಲಿ ಈ ಕಾರಿನ ಆನ್-ರೋಡ್ ಬೆಲೆ ಸುಮಾರು ₹24 ಲಕ್ಷದಿಂದ ₹40 ಲಕ್ಷದವರೆಗೆ (ವೇರಿಯೆಂಟ್ ಆಧಾರದ ಮೇಲೆ) ಇರಲಿದೆ. ಈಗ ಹರಿಪ್ರಿಯ-ವಸಿಷ್ಠ ಖರೀದಿ ಅವರು ಟಾಪೆಂಡ್ ಮಾದರಿ ಕಾರನ್ನೇ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ

ಹೈಬ್ರೀಡ್ ಎಂಜಿನ್, ಅತ್ಯುತ್ತಮ ಮೈಲೇಜ್, ಅತ್ಯುತ್ತಮ ಪವರ್, ಪನೋರಮಿಕ್ ಸನ್‌ರೂಫ್, ಜೆಬಿಎಲ್ ಸ್ಪೀಕರ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ನಂತಹ ಪ್ರೀಮಿಯಂ ಸೌಲಭ್ಯಗಳನ್ನು ಈ ಕಾರು ಹೊಂದಿದೆ. ಕುಟುಂಬ ಟ್ರಾವೆಲ್ ಮಾಡಲು ಅತ್ಯುತ್ತಮ ಕಾರು ಎಂಬ ಖ್ಯಾತಿ ಹೈಕ್ರಾಸ್​​ನದ್ದು. ಈ ಹಿಂದೆ ಸುಮಾರು ₹1.4 ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಝ್ ಜಿಎಲ್‌ಇ ಕಾರನ್ನು ಖರೀದಿಸಿದ್ದ ಈ ಜೋಡಿ, ಈಗ ಲಾಂಗ್ ಡ್ರೈವ್ ಮತ್ತು ಕುಟುಂಬದ ಹಿರಿಯರೊಂದಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಈ ಏಳು ಆಸನಗಳ ಸುಸಜ್ಜಿತ ಇನ್ನೋವಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ