AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನ್ನ ಗಂಡ ಮುದುಕ’ ಎಂದವರಿಗೆ ಖಡಕ್ ತಿರುಗೇಟು ಕೊಟ್ಟ ಅರ್ಬಾಜ್ ಖಾನ್ ಪತ್ನಿ

ಮಲೈಕಾ ಅರೋರಾ ಅವರಿಂದ ವಿಚ್ಛೇದನ ಪಡೆದ ನಂತರ ಅರ್ಬಾಜ್ ಖಾನ್ ಅವರು ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿ ಜೊತೆ ಡೇಟಿಂಗ್ ನಡೆಸಿದ್ದರು. ಬಳಿಕ ತಮಗಿಂತ 23 ವರ್ಷ ಕಿರಿಯರಾದ ಶೂರಾ ಖಾನ್ ಜೊತೆ ಅವರು ಮದುವೆ ಮಾಡಿಕೊಂಡರು. ಹಾಗಾಗಿ ಕೆಲವರು ಈ ವಯಸ್ಸಿನ ಅಂತರವನ್ನು ಗೇಲಿ ಮಾಡುತ್ತಿದ್ದಾರೆ.

‘ನಿನ್ನ ಗಂಡ ಮುದುಕ’ ಎಂದವರಿಗೆ ಖಡಕ್ ತಿರುಗೇಟು ಕೊಟ್ಟ ಅರ್ಬಾಜ್ ಖಾನ್ ಪತ್ನಿ
Arbaaz Khan, Sshura Khan
ಮದನ್​ ಕುಮಾರ್​
|

Updated on: Jun 15, 2026 | 8:05 PM

Share

ಬಾಲಿವುಡ್ ನಟ ಹಾಗೂ ನಿರ್ಮಾಪಕ ಅರ್ಬಾಜ್ ಖಾನ್ (Arbaaz Khan) ಅವರ ಪತ್ನಿ, ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಶೂರಾ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ತಮಗೂ ಮತ್ತು ತಮ್ಮ ಪತಿಗೂ ಇರುವ ವಯಸ್ಸಿನ ವ್ಯತ್ಯಾಸದ ಬಗ್ಗೆ ವ್ಯಂಗ್ಯವಾಡಿದ ಟ್ರೋಲರ್‌ಗೆ ಅವರು ಅತ್ಯಂತ ಜಾಣತನದಲ್ಲಿ ಹಾಗೂ ಖಡಕ್ ಆಗಿ ಉತ್ತರ ನೀಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಶೂರಾ ಖಾನ್ (Sshura Khan) ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ವೇಳೆ ನೆಟ್ಟಿಗನೊಬ್ಬ, ಅರ್ಬಾಜ್ ಖಾನ್ ಅವರ ವಯಸ್ಸನ್ನು ಉಲ್ಲೇಖಿಸಿ, ‘ನೀವು ಆ ಮುದುಕನ ಜೊತೆ ಖುಷಿಯಾಗಿದ್ದೀರಾ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾನೆ.

ಈ ಉದ್ಧಟತನದ ಪ್ರಶ್ನೆಗೆ ಕಿಡಿಕಾರದೆ, ಅತ್ಯಂತ ಶಾಂತವಾಗಿ ಮತ್ತು ಹಾಸ್ಯಭರಿತವಾಗಿ ಉತ್ತರಿಸಿದ ಶೂರಾ ಖಾನ್, ‘ನೀವು ನಿಜವಾಗಿಯೂ ಕೇಳ್ತಿದ್ದೀರಾ? ಅವರು ಮುದುಕನಲ್ಲ. ಬದಲಿಗೆ, ಲಿಮಿಟೆಡ್ ಎಡಿಷನ್ ವಿಂಟೇಜ್ ಮಾಡೆಲ್’ ಎಂದು ಬರೆದುಕೊಂಡು ನೆಟ್ಟಿಗನ ಬಾಯಿ ಮುಚ್ಚಿಸಿದ್ದಾರೆ. ಅವರ ಈ ಖಡಕ್ ತಿರುಗೇಟು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದೇ ವೇಳೆ ತಮ್ಮ ವೈವಾಹಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಮಸ್ತ್ ಆಗಿದೆ’ ಎಂದು ಉತ್ತರಿಸಿದ ಶೂರಾ, ಅರ್ಬಾಜ್ ಖಾನ್ ಅವರೊಂದಿಗಿನ ಮೊದಲ ಡೇಟಿಂಗ್ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ. ‘ನಾನು ಅವರೊಂದಿಗೆ ಒಂದು ಶರತ್ತು ಸೋತಿದ್ದೆ, ಹಾಗಾಗಿ ಮೊದಲ ಡೇಟ್‌ನಲ್ಲಿ ಅವರಿಗೆ ನಾನೇ ಡಿನ್ನರ್ ಟ್ರೀಟ್ ನೀಡಬೇಕಾಗಿ ಬಂತು’ ಎಂದು ತಮಾಷೆಯಾಗಿ ನೆನಪಿಸಿಕೊಂಡಿದ್ದಾರೆ.

ತಮ್ಮ ತಾಯ್ತನದ ಜರ್ನಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೂರಾ, ‘ಇದು ಒಂದು ಅದ್ಭುತವಾದ ಪ್ರಯಾಣ. ಇದು ದಣಿವು ತರುತ್ತದೆ, ಜೊತೆಗೆ ಅಷ್ಟೇ ಖುಷಿಯನ್ನೂ ನೀಡುತ್ತದೆ’ ಎಂದಿದ್ದಾರೆ. ಅಲ್ಲದೆ ಅಭಿಮಾನಿಯೊಬ್ಬರು ಮಗಳ ಹೆಸರನ್ನು ಯಾರು ಆಯ್ಕೆ ಮಾಡಿದ್ದು ಎಂದು ಕೇಳಿದ್ದಕ್ಕೆ, ‘ಅರ್ಬಾಜ್ ಅವರ ತಂದೆ ಸಲೀಂ ಖಾನ್ ಅವರೇ ನಮ್ಮ ಮಗಳ ಹೆಸರನ್ನು ಆಯ್ಕೆ ಮಾಡಿದರು’ ಎಂದು ಪ್ರೀತಿಯಿಂದ ತಿಳಿಸಿದ್ದಾರೆ.

ಇದನ್ನೂ ಓದಿ: ಐವತ್ತೇಳನೇ ವಯಸ್ಸಿಗೆ ತಂದೆ ಆದ ಸಲ್ಲು ಸಹೋದರ; ಖುಷಿಯಿಂದ ಹೇಳಿಕೊಂಡ ಅರ್ಬಾಜ್  

ಶೂರಾ ಖಾನ್ ಮತ್ತು ಅರ್ಬಾಜ್ ಖಾನ್ ಅವರು ‘ಪಟ್ನಾ ಶುಕ್ಲಾ’ ಚಿತ್ರದ ಶೂಟಿಂಗ್ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಅಲ್ಲಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಕೆಲಕಾಲ ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟಿದ್ದ ಈ ಜೋಡಿ 2023ರ ಡಿಸೆಂಬರ್ 24ರಂದು ಮುಂಬೈನಲ್ಲಿರುವ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ನಿವಾಸದಲ್ಲಿ ಅತ್ಯಂತ ಸರಳವಾಗಿ ವಿವಾಹವಾದ್ದರು. ಇದು ಅರ್ಬಾಜ್ ಖಾನ್ ಅವರ ಎರಡನೇ ವಿವಾಹವಾಗಿದ್ದು, ಇದಕ್ಕೂ ಮುನ್ನ ಅವರು ನಟಿ ಮಲೈಕಾ ಅರೋರಾ ಅವರನ್ನು ವಿವಾಹವಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us