Haripriya Vasishta Simha: ಸರಳವಾಗಿ ಅಲ್ಲ ಅದ್ಧೂರಿಯಾಗಿ ಸಂಪ್ರದಾಯ ಬದ್ಧವಾಗಿ ಮದ್ವೆ: ಇನ್ವಿಟೇಶನ್​ ತೋರಿಸಿದ ಹರಿಪ್ರಿಯಾ ವಶಿಷ್ಠ ಸಿಂಹ ಜೋಡಿ

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇಂದು(ಜ. 11)  ಸುದ್ದಿಗೋಷ್ಠಿ ಮಾಡುವ ಮೂಲಕ ತಮ್ಮ ಮದುವೆ ಅಪ್​ಡೇಟ್ಸ್​ ನೀಡಿದ್ದು, ಮದುವೆ ಇನ್ವಿಟೇಷನ್​ನನ್ನು ತೋರಿಸಿದ್ದಾರೆ.

Haripriya Vasishta Simha: ಸರಳವಾಗಿ ಅಲ್ಲ ಅದ್ಧೂರಿಯಾಗಿ ಸಂಪ್ರದಾಯ ಬದ್ಧವಾಗಿ ಮದ್ವೆ: ಇನ್ವಿಟೇಶನ್​ ತೋರಿಸಿದ ಹರಿಪ್ರಿಯಾ ವಶಿಷ್ಠ ಸಿಂಹ ಜೋಡಿ
ಹರಿಪ್ರಿಯಾ, ವಶಿಷ್ಠ ಸಿಂಹ
Edited By:

Updated on: Jan 11, 2023 | 10:00 PM

‘ನೀರ್ದೋಸೆ’ ಚೆಲುವೆ ಹರಿಪ್ರಿಯಾ (Haripriya) ಮತ್ತು ಕಂಚಿನ ಕಂಠದ ವಸಿಷ್ಠ ಸಿಂಹ (vasishta simha) ಇಬ್ಬರೂ ಇತ್ತೀಚೆಗೆ ಪ್ರೀತ್ರಿಯಲ್ಲಿ ಬಿದ್ದು, ಬಳಿಕ ಅಲ್ಲಿ ಇಲ್ಲಿ ಅಂತ ಕದ್ದು ಮುಚ್ಚಿ ಓಡಾಡಿಕೊಂಡಿದ್ದರು. ಬಳಿಕ ಇವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ ತಡ ಇಬ್ಬರೂ ತಮ್ಮ ತಮ್ಮ ಕುಟುಂಬಗಳ ಸಮ್ಮುಖದಲ್ಲಿ ಗುಟ್ಟಾಗಿ ಎಂಗೇಜ್ಮೆಂಟ್​ ಮಾಡಿಕೊಂಡಿದ್ದರು. ಈಗ ಸ್ಯಾಂಡಲ್​ವುಡ್​ನ ಲವ್​ ಬರ್ಡ್ಸ್​​ ಹಸೆಮಣೆ (marriage) ಏರಲು ಸಜ್ಜಾಗಿದ್ದಾರೆ. ಈ ಕುರಿತಾಗಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇಂದು(ಜ. 11)  ಸುದ್ದಿಗೋಷ್ಠಿ ಮಾಡುವ ಮೂಲಕ ತಮ್ಮ ಮದುವೆ ಅಪ್​ಡೇಟ್ಸ್​ ನೀಡಿದ್ದು, ಮದುವೆ ಇನ್ವಿಟೇಷನ್​ನನ್ನು ತೋರಿಸಿದ್ದಾರೆ.

ಎರಡು ತಿಂಗಳಿಂದ ಸತತವಾಗಿ ನಾವು ಸಿಕ್ಕಿಲ್ಲ ಅದಕ್ಕೆ ಸಾರಿ ಎಂದು ಮಾತು ಆರಂಭಿಸಿದ ನಟ ವಸಿಷ್ಠ ಸಿಂಹ, ನಾವು ಪ್ರೀತಿಸಿದ್ದು ನಿಮ್ಮ ಬಳಿ ಹಂಚಿಕೊಳ್ಳಬೇಕು ಅಂತ. ಲವ್ ಮ್ಯಾರೇಜ್ ಆಗಿದ್ದು,ಆದರೆ ಇದು ಅರೇಂಜ್ ಮ್ಯಾರೇಜ್ ಆಗಿದೆ. ನಾವು ಹೇಳದೆ ಹೋದ್ರು ನಿಮಗೆ ಗೊತ್ತಾಗಿದೆ ಆಗ ನಾವು ಏನ್ ಹೇಳೋದು. ನಮಗೆ ಟೈಮ್ ಇಲ್ಲ ಹೀಗಾಗಿ ಮೇಡಂ ಸೆಟ್​ಗೆ ಬಂದಿದ್ರು. ಸರಳವಾಗಿ ಅಲ್ಲ, ಅದ್ಧೂರಿಯಾಗಿಶಾಸ್ತ್ರೋಕ್ತವಾಗಿ, ಸಂಪ್ರದಾಯ ಬದ್ಧವಾಗಿ ಮದುವೆ ಆಗುತ್ತೇವೆ. ಮೈಸೂರಿನಲ್ಲಿ ಜ. 26 ರಂದು ಮದುವೆ ನಡೆಯಲಿದ್ದು, ನಂತರ ಬೆಂಗಳೂರಿನ ಗೋಲ್ಡೆನ್ ಫಾರ್ಮ್ ಹೋಟೆಲ್​ನಲ್ಲಿ ಜ. 28ಕ್ಕೆ ಆರತಕ್ಷತೆ ನಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ: ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಡುವಿನ ವಯಸ್ಸಿನ ಅಂತರ ಎಷ್ಟು, ಯಾರು ದೊಡ್ಡವರು? ಇಲ್ಲಿದೆ ಉತ್ತರ

ನಟಿ ಹರಿಪ್ರಿಯಾ ಮಾತನಾಡಿ, ಮೊದಲು ಸಿನಿಮಾ ಬಗ್ಗೆ ಮಾತನಾಡುವಾಗ ಟೆನ್ಷನ್​ ಇತ್ತು. ಈಗ ಈ ವಿಷ್ಯ ಹೇಳೋಕೆ ಖುಷಿ ಆಗ್ತಿದೆ. ನಮ್ಮ ಪ್ರೀತಿ ಎಂಗೇಜ್ ಮೆಂಟ್ ಬಗ್ಗೆ ಹೇಳುವುದಕ್ಕೂ ಮುಂಚೇನೆ ಎಲ್ಲಾ ಕಡೆ ಬಂದಿತ್ತು. ಏರ್ ಪೋರ್ಟ್ ಫೋಟೋ, ಎಂಗೇಜ್ ಮೆಂಟ್ ಫೋಟೋ, ನಾಯಿ‌ ಮರಿದು ಬಂದ್ಹಾಗ, ನಾಯಿ ಮರಿ ಕೊಟ್ಟು ಪಟಾಯಿಸ್ಕೋಂಡೆ ಅಂದ್ರು. ನಾಯಿ ಮರಿ ಕೋಡೋದಕ್ಕೆ ಮುಂಚೇನೆ ಪ್ರೀತಿಯಲ್ಲಿ ಇದ್ವಿ. 2016ರಿಂದ ನಮ್ಮಲ್ಲಿ ಸ್ನೇಹ ಇತ್ತು. ಗೋಧಿ ಬಣ್ಣ ನೋಡಿ ಅವ್ರು ನನಗೆ ತುಂಬಾ ಚೆನ್ನಾಗಿ ಮಾಡಿದ್ದೀರ ಅಂತ ಹೇಳಿದ್ರು. ನನಗಿಂತ ಸೀನಿಯರ್ ಅವ್ರು. ಆವಾಗ ನನಗೆ ಖುಷಿ‌ ಆಯ್ತು. ಅಲ್ಲಿಂದ ನಮ್ಮ ಸ್ನೇಹ ಶುರುವಾಯ್ತು ಎಂದರು.

Haripriya Vasita Simha: ಜಂಟಿ ಸುದ್ದಿಗೋಷ್ಠಿ ನಡೆಸಿ ಮದುವೆಗೆ ಆಹ್ವಾನ ಕೊಟ್ಟ ಸಿಂಹ ಪ್ರಿಯ ಜೋಡಿ | #TV9D

ನಾವು ಲವ್​ನಲ್ಲಿ ಬಿಳೋಕೆ ಲಾಕ್ ಡೌನ್​ನೇ ಕಾರಣ. ನಾನು ಒಮ್ಮೆ ಕಷ್ಟದಲ್ಲಿದ್ದಾಗ ಅವರು ನನ್ನ ಅದ್ರಿಂದ ಆಚೆ ತಂದ್ರು ಮಾನಸಿಕವಾಗಿ ನೋವಾಲ್ಲಿದ್ದಾಗ ಇಬ್ರು ಮಾತನಾಡಿಕೊಂಡ್ವಿ. ಆ ಗೌರವ ಹಾಗೂ ಕಷ್ಟಗಳಿಂದ ಅವ್ರು ಜೊತೆಯಾದ್ರು, ಹೇಗಲು ಕೊಟ್ರು. ಅವರ ಚಿಕ್ಕ ವಯಸ್ಸಿನಲ್ಲಿ ತಾಯಿನ ಕಳ್ಕೊಂಡ್ರು ನಾನು ತಂದೆನಾ ಕಳ್ಕೊಂಡೆ. ನಮ್ಮ ತಂದೆ ಕ್ವಾಲಿಟೀಸ್ ಸಿಂಹನಲ್ಲಿ ತುಂಬಾ ಇದೆ. ಅಪ್ಪ ತಿರ್ಕೋಂಡ ದಿನ ಇವರು ಪ್ರಪೋಸ್ ಮಾಡಿದ್ರು. ಯಾರಿಗೂ ಗೊತ್ತಾಗದ ಹಾಗೇ ಮೆಂಟೈನ್ ಮಾಡೋದು ತುಂಬಾ ಕಷ್ಟ ಇತ್ತು. ಕಡೆಗೂ ಸ್ವಲ್ಪದ್ರಲ್ಲಿ ರನ್ ಔಟ್ ಆದ್ವಿ. 2 ರಿಂದ ಎರಡುವರೆ ವರ್ಷ ಆಯ್ತು ಪ್ರೀತಿಯಲ್ಲಿ ಬಿದ್ದು ಎಂದರು. ಸಿನಿಮಾ ಸಿಕ್ಕಿದ್ರೆ ಖಂಡಿತ ಮುಂದುವರೆಸುತ್ತೇನೆ ಎಂದು ಹರಿಪ್ರಿಯಾ ಹೇಳಿದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:59 pm, Wed, 11 January 23

Loading...
Unable to load recommendations.
Follow Us