Harnaaz Sandhu: ತೂಕ ಹೆಚ್ಚಾಗಿದ್ದಕ್ಕೆ ಟ್ರೋಲ್; ತಮಗಿರುವ ಖಾಯಿಲೆ ಬಗ್ಗೆ ಮೌನ ಮುರಿದ ಭುವನ ಸುಂದರಿ ಹರ್ನಾಜ್ ಸಂಧು

| Updated By: shivaprasad.hs

Updated on: Apr 01, 2022 | 5:58 PM

Celiac Disease: ಭುವನ ಸುಂದರಿ ಹರ್ನಾಜ್ ಸಂಧುಗೆ ಬಾಡಿ ಶೇಮಿಂಗ್ ಎದುರಾಗಿದೆ. ಈ ಬಗ್ಗೆ ಮಾತನಾಡುತ್ತಾ ನಟಿ ತಮಗಿರುವ ಖಾಯಿಲೆಯನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೇ ಈ ಬದಲಾವಣೆಯನ್ನು ಒಪ್ಪಿಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.

Harnaaz Sandhu: ತೂಕ ಹೆಚ್ಚಾಗಿದ್ದಕ್ಕೆ ಟ್ರೋಲ್; ತಮಗಿರುವ ಖಾಯಿಲೆ ಬಗ್ಗೆ ಮೌನ ಮುರಿದ ಭುವನ ಸುಂದರಿ ಹರ್ನಾಜ್ ಸಂಧು
ಹರ್ನಾಜ್ ಸಂಧು
Follow us on

ಕೆಲವು ತಿಂಗಳ ಹಿಂದೆ ಭಾರತದ ಹರ್ನಾಜ್ ಸಂಧು (Harnaaz Sandhu) ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಅಂದಿನಿಂದ ಎಲ್ಲೆಡೆ ಅವರ ಖ್ಯಾತಿ ಹೆಚ್ಚಿದೆ. ಸಹಜವಾಗಿಯೇ ಅವರ ಅಭಿಮಾನಿ ಬಳಗವೂ ಹಿರಿದಾಗಿದೆ. ಪ್ರಶಸ್ತಿ ಗೆದ್ದ ನಂತರ ಕೆಲವು ಸಮಯ ಅವರು ನ್ಯೂಯಾರ್ಕ್​ನಲ್ಲಿದ್ದು, ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈಗ ಅವರು ಭಾರತಕ್ಕೆ ಆಗಮಿಸಿದ್ದಾರೆ. ದೇಶಾದ್ಯಂತ ಪ್ರವಾಸ ಮಾಡುತ್ತಾ ಹಲವಾರು ಕಾರ್ಯಕ್ರಮಗಳಲ್ಲಿ ಹರ್ನಾಜ್ ಸಕ್ರಿಯರಾಗಿದ್ದಾರೆ. ಆದರೆ ಇದೀಗ ಅವರ ಫೋಟೋಗಳನ್ನು ನೋಡಿದ ಅನೇಕರಿಗೆ ಅಚ್ಚರಿಯಾಗಿದೆ. ಕಾರಣ, ಕೆಲವೇ ತಿಂಗಳ ಮೊದಲಿಗಿಂತ ಈಗ ತೂಕ ಹೆಚ್ಚಿಸಿಕೊಂಡಿದ್ದಾರೆ. ಹಲವು ನೆಟ್ಟಿಗರು ಹರ್ನಾಜ್​ರ ಈ ಬದಲಾವಣೆಯನ್ನು ಹೊಗಳಿದ್ದಾರೆ. ಆದರೆ ಕೆಲವಷ್ಟು ಮಂದಿ ಇದನ್ನೇ ಗುರಿಯಾಗಿಸಿ ಟ್ರೋಲ್ ಮಾಡಿದ್ದಾರೆ. ಆನ್​ಲೈನ್​ನಲ್ಲಿ ಹಲವರು ಈ ಬಗ್ಗೆ ಬಾಡಿ ಶೇಮಿಂಗ್ ಕಾಮೆಂಟ್ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳ ಬಗ್ಗೆ ಮೌನ ಮುರಿದಿರುವ ಭುವನ ಸುಂದರಿ, ತಮ್ಮ ದೇಹದ ಬದಲಾವಣೆಗೆ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಪಿಟಿಐ ಜತೆ ಮಾತನಾಡಿದ ಹರ್ನಾಜ್ ಸಂಧು, ತಮಗೆ ಸೆಲಿಯಾಕ್ ಖಾಯಿಲೆಯಿರುವುದನ್ನು (Celiac Disease) ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಗ್ಲುಟನ್‌ (Gluten) ಹೊಂದಿರುವ ಆಹಾರಗಳಿಂದ ಆ ಖಾಯಿಲೆ ಉಂಟಾಗುತ್ತದೆ. ಇದರಿಂದ ರೋಗ ನಿರೋಧಕ ಅಸ್ವಸ್ಥತೆ ಉಂಟಾಗುವುದರಿಂದ ದೇಹ ಬದಲಾವಣೆಯಾಗುತ್ತದೆ ಎಂದಿದ್ಧಾರೆ. ಗ್ಲುಟೆನ್ ಎನ್ನುವುದು ಗೋಧಿ, ಬಾರ್ಲಿ ಮೊದಲಾದವುಗಳಲ್ಲಿ ಕಂಡುಬರುವ ಪ್ರೊಟೀನ್ ಆಗಿದೆ.

‘‘ಈ ಮೊದಲು ನನಗೆ ಬಹಳ ತೆಳ್ಳಗಿದ್ದಿ ಎಂದು ಟೀಕೆ ಮಾಡುತ್ತಿದ್ದರು. ಈಗ ದಪ್ಪವಿದ್ದಿ ಎಂದು ಟೀಕೆ ಮಾಡುತ್ತಾರೆ. ಆದರೆ ಯಾರಿಗೂ ನನಗಿರುವ ಸೆಲಿಯಾಕ್ ಖಾಯಿಲೆಯ ಬಗ್ಗೆ ತಿಳಿದಿಲ್ಲ. ಅದರಿಂದ ನನಗೆ ಬಹಳಷ್ಟು ಆಹಾರ ತಿನ್ನಲು ಸಾಧ್ಯವಿಲ್ಲ’’ ಎಂದಿದ್ದಾರೆ ಹರ್ನಾಜ್ ಸಂಧು.

ಭುವನ ಸುಂದರಿಯಾದ ನಂತರ ವಿವಿಧ ನಗರಗಳಿಗೆ ತೆರಳಿ, ಅಲ್ಲಿ ವಾಸಿಸಬೇಕಾಗುತ್ತದೆ. ‘‘ಬೇರೆ ಬೇರೆ ಪ್ರದೇಶಕ್ಕೆ ಹೋದಾಗ ದೇಹ ಬದಲಾವಣೆಯಾಗುತ್ತದೆ. ಹಾಗೆಯೇ ನ್ಯೂಯಾರ್ಕ್​ಗೆ ನಾನು ಮೊದಲ ಬಾರಿಗೆ ತೆರಳಿದ್ದೆ. ಅದು ಸಂಪೂರ್ಣ ಬೇರೆಯೇ ಪ್ರಪಂಚವಾಗಿತ್ತು’’ ಎಂದಿದ್ದಾರೆ ಹರ್ನಾಜ್ ಸಂಧು.

ಟ್ರೋಲ್​ ಬಗ್ಗೆ ಮಾತನಾಡಿರುವ ಹರ್ನಾಜ್, ‘‘ಹಲವರು ಬಾಡಿ ಶೇಮಿಂಗ್ ಮಾಡುತ್ತಾರೆ. ಭುವನ ಸುಂದರಿ ಸ್ಪರ್ಧೆಯಲ್ಲಿ ನಾವು ಮಹಿಳಾ ಸಬಲೀಕರಣ, ಆತ್ಮವಿಶ್ವಾಸದ ಬಗ್ಗೆ ಮಾತನಾಡುತ್ತೇವೆ. ಹಲವರು ಅವರ ಮನಸ್ಥಿತಿ ಹೇಗಿರುತ್ತದೋ ಹಾಗೆ ಟ್ರೋಲ್ ಮಾಡುತ್ತಾರೆ. ನನ್ನನ್ನು ಬಿಡಿ, ಆದರೆ ದಿನವೂ ಹಲವು ಸಾಮಾನ್ಯರು ಬಾಡಿ ಶೇಮಿಂಗ್​ಗೆ ತುತ್ತಾಗುತ್ತಾರೆ’’ ಎಂದಿದ್ದಾರೆ.

‘‘ಎಲ್ಲರ ದೇಹದಲ್ಲೂ ಬದಲಾವಣೆಯಾಗುವುದಿಲ್ಲ. ನನ್ನ ದೇಹದಲ್ಲಿ ಆಗುತ್ತಿದೆ ಎಂದಾಗ ಅದನ್ನು ಒಪ್ಪಿಕೊಳ್ಳಬೇಕು. ನಮ್ಮನ್ನು ನಾವು ಪ್ರೀತಿಸಬೇಕು’’ ಎಂದು ಸಲಹೆ ನೀಡಿದ್ದಾರೆ ಹರ್ನಾಜ್ ಸಂಧು.

ಸೆಲಿಯಾಕ್ ಖಾಯಿಲೆ ಎಂದರೇನು? 

ಗ್ಲುಟೆನ್ ಹೊಂದಿರುವ ಆಹಾರಗಳಿಂದ ಉಂಟಾಗುವ ರೋಗ ನಿರೋಧಕ ಅಸ್ವಸ್ಥತೆಯನ್ನು ಸೆಲಿಯಾಕ್ ಎನ್ನುತ್ತಾರೆ. ಗೋಧಿ ಹಿಟ್ಟು, ಮೈದಾ, ಬಾರ್ಲಿಯಲ್ಲಿ ಗ್ಲುಟೆನ್ ಹೇರಳವಾಗಿದೆ. ಸೆಲಿಯಾಕ್​ನಿಂದ ತೂಕ ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ದೀರ್ಘಾವಧಿಯಲ್ಲಿ ಇದು ಜೀರ್ಣಕ್ರಿಯೆಗೂ ತೊಂದರೆ ಉಂಟುಮಾಡಬಹುದು. ಈ ಖಾಯಿಲೆಯ ಬಗ್ಗೆ ಹೇಳುತ್ತಾ, ಹೊಟ್ಟೆ ಉಬ್ಬರಿಸುವಿಕೆ, ಮಲಬದ್ಧತೆ, ಹೊಟ್ಟೆ ಉರಿ, ಅಧಿಕ ತೂಕ ನಷ್ಟವನ್ನು ದೀರ್ಘಕಾಲದವರೆಗೆ ಅನುಭವಿಸಿದರೆ ಆಹಾರವನ್ನು ಪರೀಕ್ಷಿಸುವುದು ಮತ್ತು ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಆಹಾರದ ಕ್ರಮವನ್ನು ಸರಿಯಾಗಿಟ್ಟುಕೊಂಡರೆ ಸೆಲಿಯಾಕ್ ಖಾಯಿಲೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದು ಅನುವಂಶಿಕವಾಗಿ ಬರುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ:

Kangana Ranaut: ‘‘ನೀವು ಕಣ್ಣೀರು ಹಾಕುವ ದಿನ ಬಂದಿದೆ’’; ಕಂಗನಾ ಹೀಗೆ ಗಂಭೀರ ಎಚ್ಚರಿಕೆ ನೀಡಿದ್ದು ಯಾರಿಗೆ?

RRR Box Office Collection: ಒಂದೇ ವಾರದಲ್ಲಿ ‘ಆರ್​ಆರ್​ಆರ್​’ ಗಳಿಸಿದ್ದು ಎಷ್ಟು ಕೋಟಿ? ಇಲ್ಲಿದೆ ನೋಡಿ ಬಾಕ್ಸಾಫೀಸ್ ಲೆಕ್ಕಾಚಾರ

Published On - 5:51 pm, Fri, 1 April 22