ಈ ಕಾರಣಗಳಿಗೆ ಬಾಲಿವುಡ್​ನಲ್ಲಿ ಪಕ್ಕಾ ಯಶಸ್ಸು ಪಡೆಯುತ್ತಾರೆ ಶ್ರೀಲೀಲಾ

|

Updated on: Jan 13, 2025 | 12:21 PM

Sreeleela in Bollywood: ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಸಖತ್ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ತಮ್ಮ ಮೊಟ್ಟ ಮೊದಲ ತಮಿಳು ಸಿನಿಮಾ ಅನ್ನು ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಬಾಲಿವುಡ್​ಗೂ ಕಾಲಿಡುತ್ತಿದ್ದಾರೆ. ಈ ಕಾರಣಗಳಿಗಾಗಿ ಶ್ರೀಲೀಲಾ ಬಾಲಿವುಡ್​ನಲ್ಲಿ ಪಕ್ಕಾ ಗೆಲ್ಲಲಿದ್ದಾರೆ.

1 / 7
ಶ್ರೀಲೀಲಾ ಬಹಳ ಒಳ್ಳೆಯ ನಟಿ. ಇಷ್ಟು ವರ್ಷ, ತೆಲುಗು ಚಿತ್ರರಂಗದಲ್ಲಿ ಅವರನ್ನು ಬಹುತೇಕ ಬಳಸಿಕೊಂಡಿರುವುದು ಮರ ಸುತ್ತುವ ಪಾತ್ರಗಳಿಗೆ ಮಾತ್ರ. ಆದರೆ ಕನ್ನಡದ ಕೆಲವು ಸಿನಿಮಾಗಳಲ್ಲಿ ಅವರು ತಮ್ಮ ನಟನಾ ಪ್ರತಿಭೆ ತೋರಿಸಿದ್ದಾರೆ. ಈಗ ಚಿತ್ರೀಕರಣಗೊಳ್ಳುತ್ತಿರುವ ಅವರ ತಮಿಳು ಸಿನಿಮಾ ಸಹ ಅವರಲ್ಲಿರುವ ನಟಿಯನ್ನು ಹೊರತರಲಿದೆ. ಅವರ ಸ್ಕ್ರೀನ್ ಪ್ರೆಸೆನ್ಸ್ ಸಹ ಅದ್ಭುತವಾಗಿದೆ.

2 / 7
ಎಲ್ಲರಿಗೂ ಗೊತ್ತಿರುವಂತೆ ಶ್ರೀಲೀಲಾ ಬಹಳ ಒಳ್ಳೆಯ ನೃತ್ಯಗಾರ್ತಿ. ಬ್ರೇಕ್, ಸಾಲ್ಸಾ ಮಾತ್ರವಲ್ಲದೆ ಅದ್ಭುತವಾದ ಭರತನಾಟ್ಯ ಪಟುವೂ ಹೌದು. ಜೊತೆಗೆ ಹಾಡು, ಸಂಗೀತ ವಾದ್ಯಗಳನ್ನು ಸಹ ನುಡಿಸಬಲ್ಲರು. ಅವರ ನೃತ್ಯ ಪ್ರತಿಭೆ ಬಾಲಿವುಡ್ ನಲ್ಲಿ ಬಹಳ ಉಪಯೋಗಕ್ಕೆ ಬರಲಿದೆ.

3 / 7
ಬಹುತೇಕರಿಗೆ ತಿಳಿದಿರುವಂತೆ ಶ್ರೀಲೀಲಾ ವೈದ್ಯಕೀಯ ವಿದ್ಯಾರ್ಥಿ. ಅವರು ಕೊನೆಯ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದಾರೆ. ಒಳ್ಳೆಯ ವಿದ್ಯಾಭ್ಯಾಸ ನಟಿಯರಿಗೆ ಅಗತ್ಯ. ಒಳಿತು-ಕೆಡುಕುಗಳನ್ನು ಸುಲಭವಾಗಿ ಗುರುತಿಸಬಹುದು. ವಿಧ್ಯಾಭ್ಯಾಸ ಚೆನ್ನಾಗಿರುವ ನಟಿಯರ ಕೊರತೆ ಬಾಲಿವುಡ್​ನಲ್ಲಿದೆ.

4 / 7
ಶ್ರೀಲೀಲಾ ಬಹುಭಾಷಾ ಪಾರಂಗತೆ. ಅವರಿಗೆ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳು ಗೊತ್ತು. ದಕ್ಷಿಣ ಭಾರತದಿಂದ ಬಾಲಿವುಡ್​ಗೆ ಹೋದವರು ಭಾಷಾ ಸಮಸ್ಯೆ ಎದುರಿಸುತ್ತಾರೆ. ಆದರೆ ಶ್ರೀಲೀಲಾಗೆ ಆ ಸಮಸ್ಯೆ ಇಲ್ಲ. ಅಲ್ಲದೆ ಬಹು ಬೇಗ ಅವರು ಹೊಸತನ್ನು ಕಲಿಯುತ್ತಾರೆ. ಹಾಗಾಗಿ ಇದೂ ಸಹ ಅವರಿಗೆ ಸಹಾಯ ಆಗಲಿದೆ.

5 / 7
ಶ್ರೀಲೀಲಾ ಎಲ್ಲ ರೀತಿಯ ಪಾತ್ರಗಳಿಗೆ ಸೂಟ್ ಆಗುವಂಥಹವರು. ಮಾಸ್ ಅಪೀಲ್ ಇರುವ ಪಾತ್ರ, ಗ್ಲಾಮರಸ್ ಪಾತ್ರ, ಸಂಸ್ಕಾರವಂತ ಯುವತಿಯ ಪಾತ್ರ ಹೀಗೆ ಎಲ್ಲ ರೀತಿಯ ಪಾತ್ರಕ್ಕೂ ಸೂಟ್ ಆಗುವ ಮುಖಚಹರೆ ಅವರಿಗಿದೆ. ಬಾಲಿವುಡ್ ಸಿನಿಮಾಗಳಿಗೆ ಹೇಳಿ ಮಾಡಿಸಿದ ಮುಖ ಚಹರೆ ಅವರದ್ದು.

6 / 7
ಶ್ರೀಲೀಲಾರ ಫ್ಯಾಷನ್ ಸೆನ್ಸ್ ಬಹಳ ಚೆನ್ನಾಗಿದೆ. ಲಂಗಾ ದಾವಣಿಗೂ ಸೈ, ಪಾರ್ಟಿ ಡ್ರೆಸ್​ಗೂ ಸೈ. ಎಂಥಹಾ ಉಡುಗೆ ತೊಟ್ಟರು ಶ್ರೀಲೀಲಾ ಸುಂದರವಾಗಿ ಕಾಣುತ್ತಾರೆ. ಫ್ಯಾಷನ್ ಮೇಲೆ ಹೆಚ್ಚು ಅವಲಂಬಿತವಾಗಿರುವ ಬಾಲಿವುಡ್​ಗೆ ಶ್ರೀಲೀಲಾ ಚೆನ್ನಾಗಿ ಹೊಂದಿಕೊಳ್ಳುತ್ತಾರೆ.

7 / 7
ಶ್ರೀಲೀಲಾ ಒಳ್ಳೆಯ ಸಮಾಜ ಸೇವಕಿಯೂ ಹೌದು. ಈಗಾಗಲೇ ಇಬ್ಬರು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡಿರುವ ಶ್ರೀಲೀಲಾ ಅವರ ವಿದ್ಯಾಭ್ಯಾಸದ ಖರ್ಚನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ. ಇಂಥಹಾ ಸಾಮಾಜಿಕ ಕಾರ್ಯಗಳನ್ನು ಮಾಡುವ ನಟಿಯರನ್ನು ಬಾಲಿವುಡ್ ಸಿನಿಮಾ ಪ್ರೇಮಿಗಳು ಬಹಳ ಮೆಚ್ಚುತ್ತಾರೆ.

Published On - 12:20 pm, Mon, 13 January 25