Holi 2024: ಹೋಳಿ ಸಂಭ್ರಮಾಚರಣೆ: ಬಣ್ಣದ ವಿಶೇಷತೆ ಬಣ್ಣಿಸುವ ಹಾಡುಗಳಿವು..

ಸಿನಿಮಾಗಳಲ್ಲಿ ಹೋಳಿಯನ್ನು ಪ್ರತಿನಿಧಿಸುವ ಅನೇಕ ಹಾಡುಗಳು ಬಂದು ಹೋಗಿವೆ. ಈ ಹಾಡುಗಳು ಹೋಳಿಯ ವಿಶೇಷತೆ, ಅವುಗಳ ಆಚರಣೆಯ ಹಿಂದಿನ ಕಾರಣವನ್ನು ವಿವರಿಸಿದೆ. ಈ ರೀತಿ ಬಂದು ಹೋದ ಹಾಡುಗಳು ಯಾವವು? ಈ ಹಾಡು ಯಾವ ಸಿನಿಮಾದ್ದು? ಆ ಚಿತ್ರದಲ್ಲಿ ನಟಿಸಿದ್ದು ಯಾರು ಎನ್ನುವ ಬಗ್ಗೆ ಇಲ್ಲಿದೆ ವಿವರ.

Holi 2024: ಹೋಳಿ ಸಂಭ್ರಮಾಚರಣೆ: ಬಣ್ಣದ ವಿಶೇಷತೆ ಬಣ್ಣಿಸುವ ಹಾಡುಗಳಿವು..
ಹೋಳಿ 2024
Edited By:

Updated on: Mar 25, 2024 | 8:11 AM

ಹೋಳಿ (Holi 2024) ಆಚರಣೆ ರಾಜ್ಯಾದ್ಯಂತ ಜೋರಾಗಿದೆ. ಬಣ್ಣದ ಓಕುಳಿಯಲ್ಲಿ ಎಲ್ಲರೂ ಮಿಂದೇಳುತ್ತಿದ್ದಾರೆ. ಸಾಮಾನ್ಯರಿಂದ ಸೆಲೆಬ್ರಿಟಿವರೆಗೆ ಈ ಹಾಡು ವಿಶೇಷ ಎನಿಸಿಕೊಂಡಿದೆ. ಸಿನಿಮಾ ರಂಗಕ್ಕೂ ಹೋಳಿಗೂ ಒಂದು ನಂಟಿದೆ. ಅನೇಕ ಸಿನಿಮಾಗಳಲ್ಲಿ ಹೋಳಿಯನ್ನು ಪ್ರತಿನಿಧಿಸುವ ಅನೇಕ ಹಾಡುಗಳು ಬಂದು ಹೋಗಿವೆ. ಈ ಹಾಡುಗಳು ಹೋಳಿಯ ವಿಶೇಷತೆ, ಅವುಗಳ ಆಚರಣೆಯ ಹಿಂದಿನ ಕಾರಣವನ್ನು ವಿವರಿಸಿದೆ. ಈ ರೀತಿ ಬಂದು ಹೋದ ಹಾಡುಗಳು ಯಾವವು? ಈ ಹಾಡು ಯಾವ ಸಿನಿಮಾದ್ದು? ಆ ಚಿತ್ರದಲ್ಲಿ ನಟಿಸಿದ್ದು ಯಾರು ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ಹೋಳಿ ಹೋಳಿ..’

2000ನೇ ಇಸ್ವಿಯಲ್ಲಿ ರಿಲೀಸ್ ಆದ ‘ಪ್ರೀತ್ಸೆ’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಹಾಗೂ ಉಪೇಂದ್ರ ಒಟ್ಟಾಗಿ ನಟಿಸಿದ್ದರು. ರಾಕ್​ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾದ ‘ಹೋಳಿ ಹೋಳಿ..’ ಹಾಡು ಗಮನ ಸೆಳೆದಿದೆ. ಹೋಳಿ ವಿಶೇಷತೆಯನ್ನು ಈ ಹಾಡು ವಿವರಿಸಿದೆ.

‘ರಂಗಿನ ರಂಗು..’

ದರ್ಶನ್ ನಟನೆಯ ‘ಕಿಟ್ಟಿ ಸಿನಿಮಾ 2002ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ದರ್ಶನ್, ಭವ್ಯಾ, ಅವಿನಾಶ್ ಮೊದಲಾದವರು ನಟಿಸಿದ್ದರು. ಈ ಸಿನಿಮಾದ ‘ರಂಗಿನ ರಂಗು..’ ಹಾಡು ಗಮನ ಸೆಳೆದಿದೆ. ಹೋಳಿ ಆಚರಣೆಯ ವಿಶೇಷತೆಯನ್ನು ಈ ಹಾಡು ಹೇಳಿದೆ.

ಹೋಳಿ ಹುಣ್ಣಿಮೆ ಹಬ್ಬಕ್ಕ

‘ದೇಸಾಯಿ’ ಸಿನಿಮಾದಲ್ಲಿ ಬರುವ ‘ಹೋಳಿ ಹುಣ್ಣಿಮೆ ಹಬ್ಬಕ್ಕ..’ ಹಾಡು ಮೆಚ್ಚುಗೆ ಪಡೆದಿದೆ. ಹೋಳಿ ಹುಣ್ಣಿಮೆಯ ವಿಶೇಷತೆಗಳನ್ನು ಈ ಹಾಡು ಬಣ್ಣಿಸಿದೆ. ಹಬ್ಬದ ಆಚರಣೆಯ ಹಿನ್ನೆಲೆಯನ್ನು ವಿವರಿಸಲಾಗಿದೆ.

ರಂಗೇರೋ ಹೋಳಿ

ರವಿಚಂದ್ರನ್ ನಟನೆಯ ‘ಪುಟ್ನಂಜ’ ಸಿನಿಮಾದ ‘ರಂಗೇರೋ ಹೋಳಿ..’ ಕೇಳುಗರಿಂದ ಮೆಚ್ಚುಗೆ ಪಡೆದಿದೆ. ಈ ಹಾಡು ಸಖತ್ ರೊಮ್ಯಾಂಟಿಕ್ ಆಗಿ ಮೂಡಿ ಬಂದಿದೆ. ಬಣ್ಣದ ವಿಶೇಷತೆಯನ್ನು ಬಣ್ಣಿಸುವ ರೀತಿಯಲ್ಲಿ ಈ ಹಾಡು ಇದೆ.

‘ಉಗ್ರಂ ವೀರಂ..’

ಶ್ರೀಮುರಳಿ ನಟನೆಯ ‘ಉಗ್ರಂ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ‘ಉಗ್ರಂ ವೀರಂ’ ಹಾಡು ಹೋಳಿ ಹಿನ್ನೆಲೆಯಲ್ಲಿ ಮೂಡಿ ಬಂದಿದೆ. ಮುಗೋರ್​​ನಲ್ಲಿ ನಡೆಯುವ ಹೋಳಿ ಆಚರಣೆಯನ್ನು ವಿವರಿಸುವ ರೀತಿಯಲ್ಲಿ ಈ ಹಾಡು ಮೂಡಿ ಬಂದಿತ್ತು. ಹಾಡಿನುದ್ದಕ್ಕೂ ಬಣ್ಣ-ರಕ್ತವನ್ನು ತೋರಿಸಲಾಗಿದೆ.

ಬಣ್ಣ ನನ್ನ ಒಲವಿನ ಬಣ್ಣ

‘ಬಂಧನ’ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ಸುಹಾಸಿನಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರದ ‘ಬಣ್ಣ ನನ್ನ ಒಲವಿನ ಬಣ್ಣ’ ಫೇಮಸ್ ಆಗಿದೆ. ಇದು ಹೋಳಿ ಗೀತೆ ಅಲ್ಲ. ಆದರೆ, ಬಣ್ಣದ ವಿಶೇಷತೆಯನ್ನು ಒಲವಿಗೆ ಸಂಪರ್ಕಿಸಿ ಮಾಡಿದ ಹಾಡು ಇದಾಗಿದೆ. ಹೋಳಿ ಸಂದರ್ಭದಲ್ಲಿ ಜನರು ಈ ಹಾಡನ್ನು ನೆನಪಿಸಿಕೊಳ್ಳುತ್ತಾರೆ.

ರಂಗ್ ಬರ್ಸೆ

ಹಿಂದಿಯ ‘ರಂಗ್ ಬರ್ಸೆ’ ಹಾಡು ಸಾಕಷ್ಟು ಗಮನ ಸೆಳೆದಿದೆ. ಅಮಿತಾಭ್ ಬಚ್ಚನ್ ನಟನೆಯ ‘ಸಿಲ್ಸಿಲಾ’ ಚಿತ್ರದ ಈ ಹಾಡು ಈಗಲೂ ಕೇಳುಗರ ಫೇವರಿಟ್ ಎನಿಸಿಕೊಂಡಿದೆ.

ಬಲಮ್ ಪಿಚಕಾರಿ

ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಬಲಮ್ ಪಿಚಕಾರಿ’ ಹಾಡು ಸೂಪರ್ ಹಿಟ್ ಎನಿಸಿಕೊಂಡಿದೆ. ‘ಯೇ ಜವಾನಿ ಹೇ ದಿವಾನಿ’ ಸಿನಿಮಾದ ಈ ಹಾಡು ಭರ್ಜರಿ ಮೆಚ್ಚುಗೆ ಪಡೆದಿದೆ. ಹೋಳಿ ಆಚರಣೆಯ ಖುಷಿ ಹೇಗಿರುತ್ತದೆ ಎಂಬುದನ್ನು ಈ ಹಾಡು ತೋರಿಸಿದೆ.

ಇದನ್ನೂ ಓದಿ: ಮೆಟ್ರೋದಲ್ಲಿ ಯುವತಿಯರಿಬ್ಬರ ಹೋಳಿ ಆಚರಣೆ; ಅಸಭ್ಯ ವರ್ತನೆಗೆ ಪ್ರಯಾಣಿಕರು ಕಿಡಿ

ಜೈ ಜೈ ಶಿವ ಶಂಕರ್

ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಅವರು ‘ವಾರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರದ ‘ಜೈ ಜೈ ಶಿವಶಂಕರ್’ ಸಿನಿಮಾ ಹಾಡು ಸಾಕಷ್ಟು ಗಮನ ಸೆಳೆದಿದೆ. ಈ ಹಾಡು ಸೂಪರ್ ಹಿಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 8:10 am, Mon, 25 March 24

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us