ಬಜೆಟ್ ಏಳು ಲಕ್ಷ ಗಳಿಸಿದ್ದು 400 ಕೋಟಿ, ಯಾವುದು ಈ ಬ್ಲಾಕ್ ಬಸ್ಟರ್ ಸಿನಿಮಾ

Hollywood movie: ಸಾವಿರಾರು ಕೋಟಿ ಹಾಕಿ ನಿರ್ಮಿಸಿದ ಸಿನಿಮಾ ಸಹ ಬಾಕ್ಸ್ ಆಫೀಸ್​​ನಲ್ಲಿ ನೆಲ ಕಚ್ಚಿದ ಹಲವಾರು ಉದಾಹರಣೆ ಇದೆ. ತೀರ ಕಡಿಮೆ ಬಜೆಟ್​​ನಲ್ಲಿ ನಿರ್ಮಿಸಿದ ಸಿನಿಮಾಗಳು ದೊಡ್ಡ ಹಿಟ್ ಆದ ಸಾಕಷ್ಟು ಉದಾಹರಣೆ ಇವೆ. ಇದೀಗ ಅಂಥಹುದೇ ಉದಾಹರಣೆಗಳ ಪಟ್ಟಿಗೆ ಮತ್ತೊಂದು ಸಿನಿಮಾ ಸೇರ್ಪಡೆ ಆಗಿದೆ. ಸಿನಿಮಾದ ಹೆಸರು ‘ಒಬ್​​ಸೆಷನ್’.

ಬಜೆಟ್ ಏಳು ಲಕ್ಷ ಗಳಿಸಿದ್ದು 400 ಕೋಟಿ, ಯಾವುದು ಈ ಬ್ಲಾಕ್ ಬಸ್ಟರ್ ಸಿನಿಮಾ
Obsession

Updated on: May 23, 2026 | 6:00 PM

ರಾತ್ರೋರಾತ್ರಿ ಸಾಮಾನ್ಯ ವ್ಯಕ್ತಿಯೊಬ್ಬ ಸ್ಟಾರ್ ಆಗುವುದು, ಸ್ಟಾರ್ ಆಗಿ ಮೆರೆದವರು ಮೂಲೆಗುಂಪಾಗುವುದು ಸಿನಿಮಾ ರಂಗದಲ್ಲಿ ತೀರಾ ಸಾಮಾನ್ಯ. ಇದು ಪ್ರತಿಭೆ, ಶ್ರಮದ ಜೊತೆಗೆ ಅದೃಷ್ಟವೂ ಬೆರೆತಿರುವ ಉದ್ಯಮ. ಸಾವಿರಾರು ಕೋಟಿ ಹಾಕಿ ನಿರ್ಮಿಸಿದ ಸಿನಿಮಾ ಸಹ ಬಾಕ್ಸ್ ಆಫೀಸ್​​ನಲ್ಲಿ ನೆಲ ಕಚ್ಚಿದ ಹಲವಾರು ಉದಾಹರಣೆ ಇದೆ. ತೀರ ಕಡಿಮೆ ಬಜೆಟ್​​ನಲ್ಲಿ ನಿರ್ಮಿಸಿದ ಸಿನಿಮಾಗಳು ದೊಡ್ಡ ಹಿಟ್ ಆದ ಸಾಕಷ್ಟು ಉದಾಹರಣೆ ಇವೆ. ಇದೀಗ ಅಂಥಹುದೇ ಉದಾಹರಣೆಗಳ ಪಟ್ಟಿಗೆ ಮತ್ತೊಂದು ಸಿನಿಮಾ ಸೇರ್ಪಡೆ ಆಗಿದೆ. ಸಿನಿಮಾದ ಹೆಸರು ‘ಒಬ್​​ಸೆಷನ್’.

‘ಒಬ್​ಸೆಷನ್’ ಎಂಬುದು ಹಾಲಿವುಡ್​​ನಲ್ಲಿ ಇತ್ತೀಚೆಗೆ ಬಿಡುಗಡೆ ಆದ ಹಾರರ್ ಸಿನಿಮಾ. ‘ಮೈಖಲ್’, ‘ಸ್ಟ್ರೀಟ್ ಫೈಟರ್’, ‘ದಿ ಡೆವಿಲ್ ವೇರ್ಸ್ ಪ್ರಾಡಾ 2’ ಅಂಥಹಾ ಸಿನಿಮಾಗಳ ನಡುವೆಯೂ ಭಾರಿ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಬಲು ವೇಗದಿಂದ ಮುನ್ನುಗ್ಗುತ್ತಿದ್ದು, ಆದಷ್ಟು ಶೀಘ್ರವೇ ಈ ಸಿನಿಮಾದ ಗಳಿಕೆ 1000 ಕೋಟಿ ದಾಟಲಿದೆ ಎನ್ನಲಾಗುತ್ತಿದೆ. ಅಂದಹಾಗೆ ಈ ಸಿನಿಮಾದ ಬಜೆಟ್ ಎಂಟು ಲಕ್ಷ ರೂಪಾಯಿಗೂ ಕಡಿಮೆ. ಹಾಲಿವುಡ್​​ನಲ್ಲಿ ಸೂಪರ್ ಹಿಟ್ ಆದ ಅತ್ಯಂತ ಕಡಿಮೆ ಬಜೆಟ್​​ನ ಹಾರರ್ ಸಿನಿಮಾಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ ಈ ಸಿನಿಮಾ.

‘ಒಬ್ಸೆಷನ್ಸ್’ ಸಿನಿಮಾವನ್ನು ಯೂಟ್ಯೂಬರ್ ಕರ್ರಿ ಬಾಕರ್ ನಿರ್ದೇಶನ ಮಾಡಿದ್ದಾರೆ. ‘ಸಿಮನ್ಸ್’ ಶೋ ನೋಡಿ ಅದರಿಂದ ಸ್ಪೂರ್ತಿ ಪಡೆದು ‘ಒಬ್ಸೆಷನ್ಸ್’ ಕತೆಯನ್ನು ಕರ್ರಿ ಬಾಕರ್ ಬರೆದಿದ್ದರು. ಕೇವಲ 75 ಸಾವಿರ ಡಾಲರ್ (ಸುಮಾರು 7.30 ಲಕ್ಷ ರೂಪಾಯಿ) ಬಜೆಟ್​​ನಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾವು ಹಾರರ್ ಕತೆಯನ್ನು ಒಳಗೊಂಡಿದೆ. ಕೇಳಿದ್ದನ್ನು ನಿಜ ಮಾಡುವ ಬೊಂಬೆ ಆ ನಂತರ ಸಿನಿಮಾದ ನಾಯಕ ಮತ್ತು ಇತರೆ ಪಾತ್ರಗಳಿಗೆ ತರುವ ತೊಂದರೆಗಳನ್ನು ಸಿನಿಮಾದ ಕತೆ ಒಳಗೊಂಡಿದೆ.

ಇದನ್ನೂ ಓದಿ:‘ಮೈಕಲ್’ ಬಾಕ್ಸ್ ಆಫೀಸ್: ಏಳು ದಿನಕ್ಕೆ ದಾಖಲೆ ಕಲೆಕ್ಷನ್, ಭಾರತದಲ್ಲೆಷ್ಟು?

75 ಸಾವಿರ ಡಾಲರ್​​ ನಲ್ಲಿ ನಿರ್ಮಾಣ ಮಾಡಲಾಗಿರುವ ಈ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್​​ನಲ್ಲಿ 38 ಮಿಲಿಯನ್ ಡಾಲರ್​​ಗೂ ಹೆಚ್ಚು (ಸುಮಾರು 400 ಕೋಟಿ) ಗಳಿಕೆ ಮಾಡಿದ್ದು, ಬಾಕ್ಸ್ ಆಫೀಸ್​​ನಲ್ಲಿ ಬಲು ವೇಗವಾಗಿ ಮುನ್ನುಗ್ಗುತ್ತಿದೆ. ಸಿನಿಮಾ ಆದಷ್ಟು ಬೇಗ 1000 ಕೋಟಿ ಗಳಿಕೆ ದಾಟುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

ಈ ಹಿಂದೆ ಬ್ಲಾಕ್ ಬಸ್ಟರ್ ಆಗಿದ್ದ ‘ಪ್ಯಾರಾ ನಾರ್ಮಲ್ ಆಕ್ಟಿವಿಟಿ’ ಹೆಸರಿನ ಹಾಲಿವುಡ್ ಹಾರರ್ ಸಿನಿಮಾ ಕೇವಲ 15 ಸಾವಿರ ಡಾಲರ್​​ನಲ್ಲಿ ನಿರ್ಮಾಣಗೊಂಡಿತ್ತು ಆ ಸಿನಿಮಾ 100 ಮಿಲಿಯನ್ ಡಾಲರ್​​ಗಳು ಹೆಚ್ಚು ಅಂದರೆ ಸುಮಾರು 10 ಸಾವಿರ ಕೋಟಿ ಗಳಿಕೆ ಮಾಡಿತ್ತು. ಇದೀಗ ಮತ್ತೆ ಅದೇ ದಾಖಲೆಯತ್ತ ಮುನ್ನುಗ್ಗುತ್ತಿದೆ ‘ಒಬ್​​ಸೆಷನ್’ ಸಿನಿಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us