AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರುತ್ತಿದೆ ವಿವಾದಾತ್ಮಕ ಶೋ, ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ ಸಮಯ್ ರೈನಾ

India Got Latent season 2: ‘ಇಂಡಿಯಾ ಗಾಟ್ ಲೇಟೆಂಟ್’ ಸೀಸನ್ 2 ಬರಲಿದೆ ಎಂದು ಈ ಹಿಂದೆಯೇ ಸಮಯ್ ರೈನಾ ಘೋಷಿಸಿದ್ದರು. ಕೆಲ ವಾರಗಳ ಹಿಂದೆ ಶೋನ ಚಿತ್ರೀಕರಣದ ಫೋಟೊ ಸಹ ಲೀಕ್ ಆಗಿತ್ತು. ಇತ್ತೀಚೆಗಷ್ಟೆ ಈ ಶೋ ಕುರಿತ ಪೋಸ್ಟ್ ಒಂದನ್ನು ನೆಟ್​​ಫ್ಲಿಕ್ಸ್ ಹಂಚಿಕೊಳ್ಳುವ ಮೂಲಕ ಈ ಬಾರಿ ‘ಇಂಡಿಯಾ ಗಾಟ್ ಲೇಟೆಂಟ್ 2’ ನೆಟ್​​ಫ್ಲಿಕ್ಸ್​​ನಲ್ಲಿ ಪ್ರಸಾರ ಆಗಲಿದೆ ಎಂಬ ಸುಳಿವು ನೀಡಿತ್ತು. ಆದರೆ ಇದರಿಂದ ಸಮಯ್ ರೈನಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.

ಮತ್ತೆ ಬರುತ್ತಿದೆ ವಿವಾದಾತ್ಮಕ ಶೋ, ಅಭಿಮಾನಿಗಳಿಗೆ ನಿರಾಸೆ ಮಾಡಲಿಲ್ಲ ಸಮಯ್ ರೈನಾ
India Got Latent
ಮಂಜುನಾಥ ಸಿ.
|

Updated on: Jun 19, 2026 | 7:38 PM

Share

‘ಇಂಡಿಯಾ ಗಾಟ್ ಲೇಟೆಂಟ್’ (India Got Latent) ಒಂದು ವಿಚಿತ್ರ ಹಾಸ್ಯಮಯ ಶೋ ಯೂಟ್ಯೂಬ್​​ ನಲ್ಲಿ ಭಾರಿ ಜನಪ್ರಿಯತೆ ಪಡೆದಿತ್ತು. ಯೂಟ್ಯೂಬರ್ ಸಮಯ್ ರೈನಾ ಶುರು ಮಾಡಿದ್ದ ಈ ಶೋಗೆ ದೇಶ-ವಿದೇಶಗಳಲ್ಲಿ ಭಾರಿ ಜನಪ್ರಿಯತೆ ಧಕ್ಕಿತ್ತು. ಆದರೆ ಇದೇ ಶೋನಲ್ಲಿ ಮಾಡಲಾದ ಒಂದು ಅತ್ಯಂತ ಅಶ್ಲೀಲ ಜೋಕಿನ ಕಾರಣದಿಂದಾಗಿ ಶೋ ವಿವಾದಕ್ಕೆ ಸಿಲುಕಿತು. ಸಮಯ್ ರೈನಾ, ರಣ್ವೀರ್ ಅಲ್ಹಾಬಾದಿಯಾ ಸೇರಿದಂತೆ ಹಲವರ ವಿರುದ್ಧ ಎಫ್​​ಐಆರ್ ದಾಖಲಾಯ್ತು. ವಿಚಾರಣೆಗಳು ನಡೆದವು. ಶೋ ನಿಂತು ಹೋಗಿತ್ತು. ಆದರೆ ಇದೀಗ ಶೋ ಮತ್ತೆ ಬರುತ್ತಿದೆ. ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್​​ನ ಎರಡನೇ ಸೀಸನ್ ತರುತ್ತಿದ್ದಾರೆ. ಈ ಬಗ್ಗೆ ಖುದ್ದು ಸಮಯ್ ರೈನಾ ಅಧಿಕೃತ ಘೋಷಣೆ ಮಾಡಿದ್ದಾರೆ.

‘ಇಂಡಿಯಾ ಗಾಟ್ ಲೇಟೆಂಟ್’ ಸೀಸನ್ 2 ಬರಲಿದೆ ಎಂದು ಈ ಹಿಂದೆಯೇ ಸಮಯ್ ರೈನಾ ಘೋಷಿಸಿದ್ದರು. ಕೆಲ ವಾರಗಳ ಹಿಂದೆ ಶೋನ ಚಿತ್ರೀಕರಣದ ಫೋಟೊ ಸಹ ಲೀಕ್ ಆಗಿತ್ತು. ಇತ್ತೀಚೆಗಷ್ಟೆ ಈ ಶೋ ಕುರಿತ ಪೋಸ್ಟ್ ಒಂದನ್ನು ನೆಟ್​​ಫ್ಲಿಕ್ಸ್ ಹಂಚಿಕೊಳ್ಳುವ ಮೂಲಕ ಈ ಬಾರಿ ‘ಇಂಡಿಯಾ ಗಾಟ್ ಲೇಟೆಂಟ್ 2’ ನೆಟ್​​ಫ್ಲಿಕ್ಸ್​​ನಲ್ಲಿ ಪ್ರಸಾರ ಆಗಲಿದೆ ಎಂಬ ಸುಳಿವು ನೀಡಿತ್ತು. ಆದರೆ ಇದರಿಂದ ಸಮಯ್ ರೈನಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಯೂಟ್ಯೂಬ್​​ನಲ್ಲಿ ಶೋ ಅನ್ನು ರಿಲೀಸ್ ಮಾಡಬೇಕು ಎಂದು ಒತ್ತಾಯಿಸಿದ್ದರು. ಅಭಿಮಾನಿಗಳ ಮನವಿಗೆ ಸಮಯ್ ರೈನಾ ಸ್ಪಂದಿಸಿದ್ದಾರೆ.

ಇದನ್ನೂ ಓದಿ:‘ಎಲ್ಲರೂ ಕಲ್ಲು ಹೊಡೆಯುತ್ತಾರೆ’; ಕಪಿಲ್ ಶರ್ಮಾ ಶೋನಲ್ಲಿ ಸಮಯ್ ರೈನಾ ನೇರ ಮಾತು

ಇದೀಗ ‘ಇಂಡಿಯಾ ಗಾಟ್ ಲೇಟೆಂಟ್ 2’ ಕುರಿತಂತೆ ವಿಡಿಯೋ ಒಂದನ್ನು ಸಮಯ್ ರೈನಾ ಮತ್ತು ನೆಟ್​​ಫ್ಲಿಕ್ಸ್​ ಜಂಟಿಯಾಗಿ ಬಿಡುಗಡೆ ಮಾಡಿದ್ದು, ‘ಇಂಡಿಯಾ ಗಾಟ್ ಲೇಟೆಂಟ್ 2’ ಶೋ ಈ ನೆಟ್​​ಫ್ಲಿಕ್ಸ್​ನ ಜೊತೆಗೆ ಯೂಟ್ಯೂಬ್​​ನಲ್ಲಿಯೂ ಬಿಡುಗಡೆ ಆಗಲಿದೆ. ಅದೂ ಎರಡರಲ್ಲೂ ಒಟ್ಟಿಗೆ ಮತ್ತು ಒಂದೇ ಕಂಟೆಂಟ್ ರಿಲೀಸ್ ಆಗಲಿದೆ. ಆದರೆ ಯೂಟ್ಯೂಬ್​​ನಲ್ಲಿ ಜಾಹೀರಾತು ಇರಲಿದೆ, ನೆಟ್​​ಫ್ಲಿಕ್ಸ್​ನಲ್ಲಿ ಜಾಹೀರಾತು ಇರುವುದಿಲ್ಲ. ಇದರ ಜೊತೆಗೆ ನೆಟ್​​ಫ್ಲಿಕ್ಸ್​ನಲ್ಲಿ ಸಮಯ್ ರೈನಾ ಅವರ ಕಾಮಿಡಿ ಸ್ಪೆಷಲ್ ಒಂದು ಸಹ ಪ್ರತ್ಯೇಕವಾಗಿ ಬಿಡುಗಡೆ ಆಗಲಿದೆಯಂತೆ. ಶೋ ಬರಲಿದೆ ಎಂದು ಸಮಯ್ ರೈನಾ ಘೋಷಿಸಿದ್ದಾರಾದರೂ ದಿನಾಂಕ ಪ್ರಕಟಿಸಿಲ್ಲ.

ಕಳೆದ ಸೀಸನ್​​ನಲ್ಲಿ ಅಶ್ಲೀಲ ಜೋಕು ಹೇಳಿದ್ದಕ್ಕಾಗಿ ಶೋ ವಿವಾದಕ್ಕೆ ಗುರಿಯಾಗಿತ್ತು. ಹಾಗಾಗಿ ಈ ಬಾರಿ ಸಮಯ್ ರೈನಾ, ಶೋನ ಫಾರ್ಮ್ಯಾಟ್​​ನಲ್ಲಿ ಕೆಲವಾರು ಬದಲಾವಣೆಗಳನ್ನು ಮಾಡಿದ್ದಾರಂತೆ. ಅಶ್ಲೀಲತೆ ಕಡಿಮೆ ಮಾಡಿ ಶುದ್ಧ ಹಾಸ್ಯವಷ್ಟಕ್ಕೆ ಈ ಬಾರಿ ಒತ್ತು ನೀಡಲಾಗುತ್ತಿದೆಯಂತೆ. ಅಂದಹಾಗೆ ಎರಡನೇ ಸೀಸನ್​​ನ ಮೊದಲ ಅತಿಥಿಗಳಾಗಿ ಆಲಿಯಾ ಭಟ್ ಮತ್ತು ಶರ್ವರಿ ವಾಘ್ ಅವರು ಶೋಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಇವರು ತಮ್ಮ ಹೊಸ ಸಿನಿಮಾ ‘ಆಲ್ಫಾ’ನ ಪ್ರಚಾರವನ್ನು ಇಂಡಿಯಾ ಗಾಟ್ ಲೇಟೆಂಟ್ 2 ವೇದಿಕೆಯಿಂದಲೇ ಶುರು ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ