AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲರೂ ಕಲ್ಲು ಹೊಡೆಯುತ್ತಾರೆ’; ಕಪಿಲ್ ಶರ್ಮಾ ಶೋನಲ್ಲಿ ಸಮಯ್ ರೈನಾ ನೇರ ಮಾತು

ನೆಟ್‌ಫ್ಲಿಕ್ಸ್‌ನ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ನಲ್ಲಿ ಕಾಮಿಡಿಯನ್ ಸಮಯ್ ರೈನಾ ಮತ್ತು ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷದ ವಿವಾದದ ಕುರಿತು ಕಪಿಲ್ ತಮಾಷೆ ಮಾಡಿದ್ದಾರೆ. ನವಜೋತ್ ಸಿಂಗ್ ಸಿಧು, ಸಮಯ್ ಅವರ ಚುರುಕು ಹಾಸ್ಯವನ್ನು ಶ್ಲಾಘಿಸಿದ್ದಾರೆ. ಈ ವಿಶೇಷ ಸಂಚಿಕೆ ಇಂದು ರಾತ್ರಿ 8 ಗಂಟೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.

‘ಎಲ್ಲರೂ ಕಲ್ಲು ಹೊಡೆಯುತ್ತಾರೆ’; ಕಪಿಲ್ ಶರ್ಮಾ ಶೋನಲ್ಲಿ ಸಮಯ್ ರೈನಾ ನೇರ ಮಾತು
ಸಮಯ್ ರೈನಾ-ರಣವೀರ್
ರಾಜೇಶ್ ದುಗ್ಗುಮನೆ
|

Updated on: May 02, 2026 | 1:26 PM

Share

‘ಇಂಡಿಯಾಸ್ ಗಾಟ್ ಲೇಟೆಂಟ್’ ವಿವಾದದ ಒಂದು ವರ್ಷದ ನಂತರ, ಖ್ಯಾತ ಕಾಮಿಡಿಯನ್ ಸಮಯ್ ರೈನಾ ಮತ್ತು ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಈಗ ನೆಟ್‌ಫ್ಲಿಕ್ಸ್‌ನ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಒಟ್ಟಿಗೆ ವೇದಿಕೆ ಏರಿದ್ದಾರೆ. ಇಂದು (ಮೇ 2) ರಾತ್ರಿ 8 ಗಂಟೆಗೆ ಪ್ರಸಾರವಾಗಲಿರುವ ಈ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ಕಪಿಲ್ ಶರ್ಮಾ ಅವರು ಕಳೆದ ವರ್ಷದ ವಿವಾದದ ಕುರಿತು ರಣವೀರ್ ಅವರನ್ನು ತಮಾಷೆಯಾಗಿ ಕಾಲೆಳೆದಿದ್ದಾರೆ. ಇದು ಟೀಸರ್​​ನಲ್ಲಿ ಕಾಣಿಸಿದೆ. ಕಾರ್ಯಕ್ರಮದಲ್ಲಿ ರಣವೀರ್ ಅವರು ಸಮಯ್ ಬಗ್ಗೆ ಮಾತನಾಡುತ್ತಾ, ‘ಅವನದ್ದು ತುಂಬಾ ಶುದ್ಧವಾದ ಹೃದಯ, ಅದು ಜನರಿಗೆ ತಿಳಿಯಬೇಕು’ ಎಂದು ಹೊಗಳಿದರು. ತಕ್ಷಣವೇ ಪ್ರತಿಕ್ರಿಯಿಸಿದ ಕಪಿಲ್, ‘ಹೌದು, ಯಾರಾದರೂ ನಿಮ್ಮ ಶೋ ಅನ್ನು ಹಾಳು ಮಾಡಿದರೂ ಅವರು ನಿಮ್ಮನ್ನು ಬದುಕಲು ಬಿಟ್ಟಿದ್ದಾರೆ ಎಂದರೆ ಖಂಡಿತಾ ಅವರ ಹೃದಯ ದೊಡ್ಡದೇ ಇರಬೇಕು’ ಎಂದು ಹೇಳುವ ಮೂಲಕ ಕಳೆದ ವರ್ಷ ರಣವೀರ್ ಅವರ ಜೋಕ್‌ನಿಂದ ಉಂಟಾಗಿದ್ದ ವಿವಾದವನ್ನು ನೆನಪಿಸಿ ನಗೆಗಡಲಲ್ಲಿ ತೇಲಿಸಿದರು. ಇದು ಟೀಸರ್​ ಅಲ್ಲಿ ಕಾಣಿಸಿದೆ.

ಇದೇ ವೇಳೆ ನವಜೋತ್ ಸಿಂಗ್ ಸಿಧು ಅವರು ಸಮಯ್ ಅವರ ಚುರುಕಾದ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿಕೊಂಡರು. ಆಗ ಸಮಯ್ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ದೇವರು ಒಂದು ಬಾಗಿಲು ಮುಚ್ಚಿದರೆ ಹತ್ತು ಕಿಟಕಿಗಳನ್ನು ತೆರೆಯುತ್ತಾನೆ. ನೀನು ಕಿಟಕಿಗಳನ್ನು ನೋಡುವವನಾಗು’ ಎಂದರು. ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಸಮಯ್, ‘ಸರ್, ಆ ಎಲ್ಲ ಕಿಟಕಿಗಳಿಂದ ಜನ ನಮಗೆ ಕಲ್ಲು ಹೊಡೆಯುತ್ತಾರೆ’ ಎಂದಾಗ ಸಿಧು ನಕ್ಕು ಸುಸ್ತಾದರು. ಸಮಯ್ ಅವರ ಈ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಧು, ‘ಲವ್ ಯೂ ಮಗನೇ, ನೀನು ಅದ್ಭುತ!’ ಎಂದು ಅಪ್ಪಿಕೊಂಡರು.

ಇದನ್ನೂ ಓದಿ: ‘ಯಾವ ಸಮಯ್?’; ಟೀಕಿಸಿದ ಸಮಯ್ ರೈನಾಗೆ ರಣವೀರ್ ಅಲಹಾಬಾದಿಯಾ ಖಡಕ್ ಉತ್ತರ

ಸಮಯ್ ರೈನಾ ಮತ್ತು ರಣವೀರ್ ಅಲಹಾಬಾದಿಯ ಅವರ ಈ ವಿಶೇಷ ಸಂಚಿಕೆಯು ಇಂದು ರಾತ್ರಿ 8 ಗಂಟೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ