AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೈಕಲ್’ ಬಾಕ್ಸ್ ಆಫೀಸ್: ಏಳು ದಿನಕ್ಕೆ ದಾಖಲೆ ಕಲೆಕ್ಷನ್, ಭಾರತದಲ್ಲೆಷ್ಟು?

Michael movie: ಮೈಕಲ್ ಜಾಕ್ಸನ್ ಅವರ ಜೀವನ ಆಧಾರಿಸಿದ ಸಿನಿಮಾ ‘ಮೈಕಲ್’ ಏಪ್ರಿಲ್ 24 ರಂದು ಬಿಡುಗಡೆ ಆಗಿದೆ. ಸಿನಿಮಾಕ್ಕೆ ಮೊದಲ ದಿನ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿದ್ದವು, ಹಾಗಿದ್ದರೂ ಸಹ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದು, ಏಳು ದಿನಗಳಲ್ಲಿ ಭಾರಿ ದೊಡ್ಡ ಕಲೆಕ್ಷನ್ ಮಾಡಿದೆ. ಕೇವಲ ಏಳೇ ದಿನದಲ್ಲಿ ‘ಮೈಖಲ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಮಾತ್ರವಲ್ಲ ಭಾರತದಲ್ಲಿಯೂ ಸಹ ದೊಡ್ಡ ಮೊತ್ತದ ಗಳಿಕೆ ಮಾಡಿದೆ ಈ ಸಿನಿಮಾ.

‘ಮೈಕಲ್’ ಬಾಕ್ಸ್ ಆಫೀಸ್: ಏಳು ದಿನಕ್ಕೆ ದಾಖಲೆ ಕಲೆಕ್ಷನ್, ಭಾರತದಲ್ಲೆಷ್ಟು?
Michael
ಮಂಜುನಾಥ ಸಿ.
|

Updated on: May 01, 2026 | 12:48 PM

Share

ಮೈಕಲ್ ಜಾಕ್ಸನ್ (Michael) ಅವರ ಜೀವನ ಆಧಾರಿಸಿದ ಸಿನಿಮಾ ‘ಮೈಕಲ್’ ಏಪ್ರಿಲ್ 24 ರಂದು ಬಿಡುಗಡೆ ಆಗಿದೆ. ಸಿನಿಮಾಕ್ಕೆ ಮೊದಲ ದಿನ ಮಿಶ್ರ ವಿಮರ್ಶೆಗಳು ವ್ಯಕ್ತವಾಗಿದ್ದವು, ಹಾಗಿದ್ದರೂ ಸಹ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದು, ಏಳು ದಿನಗಳಲ್ಲಿ ಭಾರಿ ದೊಡ್ಡ ಕಲೆಕ್ಷನ್ ಮಾಡಿದೆ. ಕೇವಲ ಏಳೇ ದಿನದಲ್ಲಿ ‘ಮೈಖಲ್’ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಮಾತ್ರವಲ್ಲ ಭಾರತದಲ್ಲಿಯೂ ಸಹ ದೊಡ್ಡ ಮೊತ್ತದ ಗಳಿಕೆ ಮಾಡಿದೆ ಈ ಸಿನಿಮಾ.

ಮೈಖಲ್ ಜಾಕ್ಸನ್ ಅವರ ಸಹೋದರನ ಪುತ್ರ ಜಫಾರ್ ಜಾಕ್ಸನ್ ತಮ್ಮ ಚಿಕ್ಕಪ್ಪನ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಕೇವಲ ಏಳು ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 2600 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತವನ್ನು ‘ಮೈಖಲ್’ ಸಿನಿಮಾ ಗಳಿಸಿದ್ದು, ಅತಿ ಹೆಚ್ಚು ಮೊತ್ತ ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯನ್ನು ‘ಮೈಖಲ್’ ಸಿನಿಮಾ ಸಹ ಸೇರಿಕೊಂಡಿದ್ದು, ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸಿನಿಮಾದ ಗಳಿಕೆ ದಿನೇ-ದಿನೇ ಹೆಚ್ಚಾಗುತ್ತಿದೆ. ಈ ಸಿನಿಮಾ ಸುಮಾರು 10 ಸಾವಿರ ಕೋಟಿಗೂ ಹೆಚ್ಚು ಮೊತ್ತ ಗಳಿಸಬಹುದು ಎಂದು ಬಾಕ್ಸ್ ಆಫೀಸ್ ವಿಶ್ಲೇಷಕರು ಅಂದಾಜಿಸಿದ್ದಾರೆ.

ಇದನ್ನೂ ಓದಿ:ಮೂರೇ ದಿನಕ್ಕೆ 2100 ಕೋಟಿ ಗಳಿಸಿದ ‘ಮೈಖಲ್’: ಭಾರತದಲ್ಲಿ ಎಷ್ಟು?

ಭಾರತದಲ್ಲಿ ಸಹ ಮೈಖಲ್ ಜಾಕ್ಸನ್​​ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಾಗಾಗಿ ಭಾರತದಲ್ಲೂ ಸಹ ಈ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ. ‘ಧುರಂಧರ್ 2’, ‘ಭೂತ್ ಬಂಗ್ಲ’ ಇನ್ನಿತರೆ ಸಿನಿಮಾಗಳ ಪ್ರಬಲ ಸ್ಪರ್ಧೆಯ ನಡುವೆಯೂ ಸಹ ‘ಮೈಖಲ್’ ಸಿನಿಮಾ ಭಾರತದಲ್ಲಿ ಒಂದು ವಾರಕ್ಕೆ 32 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ದೊಡ್ಡ ಮೊತ್ತ ಅಲ್ಲದಿದ್ದರೂ ಕಳಪೆ ಪ್ರದರ್ಶನವಂತೂ ಅಲ್ಲ. ‘ಸ್ಪೈಡರ್​​ಮ್ಯಾನ್’, ‘ಅವೇಂಜರ್ಸ್’ ಇನ್ನಿತರೆ ಕೆಲ ಸಿನಿಮಾಗಳು ಭಾರತದಲ್ಲಿ 100 ಕೋಟಿ, 200 ಕೋಟಿ ಗಳಿಸಿದ ಉದಾಹರಣೆಗಳೂ ಇವೆ. ಆದರೆ ‘ಮೈಖಲ್’ ಭಾರತದಲ್ಲಿ 150 ಕೋಟಿ ಗಳಿಕೆ ದಾಟುವುದು ತುಸು ಅನುಮಾನವೇ ಎನ್ನಲಾಗುತ್ತಿದೆ.

‘ಮೈಖಲ್’ ಸಿನಿಮಾವು ವಿಶ್ವ ವಿಖ್ಯಾತ ಪಾಪ್ ಸ್ಟಾರ್ ಮೈಖಲ್ ಜಾಕ್ಸನ್ ಜೀವನ ಕುರಿತ ಕತೆಯನ್ನು ಒಳಗೊಂಡಿದೆ. ಈಗ ಬಿಡುಗಡೆ ಆಗಿರುವ ಸಿನಿಮಾನಲ್ಲಿ ಮೈಖಲ್ ಅವರ ಆರಂಭಿಕ ಜೀವನದ ಕತೆಯನ್ನಷ್ಟೆ ತೋರಿಸಲಾಗಿದೆ. ಮೈಖಲ್ ಅವರ ಹಲವು ಹಾಡುಗಳನ್ನು ಸಿನಿಮಾನಲ್ಲಿ ಬಳಸಿಕೊಳ್ಳಲಾಗಿದೆ. ಅವರ ಬಾಲ್ಯ, ಬಾಲ್ಯದಲ್ಲಿ ಅನುಭವಿಸಿದ ನೋವುಗಳು, ಸಂಗೀತದ ಬಗೆಗಿನ ಆಸಕ್ತಿ, ಸ್ಟಾರ್ ಆಗಿ ಬೆಳೆದ ರೀತಿ ಇನ್ನೂ ಹಲವು ವಿಷಯಗಳನ್ನು ಸಿನಿಮಾನಲ್ಲಿ ತೋರಿಸಲಾಗಿದೆ. ಸಿನಿಮಾದ ಎರಡನೇ ಭಾಗದಲ್ಲಿ ಮೈಖಲ್ ಅವರ ಜೀವನದ ಕರಾಳ ದಿನಗಳು, ಆ ಸಮಯದಲ್ಲಿ ಮೈಖಲ್ ಅನುಭವಿಸಿದ ನೋವು ಇನ್ನಿತರೆಗಳನ್ನು ತೋರಿಸಲಾಗುತ್ತದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?
ಕಮರ್ಷಿಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕಾಫಿ ಬೆಲೆ ಗಗನಕ್ಕೇರುತ್ತಾ?
ಅಸ್ಸಾಂನಲ್ಲಿ ಬಿಜೆಪಿ ಬರುತ್ತೆ ಎಂದು ನಾವೂ ಹೇಳ್ತೀವಿ: ಪರಮೇಶ್ವರ!
ಅಸ್ಸಾಂನಲ್ಲಿ ಬಿಜೆಪಿ ಬರುತ್ತೆ ಎಂದು ನಾವೂ ಹೇಳ್ತೀವಿ: ಪರಮೇಶ್ವರ!
ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ
ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ
ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು
ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು
‘ಕೆಡಿ’ ಚಿತ್ರದಲ್ಲಿಲ್ಲ ‘ಸರ್ಸೆ ಸರ್ಸೆ’ ಹಾಡು; ಅಪ್​​ಡೇಟ್​ ಕೊಟ್ಟ ಪ್ರೇಮ್
‘ಕೆಡಿ’ ಚಿತ್ರದಲ್ಲಿಲ್ಲ ‘ಸರ್ಸೆ ಸರ್ಸೆ’ ಹಾಡು; ಅಪ್​​ಡೇಟ್​ ಕೊಟ್ಟ ಪ್ರೇಮ್
ಬುರ್ಖಾ ಧರಿಸಿದ್ದ ಮಹಿಳೆಯ ಮೈಮುಟ್ಟಿ ಪರಾರಿಯಾಗಿದ್ದವನಿಗೆ ಗುಂಡೇಟು
ಬುರ್ಖಾ ಧರಿಸಿದ್ದ ಮಹಿಳೆಯ ಮೈಮುಟ್ಟಿ ಪರಾರಿಯಾಗಿದ್ದವನಿಗೆ ಗುಂಡೇಟು
ವಾಣಿಜ್ಯ ಸಿಲಿಂಡರ್ ದರ ಏರಿಕೆ: ಹೋಟೆಲ್​ನಲ್ಲಿ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ ಸಿಲಿಂಡರ್ ದರ ಏರಿಕೆ: ಹೋಟೆಲ್​ನಲ್ಲಿ ಊಟ-ತಿಂಡಿ ದರ ಹೆಚ್ಚಾಗುತ್ತಾ?
ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಥಳಿಸಿದ ಪೊಲೀಸರು
ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಥಳಿಸಿದ ಪೊಲೀಸರು
ಚರಂಡಿ ನೀರಲ್ಲಿ ಸ್ನಾನ ಮಾಡಿ, ಅದೇ ನೀರಿನಲ್ಲಿ ಆಹಾರ ಅದ್ದಿ ತಿಂದ ಪುನೀತ್
ಚರಂಡಿ ನೀರಲ್ಲಿ ಸ್ನಾನ ಮಾಡಿ, ಅದೇ ನೀರಿನಲ್ಲಿ ಆಹಾರ ಅದ್ದಿ ತಿಂದ ಪುನೀತ್
ನಿಮಗೆ ಲವ್ ಮ್ಯಾರೇಜ್ ಆಗುತ್ತೋ, ಅರೆಂಜ್ ಮ್ಯಾರೇಜ್ ಆಗುತ್ತೋ?
ನಿಮಗೆ ಲವ್ ಮ್ಯಾರೇಜ್ ಆಗುತ್ತೋ, ಅರೆಂಜ್ ಮ್ಯಾರೇಜ್ ಆಗುತ್ತೋ?