Samantha: ಹಾಲಿವುಡ್​ ಮಂದಿಯೇ ‘ವಾವ್​’ ಎನ್ನುವಂತೆ ‘ಯಶೋದಾ’ ಚಿತ್ರದಲ್ಲಿ ಸಾಹಸ ಮೆರೆದ ಸಮಂತಾ

Yannick Ben | Samantha Ruth Prabhu: ಟ್ರೇಲರ್​ ಮೂಲಕ ‘ಯಶೋದಾ’ ಚಿತ್ರ ನಿರೀಕ್ಷೆ ಮೂಡಿಸಿದೆ. ಮುಖ್ಯ ಪಾತ್ರ ಮಾಡಿರುವ ಸಮಂತಾ ಅವರ ಬದ್ಧತೆ ಕಂಡು ಹಾಲಿವುಡ್​ ಸ್ಟಂಟ್​ ಮಾಸ್ಟರ್​ ಯಾನಿಕ್​ ಬೆನ್​ ಅವರು ಮೆಚ್ಚುಗೆ ಸೂಚಿಸಿದ್ದಾರೆ.

Samantha: ಹಾಲಿವುಡ್​ ಮಂದಿಯೇ ‘ವಾವ್​’ ಎನ್ನುವಂತೆ ‘ಯಶೋದಾ’ ಚಿತ್ರದಲ್ಲಿ ಸಾಹಸ ಮೆರೆದ ಸಮಂತಾ
ಯಾನಿಕ್ ಬೆನ್, ಸಮಂತಾ
Edited By:

Updated on: Nov 05, 2022 | 7:30 AM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ದಿನದಿಂದ ದಿನಕ್ಕೆ ಸವಾಲಿನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ನಟಿಸಿರುವ ‘ಯಶೋದಾ’ (Yashoda Movie) ಚಿತ್ರ ನ.11ರಂದು ಬಿಡುಗಡೆ ಆಗಲಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿರುವ ಟ್ರೇಲರ್​ ಗಮನ ಸೆಳೆದಿದೆ. ಅದರಲ್ಲಿ ಅವರು ಭರ್ಜರಿ ಸಾಹಸ ಮೆರೆದಿರುವುದು ಕಾಣಿಸಿದೆ. ಸಮಂತಾ ಅವರಿಗೆ ಆ್ಯಕ್ಷನ್​ ಹೇಳಿಕೊಟ್ಟಿರುವುದು ಹಾಲಿವುಡ್​ ಸ್ಟಂಟ್​ ಮಾಸ್ಟರ್​ ಯಾನಿಕ್​ ಬೆನ್​. ಯಾವ ಸ್ಟಾರ್​ ಹೀರೋಗೂ ಕಮ್ಮಿ ಇಲ್ಲದಂತೆ ಸಮಂತಾ ಫೈಟಿಂಗ್​ ಮಾಡಿದ್ದಾರೆ ಎಂಬುದಕ್ಕೆ ಟ್ರೇಲರ್​ನಲ್ಲಿ ಝಲಕ್​ ಕಾಣಿಸಿದೆ. ಅವರ ಬದ್ಧತೆ ಕಂಡು ಯಾನಿಕ್​ ಬೆನ್​ (Yannick Ben) ಅವರು ವಾವ್​ ಎಂದಿದ್ದಾರೆ. ಈ ಎಲ್ಲ ಕಾರಣದಿಂದಾಗಿ ‘ಯಶೋದಾ’ ಚಿತ್ರ ನಿರೀಕ್ಷೆ ಮೂಡಿಸಿದೆ.

ಸಮಂತಾ ಮತ್ತು ಯಾನಿಕ್ ಬೆನ್ ಅವರು ಈ ಹಿಂದೆ ‘ಫ್ಯಾಮಿಲಿ ಮ್ಯಾನ್ 2′ ವೆಬ್‌ ಸೀರೀಸ್‌ನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಈಗ ‘ಯಶೋದಾ’ ಚಿತ್ರಕ್ಕಾಗಿ ಮತ್ತೊಮ್ಮೆ ಒಂದಾಗಿದ್ದಾರೆ. ಸಮಂತಾ ಅವರ ಬದ್ಧತೆ ಮತ್ತು ಇಚ್ಛಾಶಕ್ತಿಯಿಂದಲೇ ಈ ಚಿತ್ರದ ಆ್ಯಕ್ಷನ್​ ದೃಶ್ಯಗಳು ತುಂಬ ಚೆನ್ನಾಗಿ ಮೂಡಿಬಂದಿವೆ ಎಂಬುದು ಯಾನಿಕ್​ ಬೆನ್​ ಅವರ ಅಭಿಪ್ರಾಯ.

ಹಲವು ಬಗೆಯ ಸಮರ ಕಲೆಗಳಲ್ಲಿ ಯಾನಿಕ್​ ಬೆನ್​ ಅವರು ಪರಿಣತಿ ಹೊಂದಿದ್ದಾರೆ. ತಮ್ಮ ಕೌಶಲವನ್ನು ಹಾಲಿವುಡ್​, ಬಾಲಿವುಡ್​, ಟಾಲಿವುಡ್​ ಸಿನಿಮಾಗಳಿಗೆ ಅವರು ಧಾರೆ ಎರೆದಿದ್ದಾರೆ. ಈಗ ‘ಯಶೋದಾ’ ಚಿತ್ರದಲ್ಲಿ ಸಮಂತಾ ಅವರಿಗೆ ಸಾಹಸ ಹೇಳಿಕೊಡುವ ಮೂಲಕ ಚಿತ್ರದ ಮೆರುಗನ್ನು ಹೆಚ್ಚಿಸುವ ಕೆಲಸ ಮಾಡಿದ್ದಾರೆ ಯಾನಿಕ್​ ಬೆನ್​.

ಇದನ್ನೂ ಓದಿ
Naga Chaitanya: ‘ಸಮಂತಾ ಸಿಕ್ಕರೆ ತಬ್ಬಿಕೊಳ್ತೀನಿ, ಟ್ಯಾಟೂ ತೆಗೆಸಲ್ಲ’: ಹಳೇ ಹೆಂಡತಿ ಬಗ್ಗೆ ನಾಗ ಚೈತನ್ಯ ನೇರ ಮಾತು
Samantha: ನಾಗ ಚೈತನ್ಯ ಜತೆ ವಾಸಿಸಿದ್ದ ಮನೆಯನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿದ ಸಮಂತಾ; ಏನಿದು ಸೆಂಟಿಮೆಂಟ್​?
Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

‘ಯಶೋದಾ’ ಚಿತ್ರದಲ್ಲಿ ಸಮಂತಾ ಅವರು ಬಾಡಿಗೆ ತಾಯಿಯ ಪಾತ್ರ ಮಾಡಿದ್ದಾರೆ. ಟ್ರೇಲರ್​ನಲ್ಲಿ ಈ ವಿಚಾರ ಬಹಿರಂಗ ಆಗಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್​ ಆಗುತ್ತಿದೆ. ಸ್ಟಾರ್​ ಹೀರೋಗಳ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗುವ ಟ್ರೆಂಡ್​ ಜೋರಾಗಿದೆ. ನಟಿಯರು ಕೂಡ ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸಮಂತಾ ಅವರ ‘ಯಶೋದಾ’ ಚಿತ್ರ ಬಿಡುಗಡೆ ಆಗುತ್ತಿದೆ.

Yashoda Trailer (Kannada) | Samantha, Varalaxmi Sarathkumar | Manisharma

ಸಮಂತಾ ಜೊತೆ ವರಲಕ್ಷ್ಮಿ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮಾ, ಸಂಪತ್ ರಾಜ್, ಮಧುರಿಮಾ, ಕಲ್ಪಿಕಾ ಗಣೇಶ್, ದಿವ್ಯಾ ಶ್ರೀಪಾದ, ಪ್ರಿಯಾಂಕಾ ಶರ್ಮಾ ಮುಂತಾದವರು ನಟಿಸಿದ್ದಾರೆ. ಶ್ರೀದೇವಿ ಮೂವೀಸ್ ಅಡಿಯಲ್ಲಿ ಶಿವಲೆಂಕ ಕೃಷ್ಣ ಪ್ರಸಾದ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹರಿ ಮತ್ತು ಹರೀಶ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us