79ನೇ ವಯಸ್ಸಿನಲ್ಲಿ ಏಳನೇ ಮಗುವಿಗೆ ತಂದೆ ಆದ ಖ್ಯಾತ ನಟ; ಪತ್ನಿಯ ಹೆಸರು ಗುಟ್ಟಾಗಿಟ್ಟ ಹೀರೋ 

|

Updated on: May 10, 2023 | 7:33 AM

Robert De Niro: ‘ನಿಮಗೆ ಆರು ಮಕ್ಕಳಲ್ಲವೇ’ ಎಂದು ಸಂದರ್ಶಕ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಆ ನಟ ಯಾವುದೇ ಮುಜುಗರ ಇಲ್ಲದೆ ಉತ್ತರ ನೀಡಿದ್ದಾರೆ.

79ನೇ ವಯಸ್ಸಿನಲ್ಲಿ ಏಳನೇ ಮಗುವಿಗೆ ತಂದೆ ಆದ ಖ್ಯಾತ ನಟ; ಪತ್ನಿಯ ಹೆಸರು ಗುಟ್ಟಾಗಿಟ್ಟ ಹೀರೋ 
ರಾಬರ್ಟ್​
Follow us on

ಹಾಲಿವುಡ್ ನಟ ರಾಬರ್ಡ್​ ಡಿನೆರೋ (Robert De Niro) ಅವರಿಗೆ ಈಗ 79 ವರ್ಷ. ಈ ವಯಸ್ಸಿನಲ್ಲೂ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಷ್ಟೇ ಅಲ್ಲ ಕುಟುಂಬ ವಿಸ್ತರಣೆ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ! ಅವರು ಇತ್ತೀಚೆಗೆ ಏಳನೇ ಮಗುವಿಗೆ ತಂದೆ ಆಗಿದ್ದಾರೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ಬೆ ಅನೇಕರಲ್ಲಿ ಮೂಡಿದೆ. ಹಲವರು ರಾಬರ್ಟ್​​ಗೆ ಶುಭಾಶಯ ತಿಳಿಸಿದ್ದಾರೆ.

ರಾಬರ್ಟ್​ ಡಿನೆರೋ ಅವರು 60ರ ದಶಕದಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಸದ್ಯ ಅವರು ‘ಕಿಲ್ಲಿಂಗ್ ಆಫ್​​ ದಿ ಫ್ಲವರ್ ಮೂನ್​’, ‘ಅಬೌಟ್ ಮೈ ಫಾದರ್’, ‘ವೈಸ್ ಗಯ್ಸ್’ ಮೊದಲಾದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ ಒಂದರ ಪ್ರಮೋಷನ್​ನಲ್ಲಿ ಅವರು ಪಾಲ್ಗೊಂಡಿದ್ದರು. ಆಗ ಅವರು ಏಳನೇ ಮಗುವಿನ ವಿಚಾರ ರಿವೀಲ್ ಮಾಡಿದ್ದಾರೆ.

‘ನಿಮಗೆ ಆರು ಮಕ್ಕಳಲ್ಲವೇ’ ಎಂದು ಸಂದರ್ಶಕ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ರಾಬರ್ಟ್​ ಡಿನೆರೋ ಅವರು ಯಾವುದೇ ಮುಜುಗರ ಇಲ್ಲದೆ ಉತ್ತರ ನೀಡಿದ್ದಾರೆ. ‘ನನಗೆ ಏಳು ಮಕ್ಕಳು. ಇತ್ತೀಚೆಗೆ ಏಳನೇ ಮಗು ಜನಿಸಿದೆ’ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: Kriti Sanon: ‘ಆದಿಪುರುಷ್’ ಟ್ರೇಲರ್​ನಲ್ಲಿ ಸೀತೆ ಆಗಿ ಗಮನ ಸೆಳೆದ ಕೃತಿ ಸನೋನ್; ಇಲ್ಲಿದೆ ಫೋಟೋ ಗ್ಯಾಲರಿ

ರಾಬರ್ಟ್ ಡಿನೆರೋ ಅವರು 1976ರಲ್ಲಿ ಮದುವೆ ಆದರು. ಈ ಸಂಬಂಧ 1988ರಲ್ಲಿ ಮುರಿದು ಬಿತ್ತು. 1997ರಲ್ಲಿ ಅವರು ಮತ್ತೊಂದು ಮದುವೆ ಆದರು. 2018ರಲ್ಲಿ ಈ ಸಂಸಾರ ಕೊನೆ ಆಯಿತು. ಇಬ್ಬರು ಪತ್ನಿಯರಿಂದ ಅವರು ತಲಾ ಎರಡು ಮಗು ಪಡೆದಿದ್ದಾರೆ. ಮಾಡೆಲ್ ಒಬ್ಬರ​​ ಜೊತೆ ಅವರು ಲಿವ್​-ಇನ್ ರಿಲೇಶನ್​ಶಿಪ್​ನಲ್ಲಿದ್ದರು. ಆಗ ಅವರು ಅವಳಿ ಮಕ್ಕಳನ್ನು ಪಡೆದರು. ಈಗ ಅವರು ಏಳನೇ ಮಗು ಪಡೆದಿದ್ದು ಯಾರಿಂದ ಎಂಬುದನ್ನು ರಿವೀಲ್ ಮಾಡಿಲ್ಲ. ರಾಬರ್ಟ್​ ಡಿನೆರೋ ಅವರು ಸೀಕ್ರೆಟ್ ಆಗಿ ಮದುವೆ ಆದರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ.

2003ರಲ್ಲಿ ರಾಬರ್ಟ್ ಡಿನಾರೋ ಅವರಿಗೆ ಕ್ಯಾನ್ಸರ್ ಕಾಣಿಸಿತು. ಅವರು ಕ್ಯಾನ್ಸರ್ ಗೆದ್ದು ಬಂದಿದ್ದಾರೆ. ಅವರು ಅಕಾಡೆಮಿ ಅವಾರ್ಡ್ಸ್​​ನಲ್ಲಿ ಅತ್ಯುತ್ತಮ ಪೋಷಕ ನಟ (1974) ಹಾಗೂ ಅತ್ಯುತ್ತಮ ನಟ (1980) ಪ್ರಶಸ್ತಿ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

Published On - 7:21 am, Wed, 10 May 23