65ನೇ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ (Grammy Awards 2023) ಲಾಸ್ ಏಂಜಲೀಸ್ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ಮೂಲದ ಮ್ಯೂಸಿಕ್ ಕಂಪೋಸರ್ ರಿಕ್ಕಿ ಕೇಜ್ (Ricky Kej) ಅವರಿಗೆ ಪ್ರಶಸ್ತಿ ದೊರೆತಿದೆ. ಅವರು ಮೂರನೇ ಬಾರಿಗೆ ಈ ಪ್ರಶಸ್ತಿ ಪಡೆದಿದ್ದಾರೆ ಅನ್ನೋದು ವಿಶೇಷ. ಅವರಿಗೆ ಎಲ್ಲ ಕಡೆಗಳಿಂದ ಅಭಿನಂದನೆಗಳು ಬರುತ್ತಿವೆ.
ರಿಕ್ಕಿ ಕೇಜ್ ಹುಟ್ಟಿದ್ದು ಅಮೆರಿಕದಲ್ಲಿ. ಸದ್ಯ, ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಿಕ್ಕಿ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು 100ಕ್ಕೂ ಅಧಿಕ ಪಶಸ್ತಿಗಳನ್ನು ಗೆದ್ದಿದ್ದಾರೆ. 2015ರಲ್ಲಿ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ಈಗ ಬಾರಿ ‘ಡಿವೈನ್ ಟೈಡ್ಸ್’ ಆಲ್ಬಂಗೆ ಸ್ಟೀವರ್ಟ್ ಕೋಪ್ಲ್ಯಾಂಡ್ ಹಾಗೂ ರಿಕ್ಕಿ ಕೇಜ್ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಮನಸೂರೆಗೊಳ್ಳುವ ಆಡಿಯೋ ಆಲ್ಬಂ ವಿಭಾಗದಲ್ಲಿ ಈ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಅವರು ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಆಲ್ಬಂಗೆ ಕಳೆದ ವರ್ಷ ಗ್ರ್ಯಾಮಿ ಪ್ರಶಸ್ತಿ ಸಿಕ್ಕಿತ್ತು.
Just won my 3rd Grammy Award. Extremely grateful, am speechless! I dedicate this Award to India.@copelandmusic
Herbert Waltl Eric Schilling Vanil Veigas Lonnie Park pic.twitter.com/GG7sZ4yfQa— Ricky Kej (@rickykej) February 6, 2023
ಈ ಮೊದಲು ಮಾತನಾಡಿದ್ದ ರಿಕ್ಕಿ ಅವರು, ‘ಡಿವೈನ್ ಟೈಡ್ಸ್ ಎರಡನೇ ಬಾರಿಗೆ ನಾಮಿನೇಟ್ ಆಗಿರೋದು ಖುಷಿ ನೀಡಿದೆ. ಈ ಪ್ರತಿಷ್ಠಿತ ಅವಾರ್ಡ್ನಲ್ಲಿ ಭಾರತದ ಹಾಡುಗಳು ಆಯ್ಕೆ ಆಗಿರೋದು ಖುಷಿಯ ವಿಚಾರ. ಸಂಗೀತ ಲೋಕದಲ್ಲಿ ಮತ್ತಷ್ಟು ಕೆಲಸ ಮಾಡಲು ಇದು ಸಹಕಾರಿ’ ಎಂದು ಅವರು ಹೇಳಿದ್ದರು.
ಪ್ರಶಸ್ತಿ ಪಡೆದವರ ಹೆಸರು
ಅತ್ಯುತ್ತಮ ಮ್ಯೂಸಿಕ್ ವಿಡಿಯೋ
ಆಲ್ ಟೂ ವೆಲ್: ದಿ ಶಾರ್ಟ್ ಫಿಲ್ಮ್-ಟೈಲರ್ ಸ್ವಿಫ್ಟ್
ರ್ಯಾಪ್ ಆಲ್ಬಂ
ಮಿಸ್ಟರ್ ಮಾರಲ್ ಆ್ಯಂಡ್ ದಿ ಬಿಗ್ ಸ್ಟೆಪ್ಪರ್- ಕೆಂಡ್ರಿಕ್ ಲ್ಯಾಮರ್
ರಾಕ್ ಆಲ್ಬಂ
ಪೇಷಂಟ್ ನಂಬರ್ 9-ಓಜಿ
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:24 am, Mon, 6 February 23