AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ತಲೆಮಾರಿನ ಮಕ್ಕಳಿಗಾಗಿ ಹೊಸ ಅವತಾರದಲ್ಲಿ ಹ್ಯಾರಿ ಪಾಟರ್

‘ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್’ ವೆಬ್ ಸರಣಿಯು ಇದೇ ವರ್ಷ ಡಿಸೆಂಬರ್ ವೇಳೆಗೆ ಬಿಡುಗಡೆ ಆಗಲಿದೆ. ವೆಬ್ ಸರಣಿಯನ್ನು ಎಚ್​​ಬಿಓನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಜಿಯೋ ಹಾಟ್​ಸ್ಟಾರ್​​ನಲ್ಲೂ ಸಹ ಈ ವೆಬ್ ಸರಣಿ ವೀಕ್ಷಣೆಗೆ ದೊರಕುವ ಸಾಧ್ಯತೆ ಇದೆ. ಜೆನ್ ಜಿ ಮತ್ತು ಜೆನ್ ಆಲ್ಫಾಗಳಿಗೆ ‘ಹ್ಯಾರಿ ಪಾಟರ್’ ಕತೆಯನ್ನು ಪರಿಚಯಿಸುವ ಕಾರಣಕ್ಕಾಗಿ ಈ ವೆಬ್ ಸರಣಿ ನಿರ್ಮಾಣ ಮಾಡಲಾಗಿದೆ.

ಹೊಸ ತಲೆಮಾರಿನ ಮಕ್ಕಳಿಗಾಗಿ ಹೊಸ ಅವತಾರದಲ್ಲಿ ಹ್ಯಾರಿ ಪಾಟರ್
Harry Poter
ಮಂಜುನಾಥ ಸಿ.
|

Updated on:Sep 03, 2026 | 11:24 AM

Share

ಮುಖ್ಯಾಂಶಗಳು

  • ಹ್ಯಾರಿ ಪಾಟರ್ ವಿಶ್ವದ ಜನಪ್ರಿಯ ಸಿನಿಮಾ
  • ಒಂದು ತಲೆಮಾರಿನ ಮಕ್ಕಳಿಗೆ ಅದ್ಭುತ ಪ್ರಪಂಚ ತೋರಿಸಿದ ಸಿನಿಮಾ
  • ಇದೀಗ ಹೊಸ ತಲೆಮಾರಿಗಾಗಿ ಹೊಸದಾಗಿ ನಿರ್ಮಾಣಗೊಂಡಿದೆ ಹ್ಯಾರಿ ಪಾಟರ್

ಹ್ಯಾರಿ ಪಾಟರ್, ವಿಶ್ವದ ಅತ್ಯಂತ ಜನಪ್ರಿಯ ಮತ್ತು ವಿಶ್ವದಲ್ಲಿ ಅತಿ ಹೆಚ್ಚು ಮಕ್ಕಳು ನೋಡಿರುವ ಸಿನಿಮಾಗಳಲ್ಲಿ ಪ್ರಮುಖವಾದುದು. ಜೆಕೆ ರೋಲಿಂಗ್ ಬರೆದ ಪುಸ್ತಕ ಆಧರಿಸಿ ನಿರ್ಮಿಸಲಾದ ಈ ಸಿನಿಮಾ ಭಾರಿ ಜನಪ್ರಿಯತೆ ಗಳಿಸಿದೆ. 2001 ರಿಂದ 2011 ರವರೆಗೆ ಎಂಟು ಹ್ಯಾರಿ ಪಾಟರ್ ಸಿನಿಮಾಗಳು ನಿರ್ಮಾಣವಾಗಿ ಬಿಡುಗಡೆ ಆಗಿವೆ. ತಂತ್ರಜ್ಞಾನ ಮಿತಿಯಿದ್ದ ಸಮಯದಲ್ಲಿ ನಿರ್ಮಾಣವಾಗಿದ್ದ ಆ ಸಿನಿಮಾಗಳು ಅದ್ಭುತ ಪ್ರಪಂಚವನ್ನು ಸೃಷ್ಠಿ ಮಾಡಿದ್ದವು. ಆದರೆ ಹೊಸ ತಲೆಮಾರಿನ ಮಕ್ಕಳಿಗೆ ಹೊಸದಾಗಿ ಹ್ಯಾರಿ ಪಾಟರ್ ಅನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಲಾಗುತ್ತಿದ್ದು, ಇದೀಗ ಹೊಸ ‘ಹ್ಯಾರಿ ಪಾಟರ್’ ವೆಬ್ ಸರಣಿ ಬಿಡುಗಡೆಗೆ ಸಜ್ಜಾಗಿದೆ.

‘ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್’ ಹ್ಯಾರಿ ಪಾಟರ್ ಸರಣಿಯ ಮೊದಲ ಅಧ್ಯಾಯವಾಗಿದ್ದು, ಇದೀಗ ಇದೇ ಹೆಸರಿನಲ್ಲಿ ಹೊಸ ವೆಬ್ ಸರಣಿ ನಿರ್ಮಾಣ ಆಗಿದೆ. ಹ್ಯಾರಿ ಪಾಟರ್, ತನ್ನ ಸಾಕು ತಂದೆ-ತಾಯಿ ಮನೆಯಿಂದ ಮಾಯಾವಿಗಳ ಶಾಲೆಗೆ (ಹೋಗ್ವಾರ್ಟ್ ಸ್ಕೂಲ್ ಆಫ್ ವಿಚ್​ ಕ್ರಾಫ್ಟ್) ಬರುವ ಪ್ರಯಾಣ, ಅಲ್ಲಿ ನಡೆಯುವ ಅದ್ಭುತಗಳು ಇತ್ಯಾದಿಗಳನ್ನು ಮೊದಲ ಸೀಸನ್ ಒಳಗೊಂಡಿರಲಿದ್ದು, ವೆಬ್ ಸರಣಿಯ ಮೊದಲ ಸೀಸನ್​​ನ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಟ್ರೈಲರ್ ನೋಡಿದರೆ, ‘ಹಾರಿ ಪಾಟರ್’ ಸಿನಿಮಾಕ್ಕೂ ಈ ವೆಬ್ ಸರಣಿಗೂ ಬಹಳ ದೊಡ್ಡ ಅಂತರ ಇಲ್ಲವೆಂಬುದು ತಿಳಿಯುತ್ತದೆ. ಆದರೆ ವೆಬ್ ಸರಣಿ, ಮೂಲ ಹ್ಯಾರಿ ಪಾಟರ್ ಕತೆಯನ್ನು ಹೆಚ್ಚು ವಿಸ್ತೃತವಾಗಿ ತೆರೆಗೆ ತಂದಿರುವುದು ಗೊತ್ತಾಗುತ್ತಿದೆ.

ಸಿನಿಮಾನಲ್ಲಿರುವ ರೀತಿಯಲ್ಲಿಯೇ ಸೆಟ್ಟುಗಳು ಎಲ್ಲವೂ ವೆಬ್ ಸರಣಿಯಲ್ಲಿದೆ ಆದರೆ ಪಾತ್ರಧಾರಿಗಳು ಮಾತ್ರವೇ ಬದಲಾಗಿದ್ದಾರೆ. ಮೊದಲ ಪುಸ್ತಕದಲ್ಲಿನ ಪ್ರಮುಖ ಘಟನೆಗಳಾದ, ಸಾರ್ಟಿಂಗ್ ಹ್ಯಾಟ್, ಕ್ವಿಡಿಚ್ ಟೂರ್ನಮೆಂಟ್ ಇನ್ನೂ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ. ಹಳೆ ಹ್ಯಾರಿ ಪಾಟರ್ ನೋಡಿದವರಿಗೆ ಈ ಟೀಸರ್ ನೋಡಿದರೆ ಹಳೆಯ ದಿನಗಳಿಗೆ ಮರಳಿದ ಅನುಭವ ಆಗುವುದು ಖಾತ್ರಿ.

ಇದನ್ನೂ ಓದಿ:ಬಾಕ್ಸ್ ಆಫೀಸ್​​ನಲ್ಲಿ ಅದ್ಭುತ ಸೃಷ್ಟಿಸಿದ ಸಿನಿಮಾ, ಸೀಕ್ವೆಲ್ ಘೋಷಿಸಿದ ನಿರ್ದೇಶಕ

‘ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್’ ವೆಬ್ ಸರಣಿಯು ಇದೇ ವರ್ಷ ಡಿಸೆಂಬರ್ ವೇಳೆಗೆ ಬಿಡುಗಡೆ ಆಗಲಿದೆ. ವೆಬ್ ಸರಣಿಯನ್ನು ಎಚ್​​ಬಿಓನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಜಿಯೋ ಹಾಟ್​ಸ್ಟಾರ್​​ನಲ್ಲೂ ಸಹ ಈ ವೆಬ್ ಸರಣಿ ವೀಕ್ಷಣೆಗೆ ದೊರಕುವ ಸಾಧ್ಯತೆ ಇದೆ. ಜೆನ್ ಜಿ ಮತ್ತು ಜೆನ್ ಆಲ್ಫಾಗಳಿಗೆ ‘ಹ್ಯಾರಿ ಪಾಟರ್’ ಕತೆಯನ್ನು ಪರಿಚಯಿಸುವ ಕಾರಣಕ್ಕಾಗಿ ಈ ವೆಬ್ ಸರಣಿ ನಿರ್ಮಾಣ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:15 am, Thu, 3 September 26

Follow Us