AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸ್ ಆಫೀಸ್​​ನಲ್ಲಿ ಅದ್ಭುತ ಸೃಷ್ಟಿಸಿದ ಸಿನಿಮಾ, ಸೀಕ್ವೆಲ್ ಘೋಷಿಸಿದ ನಿರ್ದೇಶಕ

Hanuman Ansh movie: ‘ಟಾಕ್ಸಿಕ್’, ‘ಇರುಮುಡಿ’ ಸಿನಿಮಾಗಳ ಅಬ್ಬರದ ನಡುವೆ ತೀರ ಸಣ್ಣ ಬಜೆಟ್​​ನ ಸಿನಿಮಾ ಒಂದು ಬಾಕ್ಸ್ ಆಫೀಸ್​​ನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಕೇವಲ 1.8 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆಗಿರುವ ‘ಹನುಮಾನ್ ಅಂಶ್’ ಸಿನಿಮಾ 50 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, ಈ ಸಿನಿಮಾದ ಸೀಕ್ವೆಲ್ ಅನ್ನು ಸಹ ನಿರ್ದೇಶಕರು ಘೋಷಣೆ ಮಾಡಿದ್ದಾರೆ.

ಬಾಕ್ಸ್ ಆಫೀಸ್​​ನಲ್ಲಿ ಅದ್ಭುತ ಸೃಷ್ಟಿಸಿದ ಸಿನಿಮಾ, ಸೀಕ್ವೆಲ್ ಘೋಷಿಸಿದ ನಿರ್ದೇಶಕ
Hanuman Ansh
ಮಂಜುನಾಥ ಸಿ.
|

Updated on: Sep 02, 2026 | 7:01 PM

Share

ಮುಖ್ಯಾಂಶಗಳು

  • ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆಯುತ್ತಿರುವ ಸಣ್ಣ ಸಿನಿಮಾ
  • 1.8 ಕೋಟಿಯಲ್ಲಿ ನಿರ್ಮಾಣಗೊಂಡಿರುವ ಹನುಮಾನ್ ಅಂಶ್ ಸಿನಿಮಾ
  • ಸಿನಿಮಾದ ಸೀಕ್ವೆಲ್ ಅನ್ನು ಸಹ ಘೋಷಣೆ ಮಾಡಲಾಗಿದೆ.

ಈಗ ಬಿಡುಗಡೆ ಆಗುತ್ತಿರುವ ಬಹುತೇಕ ಪ್ಯಾನ್ ಇಂಡಿಯಾ (Pan India) ಸಿನಿಮಾಗಳು, 500 ಕೋಟಿ, 1000 ಕೋಟಿ ಬಜೆಟ್​​ ಹೊಂದಿರುತ್ತವೆ. ಬಾಕ್ಸ್ ಆಫೀಸ್​​ನಲ್ಲೂ ಬಹುತೇಕ ಅಷ್ಟೇ ಗಳಿಕೆ ಮಾಡುತ್ತವೆ ಅದೂ ಹಿಟ್ ಆದರೆ, ಪ್ಲಾಪ್ ಆದರೆ ಹಾಕಿದ ಹಣ ವ್ಯರ್ಥ. ಆದರೆ ಇಲ್ಲೊಂದು ಸಿನಿಮಾ ಕೇವಲ 1.8 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡಿದ್ದು, ಈಗಾಗಲೇ ಬಾಕ್ಸ್ ಆಫೀಸ್​​ನಲ್ಲಿ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಅದುವೇ ‘ಹನುಮಾನ್ ಅಂಶ್’. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 50 ಕೋಟಿ ರೂಪಾಯಿ ಗಳಿಕೆ ದಾಟಿದ ಬೆನ್ನಲ್ಲೆ ಸಿನಿಮಾದ ಸೀಕ್ವೆಲ್ ಅನ್ನು ನಿರ್ದೇಶಕ ಘೋಷಿಸಿದ್ದಾರೆ.

ಆಗಸ್ಟ್ 7ರಂದು ಬಿಡುಗಡೆ ಆದ ಈ ಬಹಳ ಸಣ್ಣ ಬಜೆಟ್​​ನ ಹಿಂದಿ ಸಿನಿಮಾ, ತಮ್ಮ ಕಂಟೆಂಟ್, ಹಾಡುಗಳಿಂದ ಬಾಕ್ಸ್ ಆಫೀಸ್​​ನಲ್ಲಿ ಮೋಡಿ ಮಾಡುತ್ತಿದೆ. ‘ನೀಮ್ ಕರೋಲಿ ಬಾಬ’ ಅವರ ಜೀವನ ಆಧರಿಸಿದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಭಕ್ತರನ್ನು ಬಹುವಾಗಿ ಸೆಳೆಯುತ್ತಿದೆ ಈ ಸಿನಿಮಾ. ಕೆಲವೇ ಕೆಲವು ಶೋಗಳ ಮೂಲಕ ಬಿಡುಗಡೆ ಆದ ಈ ಸಿನಿಮಾ ಈಗ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಶೋಗಳನ್ನು ಪಡೆದುಕೊಂಡಿದೆ. ಬಾಕ್ಸ್ ಆಫೀಸ್​​ನಲ್ಲಂತೂ ಅಬ್ಬರಿಸುತ್ತಿದೆ.

ಕೇವಲ 1.8 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆದ ಈ ಸಿನಿಮಾ ಈಗಾಗಲೇ 50 ಕೋಟಿ ಗಳಿಕೆ ದಾಟಿದ್ದು, ಈ ವರ್ಷದ ಈ ವರೆಗಿನ ಅತ್ಯಂತ ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ. ಬಜೆಟ್​​ನ 50 ಪಟ್ಟು ಹೆಚ್ಚು ಮೊತ್ತವನ್ನು ಬಾಕ್ಸ್ ಆಫೀಸ್​​ನಲ್ಲಿ ಬಾಚಿಕೊಂಡಿದೆ ಈ ಸಿನಿಮಾ.

ಇದನ್ನೂ ಓದಿ:ವಾಮಿಕಾ ಕೈಯಲ್ಲಿ ಎಂಟು ಸಿನಿಮಾ, ಹೊಸ ಪ್ಯಾನ್ ಇಂಡಿಯಾ ಸ್ಟಾರ್ ನಟಿ?

ಇತ್ತೀಚೆಗೆ ಆಗ್ರಾದ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರೇಕ್ಷಕರೊಂದಿಗೆ ಸಂವಾದ ನಡೆಸುವ ವೇಳೆ ಸೀಕ್ವೆಲ್ ಯೋಜನೆಗಳ ಕುರಿತು ಮಾತನಾಡಿದ ಸಿನಿಮಾದ ನಿರ್ದೇಶಕ ವಿಶಾಲ್, ಮುಂಬರುವ ಭಾಗದಲ್ಲಿ ನೀಮ್ ಕರೋಲಿ ಬಾಬಾ ಅವರ ಜೀವನದ ಪ್ರಮುಖ ಅಧ್ಯಾಯಗಳನ್ನು ಅನ್ವೇಷಿಸಲಾಗುವುದು ಎಂದಿದ್ದಾರೆ. ಅವರ ಜನ್ಮಸ್ಥಳವಾದ ಫಿರೋಜ್‌ಬಾದ್‌ನ ಮೇಲೆ ಕಥೆಯು ಮೊದಲು ಗಮನಹರಿಸಲಿದೆ ಮತ್ತು ನಂತರ ಆಗ್ರಾ, ಮಥುರಾ ಹಾಗೂ ಅವರ ಜೀವನ ಮತ್ತು ಆಧ್ಯಾತ್ಮಿಕ ಪಯಣಕ್ಕೆ ಸಂಬಂಧಿಸಿದ ಇತರ ಸ್ಥಳಗಳಿಗೆ ಕಥೆ ಸಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಇದೇ ವರ್ಷದ ಫೆಬ್ರವರಿ 20ರಂದು ಚಿತ್ರವನ್ನು ಅಧಿಕೃತವಾಗಿ ಘೋಷಿಸಿದಾಗಲೇ ಈ ಸಿನಿಮಾ ಅನ್ನು ಮೂರು ಭಾಗಗಳಾಗಿ ಬಿಡುಗಡೆ ಮಾಡುವ ಯೋಜನೆ ಇತ್ತು ಎಂದಿರುವ ಅವರು ಈ ಅಧ್ಯಾತ್ಮಿಕ ಕಥೆಯು ವಿಶಾಲ್ ಚತುರ್ವೇದಿ ಬರೆದಿರುವ ‘ಡಿವೈನ್ ಡಿಟೂರ್’ ಪುಸ್ತಕದಿಂದ ಸ್ಫೂರ್ತಿ ಪಡೆದಿದೆ ಎಂದು ಸಹ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​