AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೆತ್ತವರಿಗೇ ಲಿಖಿತ್​ನ ಸರಿ ಮಾಡೋಕಾಗಿಲ್ಲ ಅಂದ್ರೆ ನಾನು ಹೇಗೆ ಮಾಡ್ಲಿ’; ಸಂಗೀತಾ ಭಟ್ ಅಸಮಾಧಾನ

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಸಂಗೀತಾ ಮತ್ತು ಲಿಖಿತ್ ನಡುವೆ ಪಾತ್ರೆ ತೊಳೆಯುವ ವಿಚಾರಕ್ಕೆ ದೊಡ್ಡ ಗಲಾಟೆ ನಡೆದಿದೆ. ಮಧ್ಯರಾತ್ರಿ ಚಿಪ್ಸ್ ತಿಂದ ನಂತರ ಸಿಂಕ್‌ನಲ್ಲಿ ಪಾತ್ರೆಗಳನ್ನು ಬಿಟ್ಟಿದ್ದಕ್ಕೆ ಸಂಗೀತಾ ಕಿಡಿಕಾರಿದ್ದಾರೆ. ಆದರೆ, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ ಲಿಖಿತ್, ಸಂಗೀತಾ ವೈಯಕ್ತಿಕ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

‘ಹೆತ್ತವರಿಗೇ ಲಿಖಿತ್​ನ ಸರಿ ಮಾಡೋಕಾಗಿಲ್ಲ ಅಂದ್ರೆ ನಾನು ಹೇಗೆ ಮಾಡ್ಲಿ’; ಸಂಗೀತಾ ಭಟ್ ಅಸಮಾಧಾನ
ಸಂಗೀತಾ-ಲಿಖಿತ್
TV9 Web
| Edited By: |

Updated on: Sep 23, 2026 | 6:57 AM

Share

ಮುಖ್ಯಾಂಶಗಳು

  • ‘ನನ್ನ ಮೇಲೆ ಪರ್ಸನಲ್ ದ್ವೇಷ’
  • ಕ್ಯಾಪ್ಟನ್ ವಿರುದ್ಧ ಲಿಖಿತ್ ಫೈರ್
  • ಸಂಗೀತಾ ನೀಡಿದ ಖಡಕ್ ಹೇಳಿಕೆ

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಲಿಖಿತ್ ಅವರು ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಅಗ್ನಿಪರೀಕ್ಷೆಯಿಂದ ಬಂದ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿಕೊಳ್ಳುವ ಮೂಲಕ ಸುದ್ದಿ ಆಗುತ್ತಿದ್ದಾರೆ. ಈಗ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಸಂಗೀತಾ ಹಾಗೂ ಲಿಖಿತ್ ಮಧ್ಯೆ ಪ್ಲೇಟ್ ತೊಳೆಯುವ ವಿಷಯಕ್ಕೆ ಕಿರಿಕ್ ಆಗಿದೆ. ಆಗ ಲಿಖಿತ್ ಬಗ್ಗೆ ಸಂಗೀತಾ ಅಸಮಾಧಾನ ಹೊರಹಾಕಿದ್ದಾರೆ. ಅದೇ ರೀತಿ ಲಿಖಿತ್ ಕೂಡ ಸಂಗೀತಾ ಮೇಲೆ ಕೆಲವು ಆರೋಪಗಳನ್ನು ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಆಗಿದ್ದೇನು?

ಮಲಗುವುದಕ್ಕೂ ಮೊದಲು ಅಡುಗೆ ಮನೆಯಲ್ಲಿ ಕೆಲವರು ಆಲೂಗಡ್ಡೆ ಚಿಪ್ಸ್ ಮಾಡಿ ತಿಂದಿದ್ದಾರೆ. ಈ ವೇಳೆ ಕೆಲವು ಪಾತ್ರೆಗಳನ್ನು ಸಿಂಕ್​ನಲ್ಲಿ ಹಾಗೆಯೇ ಇಡಲಾಗಿದೆ. ಇಷ್ಟೇ ಅಲ್ಲ, ಕಿಚನ್ ಕಟ್ಟೆಯನ್ನು ಬೇಕಾಬಿಟ್ಟಿಯಾಗಿ ಹರಡಲಾಗಿತ್ತು. ಇದು ಸಂಗೀತಾ ಅಸಮಾಧಾನಕ್ಕೆ ಕಾರಣ ಆಗಿದೆ. ಸೌಂದರ್ಯಾ ಅವರು ಕಿಚನ್ ಕಟ್ಟೆಯನ್ನು ಕ್ಲೀನ್ ಮಾಡಿದ್ದಾಗಿ ಹೇಳಿದರು. ಆದರೆ, ಲಿಖಿತ್ ಅವರು ಇಷ್ಟೆಲ್ಲ ಮಾಡಿ ಪಾತ್ರೆ ತೊಳೆದಿಲ್ಲ ಎಂದು ಸಂಗೀತಾ ಆರೋಪಿಸಿದರು.

ಲಿಖಿತ್ ವಾದ ಏನು?

ಲಿಖಿತ್ ಅವರು ಬೇರೆಯದೇ ರೀತಿಯ ವಾದ ಮುಂದಿಟ್ಟರು. ‘ಅದಕ್ಕೂ ನನಗೂ ಸಂಬಂಧ ಇಲ್ಲ. ನಾನು ಬೇಗ ಮಲಗಿದ್ದೇನೆ. ಅಡುಗೆ ಮಾಡಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ನನ್ನನ್ನು ಮಾತ್ರ ಟಾರ್ಗೆಟ್ ಮಾಡುತ್ತಿರುವುದು ಏಕೆ? ಸಂಗೀತಾಗೆ ನನ್ನ ಮೇಲೆ ವೈಯಕ್ತಿಕ ದ್ವೇಷ ಇದೆ. ಅದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ’ ಎಂದು ಲಿಖಿತ್ ಆರೋಪ ಮಾಡಿದರು.

ಇದನ್ನೂ ಓದಿ: ‘ಇದು ಸ್ಪ್ಲಿಟ್ಸ್‌ವಿಲ್ಲಾ ಅಲ್ಲ, ಬಿಗ್ ಬಾಸ್’: ಸೌಂದರ್ಯಾಗೆ ಎಚ್ಚರಿಕೆ ನೀಡಿದ ಆಸಿಯಾ

ನನ್ನ ಬಳಿ ತಿದ್ದೋಕೆ ಆಗಲ್ಲ

ಈ ಎಲ್ಲ ಬೆಳವಣಿಗೆ ಬಗ್ಗೆ ಸಂಗೀತಾ ಭಟ್ ಅಸಮಾಧಾನ ಹೊರಹಾಕಿದರು. ‘ಅವರ ಹೆತ್ತವರೇ ಅವರನ್ನು ಸರಿ ಮಾಡೋಕೆ ಆಗಿಲ್ಲ ಎಂದರೆ ನನ್ನ ಬಳಿ ಹೇಗಾಗುತ್ತದೆ’ ಎಂದು ಸಂಗೀತಾ ಹೇಳಿದರು. ಲಿಖಿತ್ ಹಾಗೂ ಸಂಗೀತಾ ಮಧ್ಯೆ ಆಗಾಗ ಕಿರಿಕ್ ಆಗುತ್ತಲೇ ಇರುತ್ತಿದೆ. ಈಗ ಅದು ಮತ್ತೊಂದು ಹಂತಕ್ಕೆ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
TV9 Web
TV9 Web

TV9 Kannada

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ