ಯಾರು, ಯಾವಾಗ ಬೇಕಾದರೂ ನನ್ನ ಬೆತ್ತಲೆ ದೇಹ ನೋಡಬಹುದು; ಹಾಲಿವುಡ್​ ನಟಿಯ ಅಳಲು 

| Updated By: ರಾಜೇಶ್ ದುಗ್ಗುಮನೆ

Updated on: Nov 24, 2021 | 10:11 PM

2014ರಲ್ಲಿ ಅನೇಕ ಸೆಲೆಬ್ರಿಟಿಗಳ ಖಾಸಗಿ ಫೋಟೋಗಳು ಲೀಕ್​ ಆಗಿದ್ದವು. ಪಾಪ್​ ಸಿಂಗರ್​, ನಟಿ ಸೆಲೆನಾ ಗೊಮೆಜ್​ ಸೇರಿದಂತೆ ಅನೇಕರು ಹ್ಯಾಕರ್​ಗಳ ಕೈಚಳಕಕ್ಕೆ ಸಿಲುಕಿದ್ದರು. ಅದರಲ್ಲಿ ಜೆನಿಫರ್​ ಕೂಡ ಒಬ್ಬರು.  ಈ ಬಗ್ಗೆ ಅವರು ಈಗ ಮಾತನಾಡಿದ್ದಾರೆ.

ಯಾರು, ಯಾವಾಗ ಬೇಕಾದರೂ ನನ್ನ ಬೆತ್ತಲೆ ದೇಹ ನೋಡಬಹುದು; ಹಾಲಿವುಡ್​ ನಟಿಯ ಅಳಲು 
ಜೆನಿಫರ್​
Follow us on

ಅಮೆರಿಕದ ಖ್ಯಾತ ನಟಿ ಜೆನಿಫರ್ ಲಾರೆನ್ಸ್ ವೃತ್ತಿ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಅವರಿಗೆ ಈಗಿನ್ನು 31 ವರ್ಷ. 2008ರಲ್ಲಿಯೇ ಜೆನಿಫರ್​ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಚಿತ್ರರಂಗಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಅವರ ಬೆತ್ತಲೆ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಲೀಕ್​ ಆಗಿದ್ದವು. ಕೆಲ ಹ್ಯಾಕರ್​​ಗಳು ಈ ಕೆಲಸವನ್ನು ಮಾಡಿದ್ದರು. ಜೆನಿಫರ್​ ಅವರ ವೈಯಕ್ತಿಕ ಫೋಟೋಗಳು ಲೀಕ್​ ಆಗಿದ್ದು ಅವರಿಗೆ ಸಾಕಷ್ಟು ಆಘಾತ ತಂದಿದೆ. ಈ ವಿಚಾರದಲ್ಲಿ ಅವರು ತುಂಬಾನೇ ನೊಂದುಕೊಂಡಿದ್ದಾರೆ. ಈ ಬಗ್ಗೆ ಅವರು ಮಾಧ್ಯಮದ ಜತೆಗೆ ಮಾತನಾಡಿದ್ದಾರೆ. ಈ ವೇಳೆ ಅವರು ನೊಂದುಕೊಂಡೇ ಆ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

2014ರಲ್ಲಿ ಅನೇಕ ಸೆಲೆಬ್ರಿಟಿಗಳ ಖಾಸಗಿ ಫೋಟೋಗಳು ಲೀಕ್​ ಆಗಿದ್ದವು. ಪಾಪ್​ ಸಿಂಗರ್​, ನಟಿ ಸೆಲೆನಾ ಗೊಮೆಜ್​ ಸೇರಿದಂತೆ ಅನೇಕರು ಹ್ಯಾಕರ್​ಗಳ ಕೈಚಳಕಕ್ಕೆ ಸಿಲುಕಿದ್ದರು. ಅದರಲ್ಲಿ ಜೆನಿಫರ್​ ಕೂಡ ಒಬ್ಬರು.  ಈ ಬಗ್ಗೆ ಅವರು ಈಗ ಮಾತನಾಡಿದ್ದಾರೆ. ‘ನನ್ನ ಒಪ್ಪಿಗೆಯಿಲ್ಲದೆ, ಯಾರು ಬೇಕಾದರೂ, ಯಾವಾಗ ಬೇಕಾದರೂ ನನ್ನ ಬೆತ್ತಲೆ ದೇಹವನ್ನು ನೋಡಬಹುದು. ಆ ಘಟನೆ ನೀಡಿದ ಆಘಾತದಿಂದ ಹೊರಬರೋಕೆ ಸಾಧ್ಯವೇ ಇಲ್ಲ’ ಎಂದಿದ್ದಾರೆ. ಅವರ ಬೆತ್ತಲೆ ಫೋಟೋಗಳು ಆನ್​ಲೈನ್​ನಲ್ಲಿ ಲೀಕ್​ ಆಗಿದ್ದು, ಅದನ್ನು ಸಂಪೂರ್ಣವಾಗಿ ಡಿಲೀಟ್​ ಮಾಡೋಕೆ ಸಾಧ್ಯವೇ ಇಲ್ಲ. ಈ ಕಾರಣಕ್ಕೆ ಅವರು ಈ ಮಾತನ್ನು ಹೇಳಿದ್ದಾರೆ.

2017ರಲ್ಲಿ ಜೆನಿಫರ್​ ಪ್ರಯಾಣಿಸುತ್ತಿದ್ದ ವಿಮಾನದ ಇಂಜಿನ್​ ಕಾರ್ಯ ನಿಲ್ಲಿಸಿತ್ತು. ಈ ಅವಘಡದಲ್ಲಿ ಅವರು ಬದುಕಿದ್ದರು. ಈ ಬಗ್ಗೆ ಮಾತನಾಡಿರುವ ಜೆನಿಫರ್​, ‘ನಾನು ಆ ಘಟನೆಯಿಂದ ಕುಗ್ಗಿದೆ. ಆ ಘಟನೆ ತುಂಬಾನೇ ಹಾರಿಫಿಕ್​ ಆಗಿತ್ತು. ನಾವು ಸಾಯುತ್ತಿದ್ದೆವು. ಆದರೆ, ಅದೃಷ್ಟದಿಂದ ಬದುಕಿದೆವು’ ಎಂದಿದ್ದಾರೆ.

ಸದ್ಯ, ಜೆನಿಫರ್​ ‘ಡೋಂಟ್​ ಲುಕ್​ ಅಪ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲಿಯೋನಾರ್ಡೋ ಡಿಕ್ಯಾಪ್ರಿಯೋ ಈ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಇವರ ಜತೆಗೆ ಕೆಲ ಪ್ರಮುಖ ಸ್ಟಾರ್​ಗಳು ನಟಿಸುತ್ತಿದ್ದಾರೆ.

ಇದನ್ನೂ ಓದಿ: ವಿಚ್ಛೇದನ ವದಂತಿ ಬೆನ್ನಲ್ಲೇ ಹೊಸ ಅಪ್​ಡೇಟ್​ ನೀಡಿದ ಪ್ರಿಯಾಂಕಾ ಚೋಪ್ರಾ

Published On - 10:01 pm, Wed, 24 November 21