ವಿಚ್ಛೇದನ ವದಂತಿ ಬೆನ್ನಲ್ಲೇ ಹೊಸ ಅಪ್​ಡೇಟ್​ ನೀಡಿದ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಹಾಗೂ ನಿಕ್​ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆ ಆದ ನಂತರದಲ್ಲಿ ಅಮೆರಿಕದಲ್ಲಿಯೇ ಅವರು ಸೆಟಲ್​ ಆಗಿದ್ದಾರೆ. ಬಾಲಿವುಡ್​ ತೊರೆದು ಹಾಲಿವುಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

ವಿಚ್ಛೇದನ ವದಂತಿ ಬೆನ್ನಲ್ಲೇ ಹೊಸ ಅಪ್​ಡೇಟ್​ ನೀಡಿದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ

ನಟಿ ಪ್ರಿಯಾಂಕಾ ಚೋಪ್ರಾ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ಪತಿ, ಪಾಪ್​ ಸಿಂಗರ್​​​ ನಿಕ್​ ಜೋನಸ್​ ಜತೆ ಅವರು ಡಿವೋರ್ಸ್​ ಪಡೆಯುತ್ತಿದ್ದಾರೆ ಎನ್ನುವ ವದಂತಿ ಜೋರಾಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ಆದರೆ, ದಂಪತಿ ಕಡೆಯಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇತ್ತೀಚಿನ ದಿನಗಳವರೆಗೂ ಇಬ್ಬರೂ ಚೆನ್ನಾಗಿಯೇ ಇದ್ದರು ಎಂಬುದಕ್ಕೆ ಅವರ ಇನ್​​ಸ್ಟಾಗ್ರಾಮ್​ ವಾಲ್​ ಸಾಕ್ಷ್ಯ ನೀಡುತ್ತದೆ. ಆದರೆ, ಈಗ ಅವರು ಅದೇ ಇನ್​ಸ್ಟಾಗ್ರಾಮ್ ಖಾತೆಯ ಹೆಸರಿನಿಂದ ಜೋನಸ್​ಅನ್ನು ತೆಗೆದು ಹಾಕಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಚರ್ಚೆಯ ಮಧ್ಯೆಯೇ ಪ್ರಿಯಾಂಕ ಚೋಪ್ರಾ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಒಂದನ್ನು ನೀಡಿದ್ದಾರೆ. ಅವರ ನಟನೆಯ ‘ದಿ ಮೇಟ್ರಿಕ್ಸ್​ ರೆಸರಾಕ್ಷನ್​’ ಸಿನಿಮಾದ ರಿಲೀಸ್​ ದಿನಾಂಕ ಹಾಗೂ ಅವರ ಲುಕ್​ ಅನಾವರಣ ಮಾಡಿದ್ದಾರೆ.

ಪ್ರಿಯಾಂಕಾ ಹಾಗೂ ನಿಕ್​ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆ ಆದ ನಂತರದಲ್ಲಿ ಅಮೆರಿಕದಲ್ಲಿಯೇ ಅವರು ಸೆಟಲ್​ ಆಗಿದ್ದಾರೆ. ಬಾಲಿವುಡ್​ ತೊರೆದು ಹಾಲಿವುಡ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಹಾಲಿವುಡ್​ನಲ್ಲಿ ಸಾಕಷ್ಟು ಸಿನಿಮಾ ಆಫರ್​ಗಳು ಬರುತ್ತಿವೆ. ‘ದಿ ಮೇಟ್ರಿಕ್ಸ್​ ರೆಸರಾಕ್ಷನ್’ ಸಿನಿಮಾದಲ್ಲಿ ಪಿಗ್ಗಿ ನಟಿಸುತ್ತಿದ್ದಾರೆ. ಈ ಚಿತ್ರ ಡಿಸೆಂಬರ್​ 12ರಂದು ತೆರೆಗೆ ಬರುತ್ತಿದೆ.

ಹಾಲಿವುಡ್​ ಸಿನಿಮಾ ಇದಾಗಿದ್ದು, ಲಾನಾ ವಿಚೌಸ್ಕಿ ​ಈ ಚಿತ್ರವನ್ನು ನಿರ್ದೇಶನ ಮಾಡುವುದರ ಜತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. 2003ರಲ್ಲಿ ತೆರೆಗೆ ಬಂದ ‘ದಿ ಮೇಟ್ರಿಕ್ಸ್ ರೆವಲ್ಯೂಷನ್​’ ಸಿನಿಮಾದ ಸೀಕ್ವೆಲ್​ ಇದಾಗಿದೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಅವರು ಲುಕ್​ ಭಿನ್ನವಾಗಿದೆ.

 

View this post on Instagram

 

A post shared by Priyanka (@priyankachopra)

ಪ್ರಿಯಾಂಕಾ-ನಿಕ್​ ವಿಚ್ಛೇದನ ವಿಚಾರ ನಾನಾ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಕೆಲವರು ಇದನ್ನು ನಿಜ ಎನ್ನುತ್ತಿದ್ದಾರೆ. ಆದರೆ, ಇದು ಸುಳ್ಳು ಎನ್ನುವುದಕ್ಕೂ ಸಾಕ್ಷ್ಯ ಸಿಕ್ಕಿದೆ. ಮಂಗಳವಾರ (ನ.23) ಇನ್​ಸ್ಟಾಗ್ರಾಮ್​ನಲ್ಲಿ ನಿಕ್​ ಜೋಸನ್​ ಅವರು ಒಂದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರಿಯಾಂಕಾ ಕೂಡ ಕಮೆಂಟ್​ ಮಾಡಿದ್ದಾರೆ. ‘Damn! I just died in your arms’ ಎಂದು ಕಮೆಂಟ್​ ಮಾಡುವ ಮೂಲಕ ಪತಿಯ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಆ ಮೂಲಕ ತಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ-ನಿಕ್​ ದಾಂಪತ್ಯದಲ್ಲಿ ಬಿರುಕು? ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೆಸರು ಬದಲಿಸಿದ ಪಿಗ್ಗಿ

ಪ್ರಿಯಾಂಕಾ-ನಿಕ್​ ಜೋನಸ್​ ವಿಚ್ಛೇದನ ನಿಜವೇ? ಒಂದೇ ಕಮೆಂಟ್​ನಲ್ಲಿ ಉತ್ತರ ನೀಡಿದ ದೇಸಿ ಗರ್ಲ್​

Click on your DTH Provider to Add TV9 Kannada