ಪ್ರಿಯಾಂಕಾ-ನಿಕ್​ ಜೋನಸ್​ ವಿಚ್ಛೇದನ ನಿಜವೇ? ಒಂದೇ ಕಮೆಂಟ್​ನಲ್ಲಿ ಉತ್ತರ ನೀಡಿದ ದೇಸಿ ಗರ್ಲ್​

Priyanka Chopra | Nick Jonas: ಪ್ರಿಯಾಂಕಾ ಚೋಪ್ರಾ ಅವರು ಏಕಾಏಕಿ ತಮ್ಮ ಸೋಶಿಯಲ್​ ಮೀಡಿಯಾ ಖಾತೆ ಹೆಸರಿನಿಂದ ಪತಿಯ ಸರ್​ನೇಮ್​ ತೆಗೆದು ಹಾಕಿದ್ದು ಯಾಕೆ ಎಂಬುದಕ್ಕೆ ಸದ್ಯಕ್ಕಂತೂ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ನಿಕ್​ ಜೋನಸ್​ ಅವರ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ.

ಪ್ರಿಯಾಂಕಾ-ನಿಕ್​ ಜೋನಸ್​ ವಿಚ್ಛೇದನ ನಿಜವೇ? ಒಂದೇ ಕಮೆಂಟ್​ನಲ್ಲಿ ಉತ್ತರ ನೀಡಿದ ದೇಸಿ ಗರ್ಲ್​
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣವಾಗಿರುವುದು ಪ್ರಿಯಾಂಕಾ ಅವರ ಸೋಶಿಯಲ್​ ಮೀಡಿಯಾ ಅಕೌಂಟ್​. ಅಮೆರಿಕದ ಗಾಯಕ ನಿಕ್​ ಜೋನಸ್​ (Nick Jonas) ಜೊತೆ ಮದುವೆ ಆದ ಬಳಿಕ ಪ್ರಿಯಾಂಕಾ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯ ಹೆಸರನ್ನು ‘ಪ್ರಿಯಾಂಕಾ ಚೋಪ್ರಾ ಜೋನಸ್​’ ಎಂದು ಬದಲಾಯಿಸಿಕೊಂಡಿದ್ದರು. ಆದರೆ ಈಗ ಪತಿಯ ಸರ್​ನೇಮ್​ ತೆಗೆದುಹಾಕಿದ್ದಾರೆ. ‘ಜೋನಸ್​’ ಹೆಸರನ್ನು ಕೈ ಬಿಟ್ಟಿದ್ದಾರೆ. ಮೊದಲಿನಂತೆ ಕೇವಲ ‘ಪ್ರಿಯಾಂಕಾ ಚೋಪ್ರಾ’ ಎಂದಷ್ಟೇ ಇಟ್ಟುಕೊಂಡಿದ್ದಾರೆ. ಹಾಗಾಗಿ ಈ ಜೋಡಿಯ ನಡುವೆ ಬಿರುಕು ಮೂಡಿರಬಹುದು ಎಂದು ಎಲ್ಲರೂ ಊಹಿಸುತ್ತಿದ್ದಾರೆ. ಶೀಘ್ರವೇ ಅವರು ವಿಚ್ಛೇದನ (Divorce) ಪಡೆಯಬಹುದು ಅಂತ ಕೂಡ ಅನೇಕರು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಆ ಎಲ್ಲ ಗಾಳಿ ಸುದ್ದಿಗಳಿಗೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ ಪ್ರಿಯಾಂಕಾ. ಅದು ಕೂಡ ಒಂದೇ ಒಂದು ಕಮೆಂಟ್​ ಮೂಲಕ!

ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಸದಾ ಕಾಲ ಆ್ಯಕ್ಟೀವ್​ ಆಗಿರುತ್ತಾರೆ. ಮಂಗಳವಾರ (ನ.23) ಇನ್​ಸ್ಟಾಗ್ರಾಮ್​ನಲ್ಲಿ ನಿಕ್​ ಜೋಸನ್​ ಅವರು ಒಂದು ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರಿಯಾಂಕಾ ಕೂಡ ಕಮೆಂಟ್​ ಮಾಡಿದ್ದಾರೆ. ‘Damn! I just died in your arms’ ಎಂದು ಕಮೆಂಟ್​ ಮಾಡುವ ಮೂಲಕ ಪತಿಯ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ. ಆ ಮೂಲಕ ತಮ್ಮಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.

 

View this post on Instagram

 

A post shared by Nick Jonas (@nickjonas)

ಏಕಾಏಕಿ ಪ್ರಿಯಾಂಕಾ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆ ಹೆಸರಿನಿಂದ ಪತಿಯ ಸರ್​ನೇಮ್​ ತೆಗೆದು ಹಾಕಿದ್ದು ಯಾಕೆ ಎಂಬುದಕ್ಕೆ ಸದ್ಯಕ್ಕಂತೂ ಉತ್ತರ ಸಿಕ್ಕಿಲ್ಲ. ಈಗಾಗಲೇ ವಿಚ್ಛೇದನದ ಗಾಸಿಪ್​ ಜೋರಾಗಿ ಹಬ್ಬಿದೆ. ಅದಕ್ಕೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ಗಾಳಿ ಸುದ್ದಿ ಹಬ್ಬಿಸಬಾರದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

Viral Video: ವಧು ಮತ್ತು ಸ್ನೇಹಿತೆಯರು ಸೇರಿ ಪ್ರಿಯಾಂಕಾ ಚೋಪ್ರಾ ಹಾಡಿಗೆ ಸಕತ್ ಸ್ಟೆಪ್; ವಿಡಿಯೊ ಫುಲ್ ವೈರಲ್

ಅಮೆರಿಕದಲ್ಲಿ ಪ್ರಿಯಾಂಕಾಗೆ ಲಕ್ಷ್ಮೀ ಪೂಜೆ ಸಂಭ್ರಮ; ಗಮನ ಸೆಳೆದ ಚೋಪ್ರಾ-ನಿಕ್​

Click on your DTH Provider to Add TV9 Kannada