ಪ್ರಿಯಾಂಕಾ-ನಿಕ್​ ದಾಂಪತ್ಯದಲ್ಲಿ ಬಿರುಕು? ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೆಸರು ಬದಲಿಸಿದ ಪಿಗ್ಗಿ

ಪ್ರಿಯಾಂಕಾ ಹಾಗೂ ನಿಕ್​ ಡಿಸೆಂಬರ್​ 1, 2018ರಂದು ವಿವಾಹವಾಗಿದ್ದರು. ಪ್ರಿಯಾಂಕಾ ನಿಕ್​ಗಿಂತಲೂ ದೊಡ್ಡವರು. ವಯಸ್ಸಿನ ಅಂತರ ಇವರಿಗೆ ಅಡ್ಡಿ ಆಗಲೇ ಇಲ್ಲ. ಪ್ರಿಯಾಂಕಾ ಅವರು ಮದುವೆ ನಂತರ ನ್ಯೂಯಾರ್ಕ್​ನಲ್ಲಿಯೇ ಸೆಟಲ್​ ಆಗಿದ್ದಾರೆ.

ಪ್ರಿಯಾಂಕಾ-ನಿಕ್​ ದಾಂಪತ್ಯದಲ್ಲಿ ಬಿರುಕು? ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೆಸರು ಬದಲಿಸಿದ ಪಿಗ್ಗಿ
ಪ್ರಿಯಾಂಕಾ ಚೋಪ್ರಾ, ನಿಕ್​ ಜೋನಸ್​

ಸಮಂತಾ ಅವರು ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ಅಕ್ಕಿನೇನಿ’ ಸರ್​ನೇಮ್​ಅನ್ನು ತೆಗೆದುಹಾಕಿದ್ದು ವಿಚ್ಛೇದನ ವದಂತಿಗೆ ಕಾರಣವಾಗಿತ್ತು. ನಂತರ ಅದು ನಿಜವೂ ಆಗಿತ್ತು. ಹೆಸರು ಬದಲಿಸಿದ ಕೆಲವೇ ತಿಂಗಳಲ್ಲಿ ಅವರು ಪತಿ ನಾಗ ಚೈತನ್ಯ ಅವರಿಂದ ದೂರವಾದರು. ಈಗ ಪ್ರಿಯಾಂಕಾ ಚೋಪ್ರಾ ಕೂಡ ಇದೇ ರೀತಿ ನಡೆದುಕೊಂಡಿದ್ದಾರೆ. ಇದರಿಂದ ನಿಕ್​ ಜೋನಸ್​ ಹಾಗೂ ಪ್ರಿಯಾಂಕಾ ದಾಂಪತ್ಯ ಅಂತ್ಯವಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ವದಂತಿ ಸುಳ್ಳಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಪ್ರಿಯಾಂಕಾ ಹಾಗೂ ನಿಕ್​ ಡಿಸೆಂಬರ್​ 1, 2018ರಂದು ವಿವಾಹವಾಗಿದ್ದರು. ವಯಸ್ಸಿನಲ್ಲಿ ನಿಕ್​ಗಿಂತಲೂ ಪ್ರಿಯಾಂಕಾ ದೊಡ್ಡವರು. ವಯಸ್ಸಿನ ಅಂತರ ಇವರಿಗೆ ಅಡ್ಡಿ ಆಗಲೇ ಇಲ್ಲ. ಪ್ರಿಯಾಂಕಾ ಅವರು ಮದುವೆ ಆದ ನಂತರ ನ್ಯೂಯಾರ್ಕ್​ನಲ್ಲಿಯೇ ಸೆಟಲ್​ ಆಗಿದ್ದಾರೆ. ಅಲ್ಲಿಯೇ ಐಷಾರಾಮಿ ಹೋಟೆಲ್ ಉದ್ಯಮ ​ಕೂಡ ಓಪನ್​ ಮಾಡಿದ್ದಾರೆ. ಹಾಲಿವುಡ್​ ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅವರ ವಿಚ್ಛೇದನ ವದಂತಿ ಹುಟ್ಟಿಕೊಂಡಿದೆ.

ನಿಕ್​ ಜೋನಸ್​ ಜತೆ ಮದುವೆ ಆದ ನಂತರ ಪ್ರಿಯಾಂಕಾ ಚೋಪ್ರಾ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮ ಹೆಸರಿನ ಜತೆ ಜೋನಸ್​ ಎಂದು ಸೇರಿಸಿಕೊಂಡಿದ್ದರು. ಈಗ ಜೋನಸ್​ ಹೆಸರನ್ನು ತೆಗೆದು ಹಾಕಿದ್ದಾರೆ. ಈ ಮೂಲಕ ಪ್ರಿಯಾಂಕಾ ಚೋಪ್ರಾ ಎಂದಷ್ಟೇ ಇಟ್ಟಿದ್ದಾರೆ. ಇದು ವಿಚ್ಛೇದನ ವದಂತಿ ಹುಟ್ಟಿಕೊಳ್ಳೋಕೆ ಕಾರಣವಾಗಿದೆ.

ಪ್ರಿಯಾಂಕಾ  ವಿದೇಶದಲ್ಲಿ ಇದ್ದುಕೊಂಡು ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಿದ್ದಾರೆ. ನಿಕ್​ಗೂ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ. ಇತ್ತೀಚೆಗೆ ದೀಪಾವಳಿ ಹಬ್ಬವನ್ನು ಪ್ರಿಯಾಂಕಾ ಚೋಪ್ರಾ ಸಂಭ್ರಮದಿಂದ ಆಚರಿಸಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ‘ನನ್ನ ಒಳ ಉಡುಪು ತೋರಿಸುವಂತೆ ನಿರ್ದೇಶಕರು ಹೇಳಿದ್ದರು’; ಇದು ಪ್ರಿಯಾಂಕಾ ಚೋಪ್ರಾ ಬದುಕಿನ ಕರಾಳ ಅನುಭವ

Priyanka Chopra: ಬರೋಬ್ಬರಿ ₹ 2.1 ಕೋಟಿ ಮೊತ್ತದ ಎಂಗೇಜ್​ಮೆಂಟ್ ರಿಂಗ್ ಕುರಿತು ಕುತೂಹಲಕರ ವಿಚಾರ ಹಂಚಿಕೊಂಡ ಪ್ರಿಯಾಂಕಾ

Click on your DTH Provider to Add TV9 Kannada