Priyanka Chopra: ಬರೋಬ್ಬರಿ ₹ 2.1 ಕೋಟಿ ಮೊತ್ತದ ಎಂಗೇಜ್​ಮೆಂಟ್ ರಿಂಗ್ ಕುರಿತು ಕುತೂಹಲಕರ ವಿಚಾರ ಹಂಚಿಕೊಂಡ ಪ್ರಿಯಾಂಕಾ

Priyanka Chopra: ಬರೋಬ್ಬರಿ ₹ 2.1 ಕೋಟಿ ಮೊತ್ತದ ಎಂಗೇಜ್​ಮೆಂಟ್ ರಿಂಗ್ ಕುರಿತು ಕುತೂಹಲಕರ ವಿಚಾರ ಹಂಚಿಕೊಂಡ ಪ್ರಿಯಾಂಕಾ
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್

Nick Jonas: ಬಾಲಿವುಡ್ ಹಾಗೂ ಹಾಲಿವುಡ್​್ ಎರಡರಲ್ಲೂ ಸಕ್ರಿಯರಾಗಿ ತೊಡಗಿಸಿಕೊಂಡಿರುವ ನಟಿ ಪ್ರಿಯಾಂಕಾ ಚೋಪಗ್ರಾ, ತಮ್ಮ ವೈಯಕ್ತಿಕ ಜೀವನದ ಕುರಿತು ಹಲವು ಅಚ್ಚರಿಯ ಸಂಗತಿಗಳನ್ನು ತೆರೆದಿಟ್ಟಿದ್ದಾರೆ.

TV9kannada Web Team

| Edited By: shivaprasad.hs

Nov 10, 2021 | 9:58 AM

ಹಾಲಿವುಡ್ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ‌ ಚೋಪ್ರಾ (Priyanka Chopra) ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಚ್ಚರಿಯ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಲಾಸ್ ಏಂಜಲೀಸ್‌ ನಲ್ಲಿ ಪತಿ‌ ನಿಕ್‌ ಜೋನಾಸ್ (Nick Jonas) ಜೊತೆ ಭರ್ಜರಿಯಾಗಿ ದೀಪಾವಳಿಯನ್ನು ಆಚರಿಸಿದ್ದ ಪ್ರಿಯಾಂಕಾ, ಪ್ರಸ್ತುತ ಕೆಲಸದ ಕಾರಣಕ್ಕೆ ದುಬೈಗೆ ತೆರಳಿದ್ದಾರೆ. ಅಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ತಮ್ಮ‌ ವೈಯಕ್ತಿಯ ಜೀವನದ ಹಲವು ಕುತೂಹಲಕರ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಸಂದರ್ಶನದಲ್ಲಿ ಅವರಿಗೆ, ನೀವು ಇದುವರೆಗೆ ಸ್ವೀಕರಿಸಿದ ಅದ್ಭುತವಾದ ಆಭರಣ ಯಾವುದು ಎಂಬ‌ ಪ್ರಶ್ನೆಗೆ ಪ್ರಿಯಾಂಕಾ ತಮಾಷೆ ಮಾಡುತ್ತಲೇ ಉತ್ತರ ಹೇಳಿದ್ದಾರೆ. ‘ನಾನು ಸ್ವೀಕರಿಸಿದ ಅದ್ಭುತ ಆಭರಣ ಎಂದರೆ ಅದು ನನ್ನ ಎಂಗೇಜ್ಮೆಂಟ್ ರಿಂಗ್.‌ ಒಂದು ವೇಳೆ ಅದು ನನ್ನ‌ ನೆಚ್ಚಿನದ್ದು ಎಂದು ಹೇಳದಿದ್ದರೆ ನನ್ನ ಪತಿ ಕೊಂದೇ ಬಿಡುತ್ತಾನೆ ಎಂದು ಪ್ರಿಯಾಂಕಾ ತಮಾಷೆ ಮಾಡಿದ್ದಾರೆ. ನಂತರ ಅವರು, ಆ ಉಂಗುರ ಏಕೆ‌ ವಿಶೇಷ ಎಂಬುದನ್ನು ವಿವರಿಸಿದ್ದಾರೆ.

ನನಗೆ ನಿಶ್ಚಿತಾರ್ಥದ ಉಂಗುರ ಬಹಳ ವಿಶೇಷವಾದದ್ದು.‌ ಕಾರಣ, ಅದು ನನಗೆ ಬಹಳ ಅನಿರೀಕ್ಷಿತವಾಗಿತ್ತು.‌ ಜೊತೆಗೆ ಜೀವನದ ವಿಶೇಷ ಗಳಿಗೆಯ ನೆನಪದು.‌ಆದ್ದರಿಂದ ಅದು ತನಗೆ ಬಹಳ‌ ಅತ್ಯಮೂಲ್ಯ ಎಂದು ಪ್ರಿಯಾಂಕಾ ಹೇಳಿದ್ದಾರೆ. ಇದೇ ವೇಳೆ ಪ್ರಿಯಾಂಕಾ ನಿಮಗೆ ಯಾವ ಸ್ಥಳ ಸ್ವರ್ಗ ಎಂದೆನಿಸುತ್ತದೆ‌ ಎಂಬ ಪ್ರಶ್ನೆಗೆ, ತಮ್ಮ‌‌ ಮನೆಯೇ ಸ್ವರ್ಗ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ನೆಚ್ಚಿನವರ ಜೊತೆ ಇರುವುದು, ಮನೆಯಲ್ಲಿ ಇರುವುದು ನನಗೆ ಸ್ವರ್ಗದ ರೀತಿ ಭಾಸವಾಗುತ್ತದೆ’ ಎಂದು ಪ್ರಿಯಾಂಕಾ‌ ನುಡಿದಿದ್ದಾರೆ.

ನಿಕ್‌ ಹಾಗೂ ಪ್ರಿಯಾಂಕಾ 2018ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ್ದರು. ನಿಕ್‌ ರೇಡಿಯೋವೊಂದಕ್ಕೆ ಸಂದರ್ಶನ ನೀಡುತ್ತಾ, ಪ್ರಿಯಾಂಕಾಗೆ ನೀಡಿದ್ದ ಉಂಗುರದ ಬಗ್ಗೆ ಪ್ರಸ್ತಾಪಿಸಿದ್ದರು. ಅದನ್ನು ನೀಡಲು ತಮ್ಮ ಸೋದರರು ಬಹಳ‌ ಸಹಾಯ ಮಾಡಿದ್ದರು‌‌ ಎಂದು ಅವರು ತಿಳಿಸಿದ್ದರು. ವರದಿಗಳ ಪ್ರಕಾರ, ಆ ಉಂಗುರದ ಬೆಲೆ ಸುಮಾರು 2.1 ಕೋಟಿ ರೂಗಳು.

ಚಿತ್ರಗಳ ವಿಷಯಕ್ಕೆ ಬಂದರೆ, ಪ್ರಿಯಾಂಕಾ ಹಾಲಿವುಡ್ ಹಾಗೂ ಬಾಲಿವುಡ್ ಎರಡೂ ಚಿತ್ರರಂಗದಲ್ಲಿ‌ ಸಕ್ರಿಯರಾಗಿದ್ದಾರೆ. ಆಲಿಯಾ ಭಟ್ ಹಾಗೂ ಕತ್ರೀನಾ ಕೈಫ್ ಜೊತೆಗೆ ಪ್ರಿಯಾಂಕಾ‌ ಕಾಣಿಸಿಕೊಳ್ಳುತ್ತಿರುವ ‘ಜೀ‌ ಲೇ ಜರಾ’ ಚಿತ್ರ ಅನೌನ್ಸ್ ಆಗಿದೆ. ಸಿಟಾಡೆಲ್ ಸರಣಿಯಲ್ಲಿ ಪ್ರಿಯಾಂಕಾ ಬಣ್ಣ ಹಚ್ಚುತ್ತಿದ್ದಾರೆ. ಇದಲ್ಲದೇ‌ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುತ್ತಿರುವ ಜೋನಾಸ್ ಸಹೋದರರ ಸೀರೀಸ್ ಒಂದರಲ್ಲೂ ಪ್ರಿಯಾಂಕಾ‌ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಸ್ಪೈಡರ್​ ಮ್ಯಾನ್​​ ಲೀಕ್​: ಒಂದೇ ಫೋಟೋದಲ್ಲಿ ಅಭಿಮಾನಿಗಳಿಗೆ ನಿರಾಸೆ ಮತ್ತು ನಿರೀಕ್ಷೆ

ಸುದೀಪ್​ ಅನಾರೋಗ್ಯದ ವೇಳೆ ಮಾಡಿಕೊಂಡಿದ್ದ ಹರಕೆ ತೀರಿಸಿದ ಫ್ಯಾನ್ಸ್​; ಮಲೆ ಮಹದೇಶ್ವರನ ಬೆಟ್ಟದಲ್ಲಿ ಉರುಳು ಸೇವೆ

Follow us on

Related Stories

Most Read Stories

Click on your DTH Provider to Add TV9 Kannada