AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪೈಡರ್​ ಮ್ಯಾನ್​​ ಲೀಕ್​: ಒಂದೇ ಫೋಟೋದಲ್ಲಿ ಅಭಿಮಾನಿಗಳಿಗೆ ನಿರಾಸೆ ಮತ್ತು ನಿರೀಕ್ಷೆ

‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಸಿನಿಮಾದ ಶೂಟಿಂಗ್​ ಸೆಟ್​ನಿಂದ ಒಂದು ಫೋಟೋ ಲೀಕ್​ ಆಗಿದೆ. ಇದರಲ್ಲಿ ಟಾಬಿ ಮಗ್ವಾಯರ್​, ಆ್ಯಂಡ್ರೀವ್​ ಗಾರ್ಫೀಲ್ಡ್​​ ಮತ್ತು ಟಾಮ್​ ಹಾಲೆಂಡ್​ ಒಂದೇ ಫ್ರೇಮ್​ನಲ್ಲಿ ಇರುವುದು ಖಚಿತ ಆಗಿದೆ.

ಸ್ಪೈಡರ್​ ಮ್ಯಾನ್​​ ಲೀಕ್​: ಒಂದೇ ಫೋಟೋದಲ್ಲಿ ಅಭಿಮಾನಿಗಳಿಗೆ ನಿರಾಸೆ ಮತ್ತು ನಿರೀಕ್ಷೆ
ಸ್ಪೈಡರ್​ ಮ್ಯಾನ್​​ ಫೋಟೋ ಲೀಕ್
TV9 Web
| Edited By: |

Updated on: Nov 10, 2021 | 9:40 AM

Share

‘ಸ್ಪೈಡರ್​ ಮ್ಯಾನ್’​ ಸಿನಿಮಾ ಸರಣಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಈ ಪಾತ್ರವು ಹಲವು ವರ್ಷ​ಗಳಿಂದ ಜನರಿಗೆ ಮನರಂಜನೆ ನೀಡುತ್ತಾ ಬಂದಿದೆ. ಅನೇಕ ಪಾರ್ಟ್​​ಗಳಲ್ಲಿ ಮೂಡಿಬಂದಿರುವ ‘ಸ್ಪೈಡರ್​ ಮ್ಯಾನ್​’ ಸಿನಿಮಾ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ಈಗಲೂ ಅಷ್ಟೇ ಕ್ರೇಜ್​ ಇದೆ. ಈಗ ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ವರ್ಷ ಡಿ.17ರಂದು ವಿಶ್ವಾದ್ಯಂತ ರಿಲೀಸ್​ ಆಗಲಿರುವ ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆದರೆ ಈಗ ಒಂದು ಫೋಟೋ ಲೀಕ್​ ಆಗಿದ್ದು, ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

2002ರಿಂದ 2007ರವರೆಗೆ ಬಂದ ಮೂರು ಸಿನಿಮಾಗಳಲ್ಲಿ ಸ್ಪೈಡರ್​ ಮ್ಯಾನ್​ ಪಾತ್ರವನ್ನು ನಟ ಟಾಬಿ ಮಗ್ವಾಯರ್ ನಿಭಾಯಿಸಿದ್ದರು. ಆ ಬಳಿಕ 2012 ಮತ್ತು 2014ರಲ್ಲಿ ಬಂದ ‘ಸ್ಪೈಡರ್​ ಮ್ಯಾನ್​’ ಸಿನಿಮಾಗಳಲ್ಲಿ ನಟ ಆ್ಯಂಡ್ರೀವ್​ ಗಾರ್ಫೀಲ್ಡ್​​ ಹೀರೋ ಆಗಿದ್ದರು. 2016ರಿಂದ ಈಚೆಗೆ ಟಾಮ್​ ಹಾಲೆಂಡ್​ ಅವರು ಸ್ಪೈಡರ್​ ಮ್ಯಾನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಚ್ಚರಿ ಎಂದರೆ ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಸಿನಿಮಾದಲ್ಲಿ ಈ ಮೂವರೂ ಒಟ್ಟಾಗಿ ತೆರೆಹಂಚಿಕೊಂಡಿದ್ದಾರೆ.

‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಸಿನಿಮಾದ ಶೂಟಿಂಗ್​ ಸೆಟ್​ನಿಂದ ಒಂದು ಫೋಟೋ ಲೀಕ್​ ಆಗಿದೆ. ಇದರಲ್ಲಿ ಟಾಬಿ ಮಗ್ವಾಯರ್​, ಆ್ಯಂಡ್ರೀವ್​ ಗಾರ್ಫೀಲ್ಡ್​​ ಮತ್ತು ಟಾಮ್​ ಹಾಲೆಂಡ್​ ಒಂದೇ ಫ್ರೇಮ್​ನಲ್ಲಿ ಇರುವುದು ಖಚಿತ ಆಗಿದೆ. ಅದನ್ನು ನೋಡಿ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಅದೇ ರೀತಿ ಭಾರಿ ನಿರಾಸೆ ಕೂಡ ಮೂಡಿದೆ. ಯಾಕೆಂದರೆ, ಈ ಫೋಟೋ ಮೂಲಕ ಸಿನಿಮಾದ ಕಥೆ ಲೀಕ್​ ಆದಂತಾಗಿದೆ.

‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಟಾಬಿ ಮಗ್ವಾಯರ್​, ಆ್ಯಂಡ್ರೀವ್​ ಗಾರ್ಫೀಲ್ಡ್​​ ಮತ್ತು ಟಾಮ್​ ಹಾಲೆಂಡ್ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎಂಬ ಸೀಕ್ರೆಟ್​ ಬಯಲಾದ ಬಳಿಕ ಪ್ರೇಕ್ಷಕರಲ್ಲಿ ಕ್ಲೈಮ್ಯಾಕ್ಸ್​ ಬಗ್ಗೆ ಯಾವುದೇ ಕುತೂಹಲ ಉಳಿದಿಲ್ಲ. ಹಾಗಾಗಿ ‘ಸ್ಪೈಡರ್​ ಮ್ಯಾನ್​’ ಸಿನಿಮಾದ ಅಪ್ಪಟ ಅಭಿಮಾನಿಗಳಿಗೆ ಈ ಪೋಸ್ಟರ್​ ನೋಡಿ ತೀವ್ರ ನಿರಾಸೆ ಆಗಿದೆ.

ಸದ್ಯ ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಇದರ ಜೊತೆಗೆ ಇನ್ನೂ ಕೆಲವು ಫೋಟೋಗಳು ಲೀಕ್​ ಆಗಿದ್ದು, ಅನೇಕ ಪಾತ್ರಗಳ ಬಗ್ಗೆ ಮಾಹಿತಿ ಬಹಿರಂಗ ಆಗಿದೆ. ಇದು ಚಿತ್ರದ ಮೇಲೆ ಪರಿಣಾಮ ಬೀರಲಿದೆ. ಟಾಮ್​ ಹಾಲೆಂಡ್ ಅವರು ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಚಿತ್ರದ ಬಳಿಕ ಸ್ಪೈಡರ್ ಮ್ಯಾನ್​ ಪಾತ್ರದಲ್ಲಿ ಮುಂದುವರಿಯುವುದಿಲ್ಲ ಎಂಬ ಸುದ್ದಿ ಕೂಡ ಹಬ್ಬಿದೆ.

ಇದನ್ನೂ ಓದಿ:

ಪಬ್​ನಲ್ಲಿ ಪಾತ್ರೆ ತೊಳೆಯುತ್ತಿದ್ದ ಯುವಕ ‘ಸ್ಪೈಡರ್​ ಮ್ಯಾನ್​’ ಆದ; ನಟ ಟಾಮ್​ ಹಾಲೆಂಡ್​ ಲೈಫ್​ ಸ್ಟೋರಿ

ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ಗೆ ‘ಫೌಂಡೇಶನ್​’ ಅವಕಾಶ; ಹಾಲಿವುಡ್​ ಕಲಾವಿದರ ಜತೆ ನಟನೆ

Follow Us
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು