ತೆರೆಗೆ ಬರುತ್ತಿದೆ ಮೈಕಲ್ ಜಾಕ್ಸನ್ ಜೀವನ: ಬಿಡುಗಡೆ ಯಾವಾಗ?

Michael Jackson: ಖ್ಯಾತ ಪಾಪ್ ತಾರೆ ಮೈಕಲ್ ಜಾಕ್ಸನ್ ಇಂದಿಗೂ ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಭಾರತದ ಪ್ರಭುದೇವ ಸೇರಿದಂತೆ ಕೋಟ್ಯಂತರ ಕಲಾವಿದರಿಗೆ ಪ್ರೇರಣೆಯಾಗಿದ್ದಾರೆ. ಪಾಪ್ ರಾಜನೆಂಬ ಹೆಸರನ್ನು ಪಡೆದಿದ್ದ ಮೈಕಲ್ ಅವರ ಖಾಸಗಿ ಜೀವನ ಸಾಕಷ್ಟು ನೋವು, ಹೋರಾಟಗಳಿಂದ ಕೂಡಿತ್ತು. ಇದೀಗ ಮೈಕಲ್ ಜಾಕ್ಸನ್ ಜೀವನ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ.

ತೆರೆಗೆ ಬರುತ್ತಿದೆ ಮೈಕಲ್ ಜಾಕ್ಸನ್ ಜೀವನ: ಬಿಡುಗಡೆ ಯಾವಾಗ?
Michael Movie

Updated on: Jan 30, 2026 | 6:10 PM

ವಿಶ್ವ ಸಂಗೀತ ಮತ್ತು ಪಾಪ್ ಕ್ಷೇತ್ರದಲ್ಲಿ ದಂತಕತೆ. ಅವರ ನೃತ್ಯ ಮತ್ತು ಹಾಡು ಅಮೆರಿಕದ ಪಾಪ್ ಸಂಸ್ಕೃತಿಯನ್ನೇ ಬದಲಾಯಿಸಿತು. ಮೈಕಲ್ ಜಾಕ್ಸನ್ (michael jackson) ಅವರ ನೃತ್ಯ ಶೈಲಿ, ಅವರ ಥ್ರಿಲ್ಲರ್, ಬ್ಯಾಡ್ ಮತ್ತು ಡೇಂಜರಸ್ ಆಲ್ಬಂಗಳು ಇತಿಹಾಸವನ್ನೇ ನಿರ್ಮಿಸಿವೆ. ಮೈಕಲ್ ಜಾಕ್ಸನ್ ಇಂದಿಗೂ ಸಹ ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಭಾರತದ ಪ್ರಭುದೇವ ಸೇರಿದಂತೆ ಕೋಟ್ಯಂತರ ಕಲಾವಿದರಿಗೆ ಪ್ರೇರಣೆಯಾಗಿದ್ದಾರೆ. ಪಾಪ್ ರಾಜನೆಂಬ ಹೆಸರನ್ನು ಪಡೆದಿದ್ದ ಮೈಕಲ್ ಅವರ ಖಾಸಗಿ ಜೀವನ ಸಾಕಷ್ಟು ನೋವು, ಹೋರಾಟಗಳಿಂದ ಕೂಡಿತ್ತು. ಇದೀಗ ಮೈಕಲ್ ಜಾಕ್ಸನ್ ಜೀವನ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ.

ಮೈಕಲ್ ಜಾಕ್ಸನ್ ಜೀವನ ಆಧರಿಸಿದ ಸಿನಿಮಾ ಹಾಲಿವುಡ್​​ನಲ್ಲಿ ನಿರ್ಮಾಣಗೊಂಡಿದ್ದು ಸಿನಿಮಾಕ್ಕೆ ‘ಮೈಕಲ್’ ಎಂದು ಹೆಸರಿಡಲಾಗಿದೆ. ಈ ಹಿಂದೆ ಭಾರತೀಯ ಮೂಲದ ಪಾಪ್ ತಾರೆ ಫ್ರೆಡ್ಡಿ ಮರ್ಕ್ಯುರಿ ಜೀವನ ಆಧರಿಸಿದ ‘ಬೊಹಿಮಿಯನ್ ರಾಪ್ಸಡಿ’ ಸಿನಿಮಾ ನಿರ್ಮಾಣ ಮಾಡಿದ್ದ ಗ್ರಹಾಂ ಕಿಂಗ್, ಇದೀಗ ಮೈಕಲ್ ಜಾಕ್ಸನ್ ಜೀವನ ಆಧರಿಸಿದ ‘ಮೈಖಲ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ಮೈಕಲ್’ ಸಿನಿಮಾವನ್ನು ಆಂಟೊನಿ ಫರುಖಾ ನಿರ್ದೇಶನ ಮಾಡಿದ್ದಾರೆ.

ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗಿದೆ. ಈ ಸಿನಿಮಾ ಮೈಖಲ್ ಜಾಕ್ಸನ್ ಅವರ ಬಾಲ್ಯ, ಯೌವ್ವನ ಅವರ ಜನಪ್ರಿಯತೆ, ಅವರ ಬಣ್ಣ ಬದಲಾವಣೆ ಅದಕ್ಕೆ ಕಾರಣ, ಮೈಕಲ್ ಅನ್ನು ಸುತ್ತಿಕೊಂಡ ವಿವಾದಗಳು, ಮೈಕಲ್​ ಆರೋಗ್ಯ ಸಮಸ್ಯೆ, ಅವರ ಸಾವು ಎಲ್ಲವನ್ನೂ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಅಂತೂ ಅದ್ಭುತವಾಗಿ ಮೂಡಿ ಬಂದಿದೆ. ಮೈಕಲ್ ಅವರ ಒರಿಜಿನಲ್ ಹಾಡುಗಳನ್ನು ಹಾಗೆಯೇ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ:ಹಾಲಿವುಡ್ ಸ್ಟಾರ್ ನಟನಿಗೆ ಭಾರತದ ಈ ನಿರ್ದೇಶಕನೊಟ್ಟಿಗೆ ಕೆಲಸ ಮಾಡುವ ಆಸೆ

ಮೈಕಲ್ ಜಾಕ್ಸನ್ ಪಾತ್ರದಲ್ಲಿ ಅವರ ಸಹೋದರನ ಪುತ್ರ ಆಗಿರುವ ಜಾಫರ್ ಜಾಕ್ಸನ್ ಅವರೇ ನಟಿಸುತ್ತಿರುವುದು ವಿಶೇಷ. ಜಾಫರ್ ಜಾಕ್ಸನ್ ಸ್ವತಃ ಗಾಯಕ ಮತ್ತು ನಟರಾಗಿದ್ದು, ತಮ್ಮ ಅಂಕಲ್​ ಪಾತ್ರದಲ್ಲಿಯೇ ಅವರು ನಟಿಸುತ್ತಿದ್ದಾರೆ. ಜಾಫರ್ ಜಾಕ್ಸನ್​​ಗೆ ‘ಮೈಕಲ್’ ಮೊದಲ ಸಿನಿಮಾ ಆಗಿದೆ. ಟ್ರೈಲರ್​​ನಲ್ಲಿ ಮೈಕಲ್ ಆಗಿ ಅವರು ಗಮನ ಸೆಳೆಯುತ್ತಿದ್ದಾರೆ. 1300 ಕೋಟಿ ಬಜೆಟ್​​ನಲ್ಲಿ ಸಿನಿಮಾವನ್ನು ನಿರ್ಮಿಸಲಾಗಿದ್ದು, ಸಿನಿಮಾದ ಮೊದಲ ಪ್ರೀಮಿಯರ್ ಏಪ್ರಿಲ್ 10 ರಂದು ಬರ್ಲಿನ್​​ನಲ್ಲಿ ನಡೆಯಲಿದೆ. ಬಳಿಕ ಏಪ್ರಿಲ್ 24 ರಂದು ವಿಶ್ವದಾದ್ಯಂತ ‘ಮೈಕಲ್’ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ