AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿವುಡ್ ಸ್ಟಾರ್ ನಟನಿಗೆ ಭಾರತದ ಈ ನಿರ್ದೇಶಕನೊಟ್ಟಿಗೆ ಕೆಲಸ ಮಾಡುವ ಆಸೆ

Hollywood actor: ಭಾರತೀಯ ಸಿನಿಮಾಗಳನ್ನು ಪಾಶ್ಚಾತ್ಯರು ಕಡೆಗಣಿಸುತ್ತಿದ್ದ ಕಾಲವೊಂದಿತ್ತು. ಈಗ ಪರಿಸ್ಥಿತಿ ಹೇಗಿದೆಯೆಂದರೆ ಹಾಲಿವುಡ್​ನ ಭಾರಿ ದೊಡ್ಡ ಸ್ಟಾರ್ ನಟರುಗಳು ಸಹ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಲು ಕಾತರರಾಗಿದ್ದಾರೆ, ಮಾತ್ರವಲ್ಲ ಭಾರತದ ನಿರ್ದಿಷ್ಟ ನಿರ್ದೇಶಕನ ಜೊತೆ ಕೆಲಸ ಮಾಡುವುದು ನನ್ನ ಕನಸು’ ಎಂದು ಇದೀಗ ಹಾಲಿವುಡ್​ನ ಸ್ಟಾರ್ ನಟರೊಬ್ಬರು ಹೇಳಿಕೊಂಡಿದ್ದಾರೆ.

ಹಾಲಿವುಡ್ ಸ್ಟಾರ್ ನಟನಿಗೆ ಭಾರತದ ಈ ನಿರ್ದೇಶಕನೊಟ್ಟಿಗೆ ಕೆಲಸ ಮಾಡುವ ಆಸೆ
Tom Loki
ಮಂಜುನಾಥ ಸಿ.
|

Updated on: Jan 20, 2026 | 12:19 PM

Share

ಭಾರತೀಯ ಚಿತ್ರರಂಗವನ್ನು (Indian Cinea) ಪಾಶ್ಚಿಮಾತ್ಯರು ಅಸಡ್ಡೆಯಿಂದ ನೋಡುವ ಕಾಲವೊಂದಿತ್ತು. ಭಾರತೀಯ ಸಿನಿಮಾಗಳೆಂದರೆ ಹಾಡು-ನೃತ್ಯ, ನಾಯಕರ ಅತಿಯಾದ ವೈಭವೀಕರ, ಮೆಲೊ ಡ್ರಾಮಾ, ಕಳಪೆ ಪ್ರೊಡಕ್ಷನ್ ಗುಣಮಟ್ಟ ಇಂಥಹವೇ ಎಂದು ಪಾಶ್ಚಾತ್ಯರು ನಂಬಿಕೊಂಡಿದ್ದರು. ಆದರೆ ನಿಧಾನಕ್ಕೆ ಅದು ಬದಲಾಯ್ತು. ಈಗ ಪರಿಸ್ಥಿತಿ ಹೇಗಿದೆಯೆಂದರೆ ಹಾಲಿವುಡ್​ನ ಭಾರಿ ದೊಡ್ಡ ಸ್ಟಾರ್ ನಟರುಗಳು ಸಹ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಲು ಕಾತರರಾಗಿದ್ದಾರೆ, ಮಾತ್ರವಲ್ಲ ಭಾರತದ ನಿರ್ದಿಷ್ಟ ನಿರ್ದೇಶಕನ ಜೊತೆ ಕೆಲಸ ಮಾಡುವುದು ನನ್ನ ಕನಸು’ ಎಂದು ಇದೀಗ ಹಾಲಿವುಡ್​ನ ಸ್ಟಾರ್ ನಟರೊಬ್ಬರು ಹೇಳಿಕೊಂಡಿದ್ದಾರೆ.

‘ಅವೇಂಜರ್ಸ್’ ಸಿನಿಮಾ ಯಾರಿಗೆ ಗೊತ್ತಿಲ್ಲ. ‘ಅವೇಂಜರ್ಸ್’ ಸರಣಿಯ ಮೊದಲ ಸಿನಿಮಾನಲ್ಲಿ ಅದ್ಭುತ ವಿಲನ್ ಲೋಕಿ ಸಹ ಸಿನಿಮಾ ಪ್ರೇಕ್ಷಕರಿಗೆ ಬಲು ಪರಿಚಿತ ಪಾತ್ರ. ಆ ಪಾತ್ರ ಅದೆಷ್ಟು ಹಿಟ್ ಆಯ್ತೆಂದರೆ ಅದರ ಪ್ರತ್ಯೇಕ ವೆಬ್ ಸರಣಿಯನ್ನು ಸಹ ಮಾಡಲಾಗಿದೆ. ‘ಅವೇಂಜರ್ಸ್​​’ನ ಲೋಕಿ ಪಾತ್ರದಲ್ಲಿ ನಟಿಸಿರುವ ಕಲಾವಿದ ಟಾಮ್ ಹಿಡಲ್​ಸ್ಟನ್ ಹಾಲಿವುಡ್​ನ ಜನಪ್ರಿಯ ನಟರಲ್ಲಿ ಒಬ್ಬರು. ಟಾಮ್ ಹಿಡಲ್​​ಸ್ಟನ್​​ನ ಭಾರತದ ನಿರ್ದೇಶಕರೊಬ್ಬರೊಟ್ಟಿಗೆ ಕೆಲಸ ಮಾಡುವ ಆಸೆಯಿದೆಯಂತೆ.

ಭಾರತ ಚಿತ್ರರಂಗದ ಪ್ರಸ್ತುತ ನಂಬರ್ 1 ನಿರ್ದೇಶಕ ಎಸ್​​ಎಸ್ ರಾಜಮೌಳಿ ಅವರೊಟ್ಟಿಗೆ ಕೆಲಸ ಮಾಡುವ ಕನಸು ಟಾಮ್ ಹಿಡಲ್​​ಸ್ಟನ್ ಅವರದ್ದಂತೆ. ಈ ಬಗ್ಗೆ ಮಾತನಾಡಿರುವ ಟಾಮ್, ರಾಜಮೌಳಿಯನ್ನು ‘ಎಕ್ಸಲೆಂಟ್’ ಎಂದು ಕರೆದಿರುವ ಜೊತೆಗೆ ತಮಗೆ ಭಾರತೀಯ ಸಿನಿಮಾ ನಿರ್ದೇಶಕರುಗಳಲ್ಲಿ ರಾಜಮೌಳಿ ಅವರೊಟ್ಟಿಗೆ ಕೆಲಸ ಮಾಡುವ ಆಸೆಯಿದೆ ಎಂದಿದ್ದಾರೆ. ಟಾಮ್ ಹಿಡಲ್​​ಸ್ಟನ್ ಅವರ ಬಲು ಜನಪ್ರಿಯ ವೆಬ್ ಸರಣಿ ‘ದಿ ನೈಟ್ ಮ್ಯಾನೇಜರ್​’ನ ಎರಡನೇ ಸರಣಿ ಬಿಡುಗಡೆ ಆಗಲಿದ್ದು, ಅದರ ಪ್ರಚಾರದಲ್ಲಿ ಟಾಮ್ ಹಿಡಲ್​​ಸ್ಟನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:ರಾಜಮೌಳಿಯ ‘ವಾರಣಾಸಿ’ಗಿಂತ ಮೂರು ಪಟ್ಟು ಹೆಚ್ಚು ವೀವ್ಸ್ ಪಡೆದ ‘ಟಾಕ್ಸಿಕ್’ ಟೀಸರ್

ಇನ್ನು ರಾಜಮೌಳಿ ಪ್ರಸ್ತುತ ‘ವಾರಣಾಸಿ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹರಿದಾಡುತ್ತಿರುವ ಸುದ್ದಿಯ ಪ್ರಕಾರ ‘ವಾರಣಾಸಿ’ ಸಿನಿಮಾನಲ್ಲಿ ಖ್ಯಾತ ಹಾಲಿವುಡ್ ನಟರೊಬ್ಬರು ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ. ಆದರೆ ಅದ್ಯಾರು ಎಂಬುದು ಇನ್ನೂ ಖಾತ್ರಿ ಆಗಿಲ್ಲ. ‘ವಾರಣಾಸಿ’ ಸಿನಿಮಾನಲ್ಲಿ ಮಹೇಶ್ ಬಾಬು ನಾಯಕನಾಗಿ ನಟಿಸಿದ್ದು ಪ್ರಿಯಾಂಕಾ ಚೋಪ್ರಾ ನಾಯಕಿ. ಪೃಥ್ವಿರಾಜ್ ಸುಕುಮಾರನ್ ವಿಲನ್. ಸಿನಿಮಾಕ್ಕಾಗಿ ಹಲವು ಹಾಲಿವುಡ್ ತಂತ್ರಜ್ಞರು, ಸ್ಟುಡಿಯೋಗಳು ಕೆಲಸ ಮಾಡಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ