Lisa Marie Presley: ಮೈಕಲ್ ಜಾಕ್ಸನ್ ಮಾಜಿ ಪತ್ನಿ, ಖ್ಯಾತ ಗಾಯಕಿ ಲೀಸಾ ನಿಧನ

ಲೀಸಾ ಅವರು ಲಾಸ್​ ಏಂಜಲೀಸ್​ನ ಮನೆಯಲ್ಲಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿದೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ.

Lisa Marie Presley: ಮೈಕಲ್ ಜಾಕ್ಸನ್ ಮಾಜಿ ಪತ್ನಿ, ಖ್ಯಾತ ಗಾಯಕಿ ಲೀಸಾ ನಿಧನ
Updated By: ರಾಜೇಶ್ ದುಗ್ಗುಮನೆ

Updated on: Jan 13, 2023 | 11:55 AM

ಖ್ಯಾತ ಗಾಯಕ ಎಲ್ವಿಸ್​ ಪ್ರೆಸ್ಲಿ (Elvis Presley) ಮಗಳು, ಖ್ಯಾತ ಗಾಯಕಿ ಲೀಸಾ ಮರೀ ಪ್ರೆಸ್ಲಿ (Lisa Marie Presley)  ಅವರು ಗುರುವಾರ (ಜನವರಿ 12) ಲಾಸ್​ ಏಂಜಲೀಸ್​​ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಲೀಸಾ ಅವರನ್ನು ಕಳೆದುಕೊಂಡಿರುವುದು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಲೀಸಾ ಮರೀ ಪ್ರೆಸ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಕೋರುತ್ತಿದ್ದಾರೆ.

ಲೀಸಾ ಅವರು ಲಾಸ್​ ಏಂಜಲೀಸ್​ನ ಮನೆಯಲ್ಲಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿದೆ. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಿಲ್ಲ.

1968ರಲ್ಲಿ ಲೀಸಾ ಜನಿಸಿದರು. ಅವರು ಜನಿಸಿದ ಕೆಲವೇ ವರ್ಷಗಳಲ್ಲಿ ತಂದೆ ಎಲ್ವಿಸ್ ನಿಧನ ಹೊಂದಿದರು. 2003ರಲ್ಲಿ ಲೀಸಾ ಸಂಗೀತ ಲೋಕಕ್ಕೆ ಕಾಲಿಟ್ಟರು. ‘ಟು ಹೂಮ್ ಇಟ್ ಮೇ ಕನ್ಸರ್ನ್​’ ಆಲ್ಬಂ ಮೂಲಕ ವೃತ್ತಿಜೀವನ ಆರಂಭಿಸಿದರು. 2005ರಲ್ಲಿ ಬಂದ ‘ನವ್ ವಾಟ್​’ ಆಲ್ಬಂ ಸೂಪರ್ ಹಿಟ್ ಆಯಿತು. ‘ಸ್ಟಾರ್ಮ್​ ಆ್ಯಂಡ್ ಗ್ರೇಸ್​’ ಆಲ್ಬಂ 2012ರಲ್ಲಿ ರಿಲೀಸ್ ಆಯಿತು.

ಇದನ್ನೂ ಓದಿ: Viral Video: ಎಲ್ಲೆಡೆ ಸಖತ್ ಸದ್ದು ಮಾಡ್ತಿದೆ ಈ ‘ದೇಸಿ ಮೈಕಲ್ ಜಾಕ್ಸನ್’ ನೃತ್ಯ; ವಿಡಿಯೊ ನೋಡಿ

ಲೀಸಾ ನಾಲ್ಕು ಬಾರಿ ಮದುವೆ ಆಗಿದ್ದರು. 1988ರಲ್ಲಿ ಡ್ಯಾನಿಯನ್ನು ಮದುವೆ ಆದರು. 1994ರಲ್ಲಿ ಇವರ ವಿಚ್ಛೇದನ ಆಯಿತು. ಅದಾದ ಕೇವಲ 20 ದಿನಕ್ಕೆ ಮೈಕಲ್ ಜಾಕ್ಸನ್​ ಅವರನ್ನು ಲೀಸಾ ಮದುವೆ ಆದರು! ಇವರು ಎರಡು ವರ್ಷ ಸಂಸಾರ ನಡೆಸಿದರು. ನಿಕೋಲಸ್ ಕೇಜ್​ (2002-2004), ಮೈಕಲ್ ಲಾಕ್​ವುಡ್​ (2006-2021) ಜತೆ ಲೀಸಾ ಸಂಸಾರ ನಡೆಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ