ನಿರ್ಮಾಣ ಸಂಸ್ಥೆಗೆ ದಾಖಲೆಯ 10 ಲಕ್ಷ ಕೋಟಿ ಆಫರ್, ಓಕೆ ಆಗುತ್ತಾ ಡೀಲ್?

Hollywood Production house: ಹಾಲಿವುಡ್‌ನ ಅತಿದೊಡ್ಡ ವ್ಯವಹಾರವೊಂದು ನಡೆಯುತ್ತಿದೆ. ಹಾಲಿವುಡ್​ನ ಅತ್ಯಂತ ಯಶಸ್ವಿ, ಜನಪ್ರಿಯ ಮತ್ತು ಹಳೆಯ ನಿರ್ಮಾಣ ಸಂಸ್ಥೆಯಾದ ವಾರ್ನರ್ಸ್ ಬ್ರದರ್ಸ್​​ ನ ಮಾರಾಟ ಆಗಲಿಕ್ಕಿದೆ. ನೆಟ್​​ಫ್ಲಿಕ್ಸ್​ ಸೇರಿದಂತೆ ಕೆಲವು ದೊಡ್ಡ ನಿರ್ಮಾಣ ಸಂಸ್ಥೆಗಳು, ಉದ್ಯಮಪತಿಗಳು ಈ ನಿರ್ಮಾಣ ಸಂಸ್ಥೆಯ ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಆದರೆ ಇದೀಗ ಈ ವ್ಯವಹಾರದಲ್ಲಿ ಭಾರಿ ದೊಡ್ಡ ಬದಲಾವಣೆಯಾಗಿದೆ.

ನಿರ್ಮಾಣ ಸಂಸ್ಥೆಗೆ ದಾಖಲೆಯ 10 ಲಕ್ಷ ಕೋಟಿ ಆಫರ್, ಓಕೆ ಆಗುತ್ತಾ ಡೀಲ್?
Deal

Updated on: Mar 01, 2026 | 5:58 PM

ಹಾಲಿವುಡ್‌ನ (Hollywood) ಅತಿದೊಡ್ಡ ವ್ಯವಹಾರವೊಂದು ನಡೆಯುತ್ತಿದೆ. ಕಳೆದ ಕೆಲ ತಿಂಗಳುಗಳಿಂದಲೂ ಹಾಲಿವುಡ್​​ನ ಸಿನಿಮಾ ಪ್ರೇಮಿಗಳು, ದೊಡ್ಡ ಸಿನಿಮಾ ಉದ್ಯಮಿಗಳು, ತೆರಿಗೆ ಇಲಾಖೆಯವರು ಇನ್ನೂ ಹಲವು ಕ್ಷೇತ್ರದವರು ಈ ವ್ಯವಹಾರದ ಮೇಲೆ ಕಣ್ಣಿಟ್ಟಿದ್ದಾರೆ. ಹಾಲಿವುಡ್​ನ ಅತ್ಯಂತ ಯಶಸ್ವಿ, ಜನಪ್ರಿಯ ಮತ್ತು ಹಳೆಯ ನಿರ್ಮಾಣ ಸಂಸ್ಥೆಯಾದ ವಾರ್ನರ್ಸ್ ಬ್ರದರ್ಸ್​​ ನ ಮಾರಾಟ ಆಗಲಿಕ್ಕಿದೆ. ನೆಟ್​​ಫ್ಲಿಕ್ಸ್​ ಸೇರಿದಂತೆ ಕೆಲವು ದೊಡ್ಡ ನಿರ್ಮಾಣ ಸಂಸ್ಥೆಗಳು, ಉದ್ಯಮಪತಿಗಳು ಈ ನಿರ್ಮಾಣ ಸಂಸ್ಥೆಯ ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಆದರೆ ಇದೀಗ ಈ ವ್ಯವಹಾರದಲ್ಲಿ ಭಾರಿ ದೊಡ್ಡ ಬದಲಾವಣೆಯಾಗಿದೆ.

ವಾರ್ನರ್ ಬ್ರದರ್ಸ್ ಅನ್ನು ಪ್ರಸಿದ್ಧ ಸ್ಟ್ರೀಮಿಂಗ್ ಸಂಸ್ಥೆ ನೆಟ್‌ಫ್ಲಿಕ್ಸ್ ಖರೀದಿ ಮಾಡಲಿದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ನೆಟ್​​ಫ್ಲಿಕ್ಸ್​ ಸಹ ವಾರ್ನರ್ ಬ್ರದರ್ಸ್​​ನ ಪ್ರತಿ ಷೇರಿಗೆ 27 ಡಾಲರ್ ಹಣ ಪಾವತಿಸಲು ತಯಾರಿರುವುದಾಗಿ ಬಿಡ್ ಹೂಡಿತ್ತು. ಅಲ್ಲಿಗೆ ಒಟ್ಟು ವಾರ್ನರ್ ಬ್ರದರ್ಸ್​​ಗೆ 9.97 ಲಕ್ಷ ಕೋಟಿ ಹಣದ ಆಫರ್ ಅನ್ನು ನೀಡಿತ್ತು. ಇನ್ನೇನು ವಾರ್ನರ್ ಬ್ರದರ್ಸ್ ಅನ್ನು ನೆಟ್​ಫ್ಲಿಕ್ಸ್ ಖರೀದಿಸಿಯೇ ಬಿಟ್ಟಿತು ಎಂದುಕೊಳ್ಳುತ್ತಿರುವಾಗ ಹಾಲಿವುಡ್​ನ ಮತ್ತೊಂದು ಜನಪ್ರಿಯ ಮತ್ತು ಯಶಸ್ವಿ ಸಿನಿಮಾ ನಿರ್ಮಾಣ ಸಂಸ್ಥೆಯಾದ ಪ್ಯಾರಾಮೌಂಟ್ ಅಖಾಡಕ್ಕೆ ಧುಮುಕಿದ್ದು ನೆಟ್​​ಫ್ಲಿಕ್ಸ್​​ಗಿಂತಲೂ ಉತ್ತಮ ಆಫರ್ ಅನ್ನು ನೀಡಿದೆ.

ಕಳೆದ ಕೆಲವು ತಿಂಗಳುಗಳಿಂದ ನೆಟ್‌ಫ್ಲಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ನಡುವೆ ಮಾತುಕತೆ ನಡೆಯುತ್ತಿತ್ತು. ವಾರ್ನರ್ ಬ್ರದರ್ಸ್‌ನ ಸ್ಟುಡಿಯೋ ಮತ್ತು ಸ್ಟ್ರೀಮಿಂಗ್ ವ್ಯವಹಾರವನ್ನು ಖರೀದಿಸಲು ನೆಟ್‌ಫ್ಲಿಕ್ಸ್ ಸುಮಾರು ಸುಮಾರು ಏಳು ಲಕ್ಷ ಕೋಟಿ ರೂಪಾಯಿ (83 ಬಿಲಿಯನ್ ಡಾಲರ್) ಬಿಡ್ ಮಾಡಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪ್ಯಾರಾಮೌಂಟ್ ಸಂಸ್ಥೆಯು ಇದಕ್ಕಿಂತ ಹೆಚ್ಚಿನ ಮೊತ್ತದ ಆಫರ್ ನೀಡಿದ್ದರಿಂದ, ನೆಟ್‌ಫ್ಲಿಕ್ಸ್ ಈ ರೇಸ್‌ನಿಂದ ಹೊರಬರಲು ನಿರ್ಧರಿಸಿದೆ. ‘ಹೆಚ್ಚಿನ ಬೆಲೆ ತೆತ್ತು ಈ ಕಂಪನಿಯನ್ನು ಖರೀದಿಸುವುದು ಆರ್ಥಿಕವಾಗಿ ಲಾಭದಾಯಕವಲ್ಲ’ ಎಂದು ನೆಟ್‌ಫ್ಲಿಕ್ಸ್‌ನ ಸಿಇಒಗಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ಆ ಡೀಲ್​​ನಿಂದ ಅಸಮಾಧಾನಗೊಂಡ ‘ಟೈಟಾನಿಕ್’ ನಿರ್ದೇಶಕ; ಹಾಲಿವುಡ್​​ಗೆ ಎಚ್ಚರಿಕೆ ಕೊಟ್ಟ ಜೇಮ್ಸ್ ಕ್ಯಾಮೆರಾನ್

ಪ್ಯಾರಾಮೌಂಟ್ ಸಂಸ್ಥೆಯು ವಾರ್ನರ್ ಬ್ರದರ್ಸ್ ಕಂಪನಿಯನ್ನು ಪೂರ್ತಿಯಾಗಿ ಖರೀದಿಸಲು ಸುಮಾರು 10 ಲಕ್ಷ ಕೋಟಿ ರೂಪಾಯಿ (111 ಬಿಲಿಯನ್ ಡಾಲರ್) ಮೊತ್ತದ ಬಿಡ್ ಮಾಡಿದೆ. ಇದು ನೆಟ್‌ಫ್ಲಿಕ್ಸ್ ನೀಡಿದ್ದ ಆಫರ್ಗಿಂತ ಸುಮಾರು 2.4 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚು. ಈ ಮೊತ್ತದಲ್ಲಿ ಕಂಪನಿಯ ಸಾಲಗಳೂ ಸೇರಿವೆ. ಆದರೆ ಈ ಆಫರ್ ಅನ್ನು ವಾರ್ನರ್ಸ್ ಬ್ರದರ್ಸ್ ಕಂಪೆನಿಯ ಹೂಡಿಕೆದಾರರು, ಆಡಳಿತ ವರ್ಗ ಒಪ್ಪಿಕೊಳ್ಳುವುದು ಬಾಕಿ ಇದೆ. ಒಂದೊಮ್ಮೆ ಈ ಡೀಲ್ ನಡೆದರೆ ಪ್ಯಾರಾಮೌಂಟ್ ಹಾಲಿವುಡ್‌ನ ಅತ್ಯಂತ ಶಕ್ತಿಶಾಲಿ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಲಿದೆ.

ಪ್ಯಾರಾಮೌಂಟ್ ಈಗ ವಾರ್ನರ್ ಬ್ರದರ್ಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದರಿಂದ, ಪ್ರಪಂಚದ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳು ಒಂದೇ ಸೂರಿನಡಿ ಬರಲಿವೆ. ‘ಹ್ಯಾರಿ ಪಾಟರ್’, ‘ಗೇಮ್ ಆಫ್ ಥ್ರೋನ್ಸ್’ ನಂತಹ ಜನಪ್ರಿಯ ಸರಣಿಗಳು ಈಗ ಪ್ಯಾರಾಮೌಂಟ್ ಪಾಲಾಗಲಿವೆ. ಸುದ್ದಿ ವಾಹಿನಿ ಸಿಎನ್​​ಎನ್​, ಡಿಸಿ ಕಾಮಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ಸ್ಟುಡಿಯೋಗಳು ಪ್ಯಾರಾಮೌಂಟ್‌ ಪಾಲಾಗಲಿವೆ. ಕಂಟೆಂಟ್ ಕ್ಷೇತ್ರದಲ್ಲಿ ನೆಟ್​​ಫ್ಲಿಕ್ಸ್​​ಗೆ ಇದು ದೊಡ್ಡ ಹಿನ್ನಡೆಯನ್ನು ಮೂಡಿಸಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us