96ನೇ ಸಾಲಿನ ಆಸ್ಕರ್ ಅವಾರ್ಡ್ (Oscar Award) ಕಾರ್ಯಕ್ರಮ ಅಮೆರಿಕದ ಲಾಸ್ ಎಂಜಲೀಸ್ನಲ್ಲಿ ನಡೆದಿದೆ. ಡಾಲ್ಬಿ ಥಿಯೇಟರ್ನ ಅದ್ದೂರಿ ವೇದಿಕೆ ಮೇಲೆ ಜಿಮ್ಮಿ ಕಿಮ್ಮೆಲ್ ಅವರು ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ರಿಲೀಸ್ ಆಗಿ ಧೂಳೆಬ್ಬಿಸಿದ್ದ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್ಹೈಮರ್’ ಸಿನಿಮಾ ಅತ್ಯುತ್ತಮ ಚಿತ್ರ ಎಂಬ ಅವಾರ್ಡ್ ಪಡೆದದಿದೆ. ಈ ಮೂಲಕ ಸಿನಿಮಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಈ ಚಿತ್ರ ಬರೋಬ್ಬರಿ 13 ವಿಭಾಗದಲ್ಲಿ ನಾಮಿನೇಟ್ ಆಗಿತ್ತು ಅನ್ನೋದು ವಿಶೇಷ. ಈ ಪೈಕಿ ಹಲವು ಅವಾರ್ಡ್ಗಳನ್ನು ಪಡೆದಿದೆ.
ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ‘ಆಪನ್ಹೈಮರ್’ ಜೊತೆ ‘ಅಮೆರಿಕನ್ ಫಿಕ್ಷನ್’, ‘ಬಾರ್ಬಿ’, ‘ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್’ ಮೊದಲಾದ ಸಿನಿಮಾಗಳು ಸ್ಥಾನ ಪಡೆದಿದ್ದವು. ಇವುಗಳನ್ನು ಹಿಂದಿಕ್ಕಿ ‘ಆಪನ್ಹೈಮರ್’ ಸಿನಿಮಾ ಗೆಲುವು ಕಂಡಿದೆ. ಕಳೆದ ವರ್ಷ ‘ಆಪನ್ಹೈಮರ್’ ಹಾಗೂ ‘ಬಾರ್ಬಿ’ ಒಂದೇ ದಿನ ರಿಲೀಸ್ ಆಗಿದ್ದವು ಅನ್ನೋದು ವಿಶೇಷ. ಈಗ ಆಸ್ಕರ್ ರೇಸ್ನಲ್ಲಿ ಈ ವಿಭಾಗದಲ್ಲಿ ‘ಬಾರ್ಬಿ’ಗೆ ಅವಾರ್ಡ್ ಸಿಕ್ಕಿಲ್ಲ. ‘ಆಪನ್ಹೈಮರ್’ ಇನ್ನೂ ಕೆಲವು ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.
ಇದನ್ನೂ ಓದಿ: ಮಾರ್ಚ್ 11ಕ್ಕೆ ಆಸ್ಕರ್ ಅವಾರ್ಡ್ ಕಾರ್ಯಕ್ರಮ; ದಾಖಲೆ ಬರೆಯಲಿದೆಯೇ ‘ಆಪನ್ಹೈಮರ್’ ಸಿನಿಮಾ?
‘ಆಪನ್ಹೈಮರ್’ ಅನ್ನೋದು ಅಣುಬಾಂಬ್ ಕಂಡು ಹಿಡಿದ ವಿಜ್ಞಾನಿಯ ಹೆಸರು. ಅದೇ ಹೆಸರನಲ್ಲಿ ಸಿನಿಮಾ ಮಾಡಲಾಗಿದೆ. ಕಿಲಿಯನ್ ಮರ್ಫಿ ಆಪನ್ಹೈಮರ್ ಪಾತ್ರದಲ್ಲಿ ನಟಿಸಿದ್ದರು. ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.
ಅತ್ಯುತ್ತಮ ನಟ: ಕಿಲಿಯನ್ ಮರ್ಫಿ-ಆಪನ್ಹೈಮರ್
ಅತ್ಯುತ್ತಮ ನಿರ್ದೇಶನ: ಕ್ರಿಸ್ಟೋಫರ್ ನೋಲನ್- ಆಪನ್ಹೈಮರ್
ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್- ಪೂರ್ ಥಿಂಗ್ಸ್
ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ: ‘ದಿ ಜೋನ್ ಆಫ್ ಇಂಟರೆಸ್ಟ್’- ಯುನೈಟೆಡ್ ಕಿಂಗ್ಡಮ್
ಅತ್ಯುತ್ತಮ ಪೋಷಕ ನಟ: ರಾಬರ್ಟ್ ಡೌನೇ ಜೂನಿಯರ್ (ಆಪನ್ಹೈಮರ್)
ಅತ್ಯುತ್ತಮ ವಿಎಫ್ಎಕ್ಸ್: ಗಾಡ್ಜಿಲಾ ಮೈನಸ್ ಒನ್
ಅತ್ಯುತ್ತಮ ಸಂಕಲನ: ಆಪನ್ಹೈಮರ್
ಅತ್ಯುತ್ತಮ ಡಾಕ್ಯುಮೆಂಟರಿ ಕಿರುಚಿತ್ರ: ದಿ ಲಾಸ್ಟ್ ರಿಪೇರ್ ಶಾಪ್
ಅತ್ಯುತ್ತಮ ಛಾಯಾಗ್ರಹಣ: ಆಪನ್ಹೈಮರ್
ಅತ್ಯುತ್ತಮ ಒರಿಜಿನಲ್ ಸ್ಕೋರ್: ಆಪನ್ಹೈಮರ್
ಅತ್ಯುತ್ತಮ ಸಾಂಗ್- ಬಾರ್ಬಿ
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:56 am, Mon, 11 March 24