‘ಆಸ್ಕರ್​’ ಗೆದ್ದವರಿಗೆ ಸಿಗೋದು ಒಂದು ಅವಾರ್ಡ್ ಮಾತ್ರ; ಮಾರಿದರೆ ಸಿಗೋದು ಕೇವಲ 1 ರೂ.

‘ಆಸ್ಕರ್‌’ಗೆ ನಾಮನಿರ್ದೇಶನಗೊಳ್ಳುವುದೇ ದೊಡ್ಡ ವಿಷಯ. ಒಬ್ಬ ಸೆಲೆಬ್ರಿಟಿ ಪ್ರಶಸ್ತಿಯನ್ನು ಗೆದ್ದಾಗ, ಆ ಕ್ಷಣವು ನಟನ ಜೀವನದಲ್ಲಿ ಅತ್ಯಂತ ದೊಡ್ಡ ಕ್ಷಣವಾಗಿರುತ್ತದೆ. ವರದಿಗಳ ಪ್ರಕಾರ, ಆಸ್ಕರ್ ಗೆದ್ದ ನಂತರ, ವಿಜೇತರಿಗೆ ಯಾವುದೇ ಬಹುಮಾನದ ಮೊತ್ತ ಸಿಗುವುದಿಲ್ಲ. ವಿಜೇತರು ಹೊಳೆಯುವ ಚಿನ್ನದ ಟ್ರೋಫಿಯನ್ನು ಪಡೆಯುತ್ತಾರೆ ಅಷ್ಟೇ.

‘ಆಸ್ಕರ್​’ ಗೆದ್ದವರಿಗೆ ಸಿಗೋದು ಒಂದು ಅವಾರ್ಡ್ ಮಾತ್ರ;  ಮಾರಿದರೆ ಸಿಗೋದು ಕೇವಲ 1 ರೂ.
ಆಸ್ಕರ್​
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 11, 2024 | 11:53 AM

‘ಆಸ್ಕರ್ ಅವಾರ್ಡ್’ (Oscar Award 2024) ಕಾರ್ಯಕ್ರಮ ಲಾಸ್ ಎಂಜಲೀಸ್​ನ ಡಾಲ್ಬಿ ಥಿಯೇಟರ್​ನಲ್ಲಿ ಅದ್ದೂರಿಯಾಗಿ ನಡೆದಿದೆ. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ‘ಆಪನ್​ಹೈಮರ್’ ಸಿನಿಮಾ ‘ಅತ್ಯುತ್ತಮ ಸಿನಿಮಾ’, ‘ಅತ್ಯುತ್ತಮ ನಿರ್ದೇಶಕ’, ‘ಅತ್ಯುತ್ತಮ ನಟ’ ಪ್ರಶಸ್ತಿಗಳು ಇದೇ ಚಿತ್ರಕ್ಕೆ ಸಿಕ್ಕಿವೆ. ಈ ಪ್ರಶಸ್ತಿ ಗೆದ್ದ ಎಲ್ಲರಿಗೂ ಅಭಿನಂದನೆ ಸಿಗುತ್ತಿದೆ. ಈ ಪ್ರಶಸ್ತಿಯನ್ನು ಗೆದ್ದ ಟ್ರೋಫಿಯೊಂದಿಗೆ ಏನು ಪಡೆಯುತ್ತಾರೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

‘ಆಸ್ಕರ್‌’ಗೆ ನಾಮನಿರ್ದೇಶನಗೊಳ್ಳುವುದೇ ದೊಡ್ಡ ವಿಷಯ. ಒಬ್ಬ ಸೆಲೆಬ್ರಿಟಿ ಪ್ರಶಸ್ತಿಯನ್ನು ಗೆದ್ದಾಗ, ಆ ಕ್ಷಣವು ನಟನ ಜೀವನದಲ್ಲಿ ಅತ್ಯಂತ ದೊಡ್ಡ ಕ್ಷಣವಾಗಿರುತ್ತದೆ. ವರದಿಗಳ ಪ್ರಕಾರ, ಆಸ್ಕರ್ ಗೆದ್ದ ನಂತರ, ವಿಜೇತರಿಗೆ ಯಾವುದೇ ಬಹುಮಾನದ ಮೊತ್ತ ಸಿಗುವುದಿಲ್ಲ. ವಿಜೇತರು ಹೊಳೆಯುವ ಚಿನ್ನದ ಟ್ರೋಫಿಯನ್ನು ಪಡೆಯುತ್ತಾರೆ ಅಷ್ಟೇ.

ಭಾರತದಲ್ಲಿ ಅವಾರ್ಡ್ ಗೆದ್ದರೆ ನಗದು ನೀಡುವ ಸಂಪ್ರದಾಯ ಇದೆ. ಆದರೆ ಆಸ್ಕರ್ ಗೆದ್ದವರಿಗೆ ಪ್ರಶಸ್ತಿಯ ಹೊರತಾಗಿ ಇನ್ನೇನನ್ನೂ ಸಿಗುವುದಿಲ್ಲ. ಆದರೆ, ಇದರಿಂದ ಪರೋಕ್ಷವಾಗಿ ಆಗುವ ಲಾಭ ತುಂಬಾನೇ ದೊಡ್ಡದು. ಆಸ್ಕರ್ ಗೆದ್ದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಸೃಷ್ಟಿ ಆಗುತ್ತದೆ. ಕಲಾವಿದರೆ, ತಂತ್ರಜ್ಞರಿಗೆ ಖ್ಯಾತಿ ಹೆಚ್ಚುತ್ತದೆ. ಇದರ ಜೊತೆ ಸಂಭಾವನೆ ಕೂಡ ಏರಿಕೆಯಾಗುತ್ತದೆ. ಆಸ್ಕರ್ ಗೆದ್ದ ನಿರ್ಮಾಣ ಸಂಸ್ಥೆಯ ಚಿತ್ರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತದೆ.

ಆಸ್ಕರ್ ಟ್ರೋಫಿ ಬಗ್ಗೆ ಹೇಳೋದಾದರೆ ಇದನ್ನು ಕಂಚಿನಿಂದ ಮಾಡಲಾಗಿದೆ. 24 ಕ್ಯಾರೆಟ್ ಚಿನ್ನದಿಂದ ಲೇಪನ ಮಾಡಲಾಗುತ್ತದೆ. ಟ್ರೋಫಿ ಮಾಡಲು 1000 ಡಾಲರ್ ಅಂದರೆ ಸುಮಾರು 82 ಸಾವಿರ ರೂಪಾಯಿ. ‘ಆಸ್ಕರ್’ ಗೆದ್ದ ನಂತರ ಸೆಲೆಬ್ರಿಟಿಗಳು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಸ್ಫೂರ್ತಿ ಪಡೆಯುತ್ತಾರೆ.  ವಿಜೇತರು ತಮ್ಮ ‘ಆಸ್ಕರ್’ ಟ್ರೋಫಿಯನ್ನು ಮಾರಾಟ ಮಾಡಲು ಬಯಸಿದರೆ, ಅವರು ಟ್ರೋಫಿಯನ್ನು ಮಾರಾಟ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಆದರೆ ವಿಜೇತರು ತಮ್ಮ ಟ್ರೋಫಿಯನ್ನು ಅಕಾಡೆಮಿಗೆ ಮಾತ್ರ ಮಾರಾಟ ಮಾಡಬಹುದು. ಇದಕ್ಕೆ ಪ್ರತಿಯಾಗಿ ಸಿಗೋದು 1 ಡಾಲರ್ ಅಂದರೆ  ಕೇವಲ 82 ರೂಪಾಯಿ ಮಾತ್ರ. ಆಸ್ಕರ್ ಗೆದ್ದವರು ಅದನ್ನು ಮಾರಾಟ ಮಾಡುವ ಸಾಧ್ಯತೆ ಇದೆ. ಅದು ಸಾಧ್ಯವಾಗದಂತೆ ತಡೆಯಲು ಆಸ್ಕರ್ ವಿತರಿಸುವ ಅಕಾಡೆಮಿ ಆಪ್ ಮೋಷನ್ ಫಿಕ್ಚರ್ಸ್ ಆರ್ಟ್ ಸೈನ್ಸ್ ಸಂಸ್ಥೆಯು ಈ ರೀತಿ ನಿಯಮ ತಂದಿದೆ.

ಇದನ್ನೂ ಓದಿ: ಭಾರತಕ್ಕೆ ಹೆಮ್ಮೆಯ ಕ್ಷಣ: ಆಸ್ಕರ್ ಕಾರ್ಯಕ್ರಮದಲ್ಲಿ ‘ಆರ್​ಆರ್​ಆರ್’ ಚಿತ್ರಕ್ಕೆ ವಿಶೇಷ ಗೌರವ

ಸದ್ಯ ಎಲ್ಲೆಡೆ ‘ಆಸ್ಕರ್’ ಪ್ರಶಸ್ತಿ ಸಮಾರಂಭ ಮಾತ್ರ ಚರ್ಚೆಯಾಗುತ್ತಿದೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದಲ್ಲಿ ಮೂಡಿ ಬಂದ ‘ಆಪನ್​ಹೈಮರ್’ ಚಿತ್ರ ಅತ್ಯುತ್ತಮ ಸಿನಿಮಾ ಅವಾರ್ಡ್ ಪಡೆದದಿದೆ.  ಇದರ ಜೊತೆಗೆ  ಅತ್ಯುತ್ತಮ ನಟ (ಕಿಲಿಯನ್ ಮರ್ಫಿ) ಪ್ರಶಸ್ತಿ, ಅತ್ಯುತ್ತಮ ನಿರ್ದೇಶಕ (ಕ್ರಿಸ್ಟೋಫರ್ ನೋಲನ್) ಮೊದಲಾದ ಅವಾರ್ಡ್​ಗಳನ್ನು ಈ ಸಿನಿಮಾ ಬಾಚಿಕೊಂಡಿದೆ ಅನ್ನೋದು ವಿಶೇಷ. ‘ಆಪನ್ ಹೈಮರ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಭರ್ಜರಿ ಮೆಚ್ಚುಗೆ ಪಡೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ