Oscars 2024: ‘ಅತ್ಯುತ್ತಮ ಸಿನಿಮಾ’ ಸೇರಿ ಪ್ರಮುಖ ಅವಾರ್ಡ್ ಪಡೆದ ‘ಆಪನ್​​ಹೈಮರ್’; ಇಲ್ಲಿದೆ ಆಸ್ಕರ್ ಫುಲ್ ಲಿಸ್ಟ್

Oscars 2024 Full Winners List: ‘ಆಪನ್​ಹೈಮರ್​’ ಅನ್ನೋದು ಅಣುಬಾಂಬ್ ಕಂಡು ಹಿಡಿದ ವಿಜ್ಞಾನಿಯ ಹೆಸರು. ಅದೇ ಹೆಸರನಲ್ಲಿ ಸಿನಿಮಾ ಮಾಡಲಾಗಿದೆ. ಕಿಲಿಯನ್ ಮರ್ಫಿ ಆಪನ್​ಹೈಮರ್ ಪಾತ್ರದಲ್ಲಿ ನಟಿಸಿದ್ದರು. ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ‘ಆಪನ್​ಹೈಮರ್​’ ಇನ್ನೂ ಕೆಲವು ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.

Oscars 2024: ‘ಅತ್ಯುತ್ತಮ ಸಿನಿಮಾ’ ಸೇರಿ ಪ್ರಮುಖ ಅವಾರ್ಡ್ ಪಡೆದ ‘ಆಪನ್​​ಹೈಮರ್’; ಇಲ್ಲಿದೆ ಆಸ್ಕರ್ ಫುಲ್ ಲಿಸ್ಟ್
ಆಪನ್​ಹೈಮರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 11, 2024 | 8:57 AM

96ನೇ ಸಾಲಿನ ಆಸ್ಕರ್ ಅವಾರ್ಡ್ (Oscar Award) ಕಾರ್ಯಕ್ರಮ ಅಮೆರಿಕದ ಲಾಸ್ ಎಂಜಲೀಸ್​ನಲ್ಲಿ ನಡೆದಿದೆ. ಡಾಲ್ಬಿ ಥಿಯೇಟರ್​ನ ಅದ್ದೂರಿ ವೇದಿಕೆ ಮೇಲೆ ಜಿಮ್ಮಿ ಕಿಮ್ಮೆಲ್ ಅವರು ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ರಿಲೀಸ್ ಆಗಿ ಧೂಳೆಬ್ಬಿಸಿದ್ದ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್​ಹೈಮರ್’ ಸಿನಿಮಾ ಅತ್ಯುತ್ತಮ ಚಿತ್ರ ಎಂಬ ಅವಾರ್ಡ್ ಪಡೆದದಿದೆ. ಈ ಮೂಲಕ ಸಿನಿಮಾ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಈ ಚಿತ್ರ ಬರೋಬ್ಬರಿ 13 ವಿಭಾಗದಲ್ಲಿ ನಾಮಿನೇಟ್ ಆಗಿತ್ತು ಅನ್ನೋದು ವಿಶೇಷ. ಈ ಪೈಕಿ ಹಲವು ಅವಾರ್ಡ್​​ಗಳನ್ನು ಪಡೆದಿದೆ.

ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ‘ಆಪನ್​ಹೈಮರ್’ ಜೊತೆ ‘ಅಮೆರಿಕನ್ ಫಿಕ್ಷನ್’, ‘ಬಾರ್ಬಿ’, ‘ಕಿಲ್ಲರ್ಸ್​ ಆಫ್ ದಿ ಫ್ಲವರ್​ ಮೂನ್​’ ಮೊದಲಾದ ಸಿನಿಮಾಗಳು ಸ್ಥಾನ ಪಡೆದಿದ್ದವು. ಇವುಗಳನ್ನು ಹಿಂದಿಕ್ಕಿ ‘ಆಪನ್​ಹೈಮರ್’ ಸಿನಿಮಾ ಗೆಲುವು ಕಂಡಿದೆ. ಕಳೆದ ವರ್ಷ ‘ಆಪನ್​ಹೈಮರ್’ ಹಾಗೂ ‘ಬಾರ್ಬಿ’ ಒಂದೇ ದಿನ ರಿಲೀಸ್ ಆಗಿದ್ದವು ಅನ್ನೋದು ವಿಶೇಷ. ಈಗ ಆಸ್ಕರ್​ ರೇಸ್​ನಲ್ಲಿ ಈ ವಿಭಾಗದಲ್ಲಿ ‘ಬಾರ್ಬಿ’ಗೆ ಅವಾರ್ಡ್ ಸಿಕ್ಕಿಲ್ಲ. ‘ಆಪನ್​ಹೈಮರ್​’ ಇನ್ನೂ ಕೆಲವು ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ.

ಇದನ್ನೂ ಓದಿ: ಮಾರ್ಚ್ 11ಕ್ಕೆ ಆಸ್ಕರ್ ಅವಾರ್ಡ್ ಕಾರ್ಯಕ್ರಮ; ದಾಖಲೆ ಬರೆಯಲಿದೆಯೇ ‘ಆಪನ್​ಹೈಮರ್’ ಸಿನಿಮಾ?

‘ಆಪನ್​ಹೈಮರ್​’ ಅನ್ನೋದು ಅಣುಬಾಂಬ್ ಕಂಡು ಹಿಡಿದ ವಿಜ್ಞಾನಿಯ ಹೆಸರು. ಅದೇ ಹೆಸರನಲ್ಲಿ ಸಿನಿಮಾ ಮಾಡಲಾಗಿದೆ. ಕಿಲಿಯನ್ ಮರ್ಫಿ ಆಪನ್​ಹೈಮರ್ ಪಾತ್ರದಲ್ಲಿ ನಟಿಸಿದ್ದರು. ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.

ಆಸ್ಕರ್ ಫುಲ್ ಲಿಸ್ಟ್

ಅತ್ಯುತ್ತಮ ನಟ: ಕಿಲಿಯನ್ ಮರ್ಫಿ-ಆಪನ್​ಹೈಮರ್

ಅತ್ಯುತ್ತಮ ನಿರ್ದೇಶನ: ಕ್ರಿಸ್ಟೋಫರ್ ನೋಲನ್- ಆಪನ್​ಹೈಮರ್

ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್- ಪೂರ್ ಥಿಂಗ್ಸ್

ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ: ‘ದಿ ಜೋನ್ ಆಫ್ ಇಂಟರೆಸ್ಟ್’- ಯುನೈಟೆಡ್ ಕಿಂಗ್​ಡಮ್

ಅತ್ಯುತ್ತಮ ಪೋಷಕ ನಟ: ರಾಬರ್ಟ್ ಡೌನೇ ಜೂನಿಯರ್ (ಆಪನ್​ಹೈಮರ್)

ಅತ್ಯುತ್ತಮ ವಿಎಫ್​ಎಕ್ಸ್: ಗಾಡ್ಜಿಲಾ ಮೈನಸ್ ಒನ್

ಅತ್ಯುತ್ತಮ ಸಂಕಲನ: ಆಪನ್​ಹೈಮರ್

ಅತ್ಯುತ್ತಮ ಡಾಕ್ಯುಮೆಂಟರಿ ಕಿರುಚಿತ್ರ: ದಿ ಲಾಸ್ಟ್ ರಿಪೇರ್ ಶಾಪ್

ಅತ್ಯುತ್ತಮ ಛಾಯಾಗ್ರಹಣ: ಆಪನ್​ಹೈಮರ್

ಅತ್ಯುತ್ತಮ ಒರಿಜಿನಲ್ ಸ್ಕೋರ್: ಆಪನ್​ಹೈಮರ್

ಅತ್ಯುತ್ತಮ ಸಾಂಗ್- ಬಾರ್ಬಿ

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:56 am, Mon, 11 March 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ