ಮಾರ್ಚ್ 11ಕ್ಕೆ ಆಸ್ಕರ್ ಅವಾರ್ಡ್ ಕಾರ್ಯಕ್ರಮ; ದಾಖಲೆ ಬರೆಯಲಿದೆಯೇ ‘ಆಪನ್​ಹೈಮರ್’ ಸಿನಿಮಾ?

ಹಾಲಿವುಡ್ ಸಿನಿಮಾಗಳಿಗೆ ವಿಶ್ವಾದ್ಯಂತ ವೀಕ್ಷಕರು ಇದ್ದಾರೆ. ಸಿನಿಮಾದ ಕಂಟೆಂಟ್​ ಚೆನ್ನಾಗಿದ್ದರೆ ಅಂಥವುಗಳು ಭಾರತದಲ್ಲಿ ಭರ್ಜರಿ ಕಲೆಕ್ಷನ್​ ಮಾಡುತ್ತವೆ. ‘ಆಪನ್​ಹೈಮರ್​’ ಸಿನಿಮಾ ಕಳೆದ ವರ್ಷ ಜುಲೈ 21ರಂದು ಸಾವಿರಾರು ಪರದೆಗಳಲ್ಲಿ ರಿಲೀಸ್​ ಆಗಿ ಒಳ್ಳೆಯ ಕಮಾಯಿ ಮಾಡಿತ್ತು. ಈಗ ಆಸ್ಕರ್​ ರೇಸ್​ನಲ್ಲಿ  ಸಿನಿಮಾ ಮುಂದಿದೆ.

ಮಾರ್ಚ್ 11ಕ್ಕೆ ಆಸ್ಕರ್ ಅವಾರ್ಡ್ ಕಾರ್ಯಕ್ರಮ; ದಾಖಲೆ ಬರೆಯಲಿದೆಯೇ ‘ಆಪನ್​ಹೈಮರ್’ ಸಿನಿಮಾ?
ಆಪನ್​ಹೈಮರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 05, 2024 | 12:31 PM

ಮಾರ್ಚ್​ 10ರಂದು (ಭಾರತೀಯ ಕಾಲಮಾನ ಮಾರ್ಚ್ 11 ಮುಂಜಾನೆ 4:30 ) 96ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಹಾಲಿವುಡ್​ನ ಆಪನ್​ಹೈಮರ್’ ಸಿನಿಮಾ (Oppenheimer) ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡು ದಾಖಲೆ ಬರೆಯೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಈ ಚಿತ್ರ ಬರೋಬ್ಬರಿ 13 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ. ‘ಪೂರ್ ಥಿಂಗ್ಸ್’ ಸಿನಿಮಾ 11 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.  ಈ ಪೈಕಿ ಯಾವ ಸಿನಿಮಾ ಎಷ್ಟು ಪ್ರಶಸ್ತಿ ಬಾಚಿಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.

ಹಾಲಿವುಡ್ ಸಿನಿಮಾಗಳಿಗೆ ವಿಶ್ವಾದ್ಯಂತ ವೀಕ್ಷಕರು ಇದ್ದಾರೆ. ಸಿನಿಮಾದ ಕಂಟೆಂಟ್​ ಚೆನ್ನಾಗಿದ್ದರೆ ಅಂಥವುಗಳು ಭಾರತದಲ್ಲಿ ಭರ್ಜರಿ ಕಲೆಕ್ಷನ್​ ಮಾಡುತ್ತವೆ. ‘ಆಪನ್​ಹೈಮರ್​’ ಸಿನಿಮಾ ಕಳೆದ ವರ್ಷ ಜುಲೈ 21ರಂದು ಸಾವಿರಾರು ಪರದೆಗಳಲ್ಲಿ ರಿಲೀಸ್​ ಆಗಿ ಒಳ್ಳೆಯ ಕಮಾಯಿ ಮಾಡಿತ್ತು. ಈಗ ಆಸ್ಕರ್​ ರೇಸ್​ನಲ್ಲಿ  ಸಿನಿಮಾ ಮುಂದಿದೆ. ಈ ಚಿತ್ರ ಎಷ್ಟು ಪ್ರಶಸ್ತಿ ಬಾಚಿಕೊಳ್ಳಲಿದೆ ಎನ್ನುವ ಕುತೂಹಲ ಮೂಡಿದೆ.

ಹಾಲಿವುಡ್​ನ ಜನಪ್ರಿಯ ಕಲಾವಿದರಾದ ಕಿಲಿಯನ್​ ಮರ್ಫಿ, ರಾಬರ್ಟ್​ ಡೌನಿ ಜೂನಿಯರ್​, ಮ್ಯಾಟ್​ ಡೇಮನ್​, ಎಮಿಲಿ ಬ್ಲಂಟ್​ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಆಪನ್​ಹೈಮರ್’ ಚಿತ್ರದ ಅಭಿನಯಕ್ಕೆ ಕಿಲಿಯನ್ ಮರ್ಫಿ ಹೆಸರು ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಮೊದಲ ಬಾರಿಗೆ ಐರಿಷ್ ನಟನ ಹೆಸರು ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಂತೆ ಆಗಿದೆ. ಅವರು ಐರ್ಲೆಂಡ್​ನ ನಟ.

ಇದನ್ನೂ ಓದಿ: ‘ಆಪನ್​ಹೈಮರ್​’ ಯಶಸ್ಸಿನ ಬಳಿಕ ಹಾರರ್​ ಸಿನಿಮಾ ಮಾಡ್ತಾರೆ ಕ್ರಿಸ್ಟೋಫರ್​ ನೋಲನ್​​

ಕಳೆದ ವರ್ಷ ಭಾರತದ ಪಾಲಿಗೆ ಆಸ್ಕರ್ ಸಾಕಷ್ಟು ವಿಶೇಷವಾಗಿತ್ತು. ‘ಆರ್​ಆರ್​ಆರ್’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದು ಬೀಗಿತ್ತು. ಇದಲ್ಲದೆ, ‘ದಿ ಎಲಿಫಂಟ್ ವಿಸ್ಪರರ್ಸ್​’ ಸರಣಿ ಕೂಡ ಆಸ್ಕರ್ ಗೆದ್ದಿತ್ತು. ಈ ಬಾರಿ ಭಾರತದ ಯಾವ ಸಿನಿಮಾಗಳು ಆಸ್ಕರ್ ರೇಸ್​ನಲ್ಲಿ ಸ್ಥಾನ ಪಡೆಯೋಕೆ ಸಾಧ್ಯವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್