Nick Jonas: ಭಾರತದವರು ಅಡ್ಡ ಹೆಸರು ಕರೆದಿದ್ದಕ್ಕೆ ನಿಕ್​ ಜೋನಸ್​ಗೆ ಬೇಜಾರಾಯ್ತಾ? ಬಿಬಿಸಿ ಶೋನಲ್ಲಿ ಉತ್ತರಿಸಿದ ಗಾಯಕ

|

Updated on: May 19, 2023 | 1:13 PM

Priyanka Chopra: ನಿಕ್​ ಜೋಸನ್​ ಅವರನ್ನು ಪಾಪರಾಜಿಗಳು ‘ನಿಕ್ವಾ’ ಎಂದು ಕೂಗಿದ್ದರು. ಈ ವಿಷಯದ ಬಗ್ಗೆ ಬಿಬಿಸಿ ವಾಹಿನಿಯಲ್ಲಿ ನಿಕ್​ ಜೋನಸ್​ಗೆ ಪ್ರಶ್ನೆ ಕೇಳಲಾಗಿದೆ.

Nick Jonas: ಭಾರತದವರು ಅಡ್ಡ ಹೆಸರು ಕರೆದಿದ್ದಕ್ಕೆ ನಿಕ್​ ಜೋನಸ್​ಗೆ ಬೇಜಾರಾಯ್ತಾ? ಬಿಬಿಸಿ ಶೋನಲ್ಲಿ ಉತ್ತರಿಸಿದ ಗಾಯಕ
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್
Follow us on

ಗಾಯಕ ನಿಕ್​ ಜೋಸನ್​ (Nick Jonas) ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಅಮೆರಿಕದಲ್ಲಿ ಸೆಟ್ಲ್​ ಆಗಿದ್ದಾರೆ. ಕೆಲವು ವಿಶೇಷ ಸಂದರ್ಭದಲ್ಲಿ ಮಾತ್ರ ಅವರು ಭಾರತಕ್ಕೆ ಬಂದಿದ್ದುಂಟು. ಆಗೆಲ್ಲ ಅವರು ನಿಕ್​ ಜೋನಸ್​ ಅವರನ್ನೂ ಕರೆದುಕೊಂಡು ಬಂದಿದ್ದರು. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ನಿಕ್​ ಜೋಸನ್​ ಅವರನ್ನು ಪಾಪರಾಜಿಗಳು ‘ಬಾವ’ ಎಂದು ಕರೆದಿದ್ದರು. ಅಲ್ಲದೇ ‘ನಿಕ್ವಾ’ ಎಂದು ಕೂಡ ಕೆಲವರು ಕೂಗಿದ್ದರು. ಈ ರೀತಿ ಕರೆದಿದ್ದಕ್ಕೆ ನಿಕ್​ ಜೋನಸ್​ ಅವರು ಬೇಸರ ಮಾಡಿಕೊಂಡಿಲ್ಲ. ಇದೇ ವಿಚಾರದ ಬಗ್ಗೆ ಬಿಬಿಸಿ (BBC) ಏಷ್ಯನ್​ ನೆಟ್​ವರ್ಕ್​ನ ಬ್ರೇಕ್​ಫಾಸ್ಟ್​ ಶೋನಲ್ಲಿ ಚರ್ಚೆ ಆಗಿದೆ. ಭಾರತದ ಪಾಪರಾಜಿಗಳು ಆ ರೀತಿ ಕರೆದಿದ್ದಕ್ಕೆ ತಮಗೆ ಬೇಸರ ಇಲ್ಲ ಎಂದು ನಿಕ್​ ಜೋನಸ್​ ಹೇಳಿದ್ದಾರೆ.

‘ಅಂಬಾನಿ ಕುಟುಂಬದವರು ನಿರ್ಮಿಸಿದ ಸಾಂಸ್ಕೃತಿಕ ಕೇಂದ್ರದ ಉದ್ಘಾಟನೆಗಾಗಿ ನಾವು ಇತ್ತೀಚೆಗೆ ಮುಂಬೈಗೆ ತೆರಳಿದ್ದೆವು. ಅದು ಉತ್ತಮ ಕಾರ್ಯಕ್ರಮವಾಗಿತ್ತು. ರೆಡ್ ಕಾರ್ಪೆಟ್ ಮೇಲೆ ಎಲ್ಲ ಛಾಯಾಗ್ರಾಹಕರು ನನ್ನನ್ನು ಬಾವ ಅಂತ ಕರೆಯುತ್ತಿದ್ದರು’ ಎಂದು ಆ ಕ್ಷಣವನ್ನು ನಿಕ್​ ಜೋನಸ್​ ನೆನಪು ಮಾಡಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ವೃತ್ತಿಜೀವನಕ್ಕೆ ನಿಕ್​ ಜೋಸನ್​ ಅವರು ಬೆಂಬಲವಾಗಿ ನಿಂತಿದ್ದಾರೆ. ಈ ಜೋಡಿಗೆ ಹೆಣ್ಣು ಮಗು ಜನಿಸಿದ್ದು, ಮಾಲ್ತಿ ಮೇರಿ ಚೋಪ್ರಾ ಜೋನಸ್​ ಎಂದು ಹೆಸರು ಇಡಲಾಗಿದೆ.

ಇದನ್ನೂ ಓದಿ: Priyanka Chopra: ಲಿಫ್ಟ್​ನಲ್ಲೂ ಪ್ರಿಯಾಂಕಾ-ನಿಕ್​ ಜೋನಸ್​ ರೊಮ್ಯಾನ್ಸ್​; ವೈರಲ್​ ಫೋಟೋ ಕಂಡು ಫ್ಯಾನ್ಸ್​ ಪ್ರತಿಕ್ರಿಯೆ ಏನು?

ಸಿನಿಮಾ ಕೆಲಸಗಳ ಬಿಡುವಿನಲ್ಲಿ ಈ ದಂಪತಿ ಪ್ರವಾಸ ಕೈಗೊಳ್ಳುತ್ತಾರೆ. ಇತ್ತೀಚೆಗೆ ರೋಮ್​ ನಗರದಲ್ಲಿ ಸುತ್ತಾಡುತ್ತಿದ್ದರು. ಆ ಖುಷಿಯ ಸಂದರ್ಭದ ವಿಡಿಯೋವನ್ನು ನಿಕ್​ ಜೋನಸ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ರೋಮ್​ ನಗರಕ್ಕೆ ತೆರಳಿದ್ದ ನಿಕ್​ ಜೋನಸ್​ ಅವರು ಸಿಕ್ಕಾಪಟ್ಟೆ ರೊಮ್ಯಾಂಟಿಕ್​ ಮೂಡ್​ನಲ್ಲಿದ್ದರು. ಮುದ್ದಿನ ಪತ್ನಿ ಪ್ರಿಯಾಂಕಾ ಚೋಪ್ರಾ ತುಟಿಗೆ ಅವರು ಸಿಹಿ ಮುತ್ತು ನೀಡಿದ್ದರು. ಇಬ್ಬರ ನಡುವಿನ ಪ್ರೀತಿ ಕಂಡು ಫ್ಯಾನ್ಸ್​ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದರು. ರೋಮ್​ ನಗರದಲ್ಲಿ ಬೀದಿಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಸ್​ ಅವರು ಐಸ್​ಕ್ರೀಂ ಸವಿದಿದ್ದರು.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ಸಂಸಾರದ ಗುಟ್ಟು ರಟ್ಟು ಮಾಡ್ತಾರಾ ಕರಣ್​ ಜೋಹರ್​?

ಅಮೆರಿಕದಲ್ಲಿ ಪಾಪ್​ ಗಾಯಕನಾಗಿ ನಿಕ್​ ಜೋನಸ್​ ಗುರುತಿಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಹಾಲಿವುಡ್​ ಮ್ಯೂಸಿಕ್​ ಇಂಡಸ್ಟ್ರಿಯಲ್ಲಿ ಖ್ಯಾತಿ ಗಳಿಸಬೇಕು ಎಂದುಕೊಂಡಿದ್ದರು. ಆದರೆ ಅವರಿಗೆ ಆ ಕ್ಷೇತ್ರದಲ್ಲಿ ಯಶಸ್ಸು ಸಿಗಲಿಲ್ಲ. ನಂತರ ಅವರು ಇಂಗ್ಲಿಷ್​​ ಸಿನಿಮಾ ಮತ್ತು ವೆಬ್​ ಸಿರೀಸ್​ಗಳ ಕಡೆಗೆ ಗಮನ ಹರಿಸಲು ಆರಂಭಿಸಿದರು. ಅದು ಅವರಿಗೆ ಫಲ ನೀಡಿದೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.