ಸೆಟ್​ನಿಂದಲೇ ನಟನ ಐಷಾರಾಮಿ ಕಾರು ಕಳ್ಳತನ; ಸಿನಿಮೀಯ ರೀತಿಯಲ್ಲೇ ಕಳ್ಳರನ್ನು ಪತ್ತೆ ಹಚ್ಚಿದ ಪೊಲೀಸರು

| Updated By: ರಾಜೇಶ್ ದುಗ್ಗುಮನೆ

Updated on: Aug 28, 2021 | 8:39 PM

ಬರ್ಮಿಂಗ್​​​ಹ್ಯಾಮ್​ಗೆ 1.01 ಕೋಟಿ ಮೌಲ್ಯದ ಬಿಎಮ್​ಡಬ್ಲ್ಯೂ ಎಕ್ಸ್​ 7 ಕಾರನ್ನು ಚಲಾಯಿಸಿಕೊಂಡು ಬಂದಿದ್ದರು ಟಾಮ್. ಅವರ ಕೆಲ ದುಬಾರಿ ವಸ್ತು​ಗಳು ಕಾರಿನಲ್ಲಿಯೇ ಇತ್ತು.

ಸೆಟ್​ನಿಂದಲೇ ನಟನ ಐಷಾರಾಮಿ ಕಾರು ಕಳ್ಳತನ; ಸಿನಿಮೀಯ ರೀತಿಯಲ್ಲೇ ಕಳ್ಳರನ್ನು ಪತ್ತೆ ಹಚ್ಚಿದ ಪೊಲೀಸರು
ಸೆಟ್​ನಿಂದಲೇ ನಟನ ಐಷಾರಾಮಿ ಕಾರು ಕಳ್ಳತನ; ಸಿನಿಮೀಯ ರೀತಿಯಲ್ಲೇ ಕಳ್ಳರನ್ನು ಪತ್ತೆ ಹಚ್ಚಿದ ಪೊಲೀಸರು
Follow us on

ಹಾಲಿವುಡ್​ ಸೂಪರ್​ ಸ್ಟಾರ್​ ಟಾಮ್​ ಕ್ರೂಸ್​ ‘ಮಿಷನ್​ ಇಂಪಾಸಿಬಲ್​’ ಸರಣಿ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಸದ್ಯ, ‘ಮಿಷನ್​ ಇಂಪಾಸಿಬಲ್​ 7’ ಶೂಟಿಂಗ್​  ಇಂಗ್ಲೆಂಡ್​​ನ ವಿವಿಧ ಲೊಕೇಷನ್​ಗಳಲ್ಲಿ ನಡೆಯುತ್ತಿದೆ. ಎರಡು ದಿನಗಳ ಹಿಂದೆ ಅಚ್ಚರಿಯ ಘಟನೆ ಒಂದು ನಡೆದಿದೆ. ಸಿನಿಮಾ ಸೆಟ್​ನಿಂದಲೇ ಟಾಮ್​ ಐಷಾರಾಮಿ ಕಾರನ್ನು ಕದಿಯಲಾಗಿದೆ. ನಂತರ ಪೊಲೀಸರು ಈ ಕಾರನ್ನು ಪತ್ತೆ ಹಚ್ಚಿದ್ದಾರೆ.

ಬರ್ಮಿಂಗ್​​​ಹ್ಯಾಮ್​ಗೆ 1.01 ಕೋಟಿ ಮೌಲ್ಯದ ಬಿಎಮ್​ಡಬ್ಲ್ಯೂ ಎಕ್ಸ್​ 7 ಕಾರನ್ನು ಚಲಾಯಿಸಿಕೊಂಡು ಬಂದಿದ್ದರು ಟಾಮ್. ಅವರ ಕೆಲ ದುಬಾರಿ ವಸ್ತು​ಗಳು ಕಾರಿನಲ್ಲಿಯೇ ಇತ್ತು. ಭದ್ರತಾ ಸಿಬ್ಬಂದಿಗಳು ಕಾರಿನ ಬಳಿಯೇ ಇದ್ದರು. ಆದರೆ, ಇವರೆಲ್ಲರ ಕಣ್ಣು ತಪ್ಪಿಸಿ ಕಾರನ್ನು ಕಳ್ಳತನ ಮಾಡಲಾಗಿದೆ. ಈ ವಿಚಾರ ತಿಳಿದ ಟಾಮ್​ ತಂಡ ಪೊಲೀಸ್​ ಠಾಣೆಗೆ ದೂರು ನೀಡಿದೆ. ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಟಾಮ್​ ಈ ವಿಚಾರ ಕೇಳಿ ಶಾಕ್​ ಆಗಿದ್ದಾರೆ.

ಕಳ್ಳತನವಾದ ಕೆಲವೇ ಗಂಟೆಗಳಲ್ಲಿ ಕಾರು ಪತ್ತೆಯಾಗಿದೆ. ಐಷಾರಾಮಿ ಕಾರಾದ್ದರಿಂದ ಇದರಲ್ಲಿ ಜಿಪಿಎಸ್​ ಟ್ರ್ಯಾಕಿಂಗ್​ ಇತ್ತು. ಇದರ ಸಹಾಯದಿಂದ ಕಾರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇನ್ನು, ಕಾರಿನಲ್ಲಿದ್ದ ಲಗೇಜ್​ಗಳನ್ನು ಕಳ್ಳರು ಲಪಟಾಯಿಸಿಕೊಂಡು ಹೋಗಿದ್ದಾರೆ. ಕಾರಿಗೆ ಯಾವುದೇ ಹಾನಿ ಆಗಿಲ್ಲ. ಭದ್ರತಾ ಸಿಬ್ಬಂದಿಗಳು ಕಾರಿನ ಬಳಿಯೇ ಇದ್ದ ಹೊರ ತಾಗಿಯೂ ಕಾರು ಕಳ್ಳತನವಾಗಿದೆ ಎನ್ನುವ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ. ಕಾರನ್ನು ಪೊಲೀಸರು ತಕ್ಷಣಕ್ಕೆ ಪತ್ತೆ ಹಚ್ಚಿದರ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಇದು ಸಿನಿಮೀಯ ಘಟನೆ ಎಂದು ಬಣ್ಣಿಸಿದ್ದಾರೆ.

‘ಬರ್ಮಿಂಗ್​​​ಹ್ಯಾಮ್​ನ ಚರ್ಚ್​ಸ್ಟ್ರೀಟ್​ನಿಂದ ಕಾರು ಕಳ್ಳತನವಾದ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿತ್ತು. ನಂತರ ಕಾರು ಪತ್ತೆ ಆಗಿದೆ. ಕಾರನ್ನು ಕದ್ದಿದ್ದು ಯಾರು ಎನ್ನುವುದನ್ನು ಸಿಸಿಟಿವಿಯ ದೃಶ್ಯಾವಳಿಗಳ ಸಹಾಯದಿಂದ ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ. ತನಿಖೆ ಮುಂದುವರಿದಿದೆ’ ಎಂದಿದ್ದಾರೆ ಪೊಲೀಸರು.

ಟಾಮ್​ ‘ಮಿಷನ್​ ಇಂಪಾಸಿಬಲ್​ 7’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಕೆಲ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು.

ಇದನ್ನೂ ಓದಿ: ಸೆಟ್​ನಲ್ಲಿ ಗಾಯಗೊಂಡ ಪ್ರಿಯಾಂಕಾ ಚೋಪ್ರಾ; ರಕ್ತದಲ್ಲಿ ತೊಯ್ದ ಹಣೆ, ನಿಜ ಯಾವುದು ಎಂದು ಕೇಳಿದ ನಟಿ

Published On - 7:00 pm, Sat, 28 August 21