ಪ್ರಭಾಸ್ ನಟನೆಯ ‘ಸಲಾರ್’ ಚಿತ್ರ ಹೊಸ ಅಪ್ಡೇಟ್ ನೀಡಲು ಚಿತ್ರತಂಡ ಸಜ್ಜಾಗಿದೆ. ಈ ಕುರಿತು ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ ಮಾಹಿತಿ ನೀಡಿದೆ. ‘ಸಲಾರ್’ನಲ್ಲಿರುವ ‘ರಾಜಮನಾರ್’ನ ಪರಿಚಯವನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದು ಟ್ವೀಟ್ ಮುಖಾಂತರ ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ. ಇದರಿಂದ ಫ್ಯಾನ್ಸ್ಗಳಿಗೆ ಸಂತಸವಾಗಿದ್ದು, ನಾಳೆಗಾಗಿ ಕಾಯುತ್ತಿದ್ದಾರೆ. ಆದರೆ ಇದೇ ವೇಳೆ ‘ರಾಜ್ಮನಾರ್’ ಎಂದರೆ ಏನು ಎಂಬುದು ತಿಳಿಯದೇ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.
ಪ್ರಭಾಸ್ ಹಾಗೂ ಶೃತಿ ಹಾಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ‘ಸಲಾರ್’ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಇತ್ತೀಚೆಗಷ್ಟೇ ಚಿತ್ರದ ಎರಡನೇ ಶೆಡ್ಯೂಲ್ ಮುಗಿಸಿದ ಪ್ರಭಾಸ್ ‘ಆದಿಪುರುಷ್’ ಚಿತ್ರದ ಶೂಟಿಂಗ್ಗಾಗಿ ತೆರಳಿದ್ದಾರೆ. ಈ ನಡುವೆ ಚಿತ್ರತಂಡ ಹೊಸ ಅಪ್ಡೇಟ್ ನೀಡಿದ್ದು, ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿರುವ ಟ್ವೀಟ್:
Revealing ?????????? from #Salaar tomorrow at 10:30 AM. Stay Tuned.#Prabhas @prashanth_neel @shrutihaasan @VKiragandur @hombalefilms @HombaleGroup pic.twitter.com/f5nSwUxLr9
— Hombale Films (@hombalefilms) August 22, 2021
‘ರಾಜಮನಾರ್’ ಅಂದರೇನು ಎಂದು ತಲೆಕೆಡಿಸಿಕೊಂಡ ಫ್ಯಾನ್ಸ್:
ಹೊಂಬಾಳೆ ಫಿಲ್ಮ್ಸ್ ಮಾಡಿರುವ ಟ್ವೀಟ್ ಅನ್ನು ಪ್ರಶಾಂತ್ ನೀಲ್ ಸೇರಿದಂತೆ ಚಿತ್ರತಂಡ ಹಂಚಿಕೊಂಡಿದೆ. ಆದರೆ ಚಿತ್ರತಂಡದ ಈ ಮಾಹಿತಿಯಿಂದ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಅವರಿಗೆ ‘ರಾಜಮನಾರ್’ ಎಂಬುದು ಪಾತ್ರದ ಹೆಸರೋ, ಸ್ಥಳದ ಹೆಸರೋ ಎಂಬುದನ್ನು ಊಹಿಸಲು ಆಗುತ್ತಿಲ್ಲ. ಇದರಿಂದಾಗಿ ದಯವಿಟ್ಟು ಅದನ್ನು ಮೊದಲು ತಿಳಿಸಿ, ಕುತೂಹಲ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೇಳಿಕೊಳ್ಳುತ್ತಿದ್ದಾರೆ.
ಕೆಲವರು ಇದನ್ನು ಅವರದೇ ನೆಲೆಯಲ್ಲಿ ಊಹಿಸಿಕೊಳ್ಳುತ್ತಿದ್ದು, ಅದು ಪ್ರಭಾಸ್ ತಂದೆಯ ಪಾತ್ರವೆಂದೋ, ಅಥವಾ ಮುಖ್ಯ ಪಾತ್ರವೆಂದೂ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ‘ರಾಜಮನಾರ್’ನ ಅಸಲಿಯತ್ತು ತಿಳಿಯಬೇಕಾದರೆ ನಾಳೆಯವರೆಗೆ ಕಾಯದೇ ವಿಧಿಯಿಲ್ಲ. ಕಾರಣ, ನಾಳೆ ಅದರ ಸಂಪೂರ್ಣ ಚಿತ್ರಣ ತಿಳಿಸುವುದಾಗಿ ಚಿತ್ರತಂಡ ಘೋಷಿಸಿದೆ. ನಾಳೆ ಬೆಳಗ್ಗೆ 10.30ಕ್ಕೆ ಚಿತ್ರತಂಡ ಈ ಕುರಿತು ಅಪ್ಡೇಟ್ ನೀಡಲಿದ್ದು, ಅಭಿಮಾನಿಗಳು ಅದಕ್ಕಾಗಿ ತವಕದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ:
Chiranjeevi Birthday: ಚಿರಂಜೀವಿ ಜನ್ಮದಿನಕ್ಕೆ 153ನೇ ಸಿನಿಮಾ ಟೈಟಲ್ ಅನಾವರಣ; ಗಾಡ್ಫಾದರ್ ಆದ ಮೆಗಾಸ್ಟಾರ್
(Hombale Films will reveal Rajamanaar from Salaar on August 23rd)