Chiranjeevi Birthday: ಚಿರಂಜೀವಿ ಜನ್ಮದಿನಕ್ಕೆ 153ನೇ ಸಿನಿಮಾ ಟೈಟಲ್ ಅನಾವರಣ; ಗಾಡ್ಫಾದರ್ ಆದ ಮೆಗಾಸ್ಟಾರ್
ಮೋಹನ್ಲಾಲ್ ನಟನೆಯ ‘ಲೂಸಿಫರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಡ್ರಗ್ ಹಾಗೂ ರಾಜಕೀಯ ಅನಾಚಾರಗಳ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗಿದೆ. ಈಗ ಈ ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡಲಾಗುತ್ತಿದೆ.
ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅವರು 66ನೇ ವಸಂತಕ್ಕೆ ಕಾಲಿಟ್ಟಿದ್ದು ಎಲ್ಲ ಕಡೆಗಳಿಂದಲೂ ಶುಭಾಶಯಗಳು ಹರಿದುಬರುತ್ತಿವೆ. ಅವರ ಬರ್ತ್ಡೇ ಪ್ರಯುಕ್ತ ಹೊಸ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಚಿರು 153ನೇ ಚಿತ್ರಕ್ಕೆ ‘ಗಾಡ್ಫಾದರ್’ ಎಂದು ಹೆಸರಿಡಲಾಗಿದೆ.
ಮೋಹನ್ಲಾಲ್ ನಟನೆಯ ‘ಲೂಸಿಫರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಡ್ರಗ್ ಹಾಗೂ ರಾಜಕೀಯ ಅನಾಚಾರಗಳ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗಿದೆ. ಈಗ ಈ ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಚಿರಂಜೀವಿ ಲೀಡ್ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಗಾಡ್ಫಾದರ್ ಎಂದು ನಾಮಕರಣ ಮಾಡಲಾಗಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.
ಟೈಟಲ್ ಲಾಂಚ್ ಪೋಸ್ಟರ್ನಲ್ಲಿ ಗಾಡ್ಫಾದರ್ ಎಂದು ಭಿನ್ನವಾಗಿ ಬರೆಯಲಾಗಿದೆ. ಟೈಟಲ್ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಗನ್ ಹಿಡಿದು ಕ್ಯಾಪ್ ಹಾಕಿ ನಿಂತಿದ್ದಾರೆ. ಖ್ಯಾತ ನಿರ್ದೇಶಕ ಮೋಹನ್ ರಾಜಾ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಸಲ್ಮಾನ್ ಖಾನ್ ದಕ್ಷಿಣ ಭಾರತಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡಿದೆ.
Presenting the Supreme Reveal of Megastar @KChiruTweets in a never seen before avatar as #GodFather?@jayam_mohanraja @AlwaysRamCharan #RBChoudary @ProducerNVP @KonidelaPro @SuperGoodFilms_ @MusicThaman @sureshsrajan#Chiru153 #HBDMegaStarChiranjeevi pic.twitter.com/e9BYCwQz7b
— Konidela Pro Company (@KonidelaPro) August 21, 2021
ಕೊವಿಡ್ ಎರಡನೇ ಅಲೆ ಕಡಿಮೆ ಆಗಿಲ್ಲ. ಈ ಕಾರಣಕ್ಕೆ ಚಿರಂಜೀವಿ ಅವರು ಅಭಿಮಾನಿಗಳ ಜತೆ ಬರ್ತ್ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ. ಈ ಮಧ್ಯೆ, ಅಭಿಮಾನಿಗಳ ಬಳಿ ಅವರು ವಿಶೇಷ ಮನವಿ ಒಂದನ್ನು ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಮೂರು ಗಿಡಗಳನ್ನು ನೆಟ್ಟು, ಅದರ ಪಾಲನೆ ಮಾಡಬೇಕು ಎಂದು ಚಿರಂಜೀವಿ ಕೋರಿಕೊಂಡಿದ್ದಾರೆ. ಇದನ್ನು ಅಭಿಮಾನಿಗಳು ಪಾಲಿಸುತ್ತಿದ್ದಾರೆ.
ಇನ್ನು, ಚಿರಂಜೀವಿ ಬರ್ತ್ಡೇಗೆ ಎಲ್ಲ ಕಡೆಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಅಲ್ಲು ಅರ್ಜುನ್ ಸೇರಿ ಸಾಕಷ್ಟು ನಟ-ನಟಿಯರು ಚಿರಂಜೀವಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬದ ಹೊಸ್ತಿಲಲ್ಲಿ ಮೆಗಾ ಸ್ಟಾರ್ ಚಿರಂಜೀವಿಗೆ ನಿರ್ದೇಶಕರ ಮೇಲೆ ಅಸಮಾಧಾನ; ಇದಕ್ಕೆ ಕಾರಣ ಏನು?
ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಶೇಷ ಗಿಫ್ಟ್ ಬಯಸಿದ ಮೆಗಾಸ್ಟಾರ್ ಚಿರಂಜೀವಿ; ಅವರಿಟ್ಟ ಕೋರಿಕೆ ಏನು?