AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಶೇಷ ಗಿಫ್ಟ್ ಬಯಸಿದ ಮೆಗಾಸ್ಟಾರ್ ಚಿರಂಜೀವಿ; ಅವರಿಟ್ಟ ಕೋರಿಕೆ ಏನು?

Chiranjeevi Birthday: ಟಾಲಿವುಡ್​ನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಆಗಸ್ಟ್ 22ರ ತಮ್ಮ ಜನ್ಮದಿನದಂದು ವಿಶೇಷ ಅಭಿಯಾನದಲ್ಲಿ ಜೊತೆಯಾಗಿ ಎಂದು ಅಭಿಮಾನಿಗಳಲ್ಲಿ ಕೋರಿಕೆ ಇಟ್ಟಿದ್ದಾರೆ.

ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ವಿಶೇಷ ಗಿಫ್ಟ್ ಬಯಸಿದ ಮೆಗಾಸ್ಟಾರ್ ಚಿರಂಜೀವಿ; ಅವರಿಟ್ಟ ಕೋರಿಕೆ ಏನು?
ಮೆಗಾಸ್ಟಾರ್ ಚಿರಂಜೀವಿ
TV9 Web
| Edited By: |

Updated on: Aug 21, 2021 | 7:38 PM

Share

ಟಾಲಿವುಡ್​ನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ನಾಳೆ(ಆಗಸ್ಟ್ 22) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಕೋರಿಕೆಯೊಂದನ್ನು ಇಟ್ಟಿದ್ದಾರೆ. ಮೆಗಾಸ್ಟಾರ್ 66ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮೂರು ಗಿಡಗಳನ್ನು ನೆಟ್ಟು, ಅದರ ಪಾಲನೆ ಮಾಡಬೇಕು ಎಂದು ಚಿರಂಜೀವಿ ಕೋರಿಕೊಂಡಿದ್ದಾರೆ. ‘ನಮಗೆಲ್ಲರಿಗೂ ಪ್ರಕೃತಿಯೇ ತಾಯಿ. ಹವಾಮಾನ ವೈಪರೀತ್ಯಕ್ಕೆ ಹಾಗೂ ವಾಯುಮಾಲಿನ್ಯದ ವಿರುದ್ಧ ಹೋರಾಡಲು ಸಸಿಗಳನ್ನು ನೆಟ್ಟು, ಬೆಳೆಸಬೇಕು. ಈ ಅಭಿಯಾನದಲ್ಲಿ ನನ್ನ ಅಭಿಮಾನಿಗಳೂ ಪಾಲ್ಗೊಂಡು ಬೆಂಬಲಿಸಿ’ ಎಂದು ಅವರು ಮನವಿ ಮಾಡಿದ್ದಾರೆ.

 ಚಿರಂಜೀವಿ ಮಾಡಿರುವ ಟ್ವೀಟ್ ಇಲ್ಲಿದೆ:

ಚಿರಂಜೀವಿ ಕೋರಿಕೆಗೆ ತೆಲಂಗಾಣ ರಾಷ್ಟ ಸಮಿತಿ(ಟಿಆರ್​ಎಸ್​)ಯ ರಾಜ್ಯಸಭಾ ಸದಸ್ಯರಾದ ಸಂತೋಷ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ‘ಅಭಿನಂದನೆಗಳು ಚಿರಂಜೀವಿಯವರೇ. ನಿಮಗಿರುವ ಅತಿ ದೊಡ್ಡ ಅಭಿಮಾನಿ ಬಳಗದಿಂದ ಈ ಅಭಿಯಾನ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ. ನಿಮ್ಮಂತೆ ಇತರರು ಕೂಡಾ ಕರೆ ನೀಡಿದಲ್ಲಿ ಈ ಅಭಿಯಾನ ಮತ್ತಷ್ಟು ಬಲಗೊಳ್ಳುತ್ತದೆ’ ಎಂದಿದ್ದಾರೆ.

ಸಂತೋಷ್ ಕುಮಾರ್ ಪ್ರತಿಕ್ರಿಯೆ ಇಲ್ಲಿದೆ:

ಈ ಹಿಂದೆ ನಟ ಮಹೇಶ್ ಬಾಬು ಕೂಡ ತಮ್ಮ ಜನ್ಮದಿನದಂದು ಅಭಿಮಾನಿಗಳಿಗೆ ಗಿಡಗಳನ್ನು ನೆಡಲು ಕರೆ ನೀಡಿದ್ದರು. ಗ್ರೀನ್ ಇಂಡಿಯಾದ ಭಾಗವಾಗಿ ಈ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸಿ ಎಂದು ಅವರು ಕೋರಿಕೊಂಡಿದ್ದರು. ಪ್ರಸ್ತುತ ಚಿರಂಜೀವಿ, ಮೋಹನ್ ರಾಜಾ ನಿರ್ದೇಶನದ ಮಲಯಾಳಂನ ಲೂಸಿಫರ್ ಚಿತ್ರದ ರಿಮೇಕ್​ನಲ್ಲಿ ನಟಿಸುತ್ತಿದ್ದಾರೆ. ತಮ್ಮ ಮಗ ರಾಮ್ ಚರಣ್ ಜೊತೆ ನಟಿಸುತ್ತಿರುವ ‘ಆಚಾರ್ಯ’ ಚಿತ್ರದ ಚಿತ್ರೀಕರಣವನ್ನು ಅವರು ಮುಗಿಸಿದ್ದಾರೆ. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಪೂಜಾ ಹೆಗ್ಡೆ, ಕಾಜಲ್ ಅಗರವಾಲ್ ಮೊದಲಾದವರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:

ಬದಲಾದ ಕನ್ನಡದ ಖ್ಯಾತ ನಟಿಯ ಲುಕ್​; ಇವರು ಯಾರು ಗುರುತಿಸ್ತೀರಾ?

Kangana Ranaut: ವಾಯುಸೇನೆ ಸಮವಸ್ತ್ರ ಧರಿಸಿದ ಕಂಗನಾ ರಣಾವತ್​ ಫೋಟೋ ವೈರಲ್​

(Megastar Chiranjeevi requests his fans to plant 3 saplings on his 66th birthday)

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್