AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಕ್ಕೆ ಬರುವ ಮೊದಲೇ ಕಿರಿಕ್​ ಮಾಡಿಕೊಂಡ ನಟಿ ಪಾಯಲ್​ ರಜಪೂತ್​

ಜಯರಾಜ್​ ಗರ್ಲ್​ಫ್ರೆಂಡ್​ ಈಗಲೂ ಪಂಜಾಬ್​ನಲ್ಲಿ ಇಬ್ಬರು ಮಕ್ಕಳೊಂದಿಗೆ ಬದುಕಿದ್ದಾರೆ. ವಿಶೇಷ ಎಂದರೆ ಪಾಯಲ್​ ಅವರು ಭೇಟಿ ಮಾಡೋಕೆ ಉತ್ಸುಕರಾಗಿದ್ದಾರೆ. ಪಾಯಲ್​ ರಜಪೂತ್​ ತೆಲಂಗಾಣದ ಪೆಡ್ಡಪಲ್ಲಿಗೆ ತೆರಳಿದ್ದರು. ಅಲ್ಲಿ ಅವರು ದೊಡ್ಡ ಮಾಲ್​ ಒಂದನ್ನು ಉದ್ಘಾಟನೆ ಮಾಡಿದ್ದರು. ಈ ವೇಳೆ ಅವರು ಮಾಸ್ಕ್​ ಧರಿಸಿರಲಿಲ್ಲ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಕನ್ನಡಕ್ಕೆ ಬರುವ ಮೊದಲೇ ಕಿರಿಕ್​ ಮಾಡಿಕೊಂಡ ನಟಿ ಪಾಯಲ್​ ರಜಪೂತ್​
ಕನ್ನಡಕ್ಕೆ ಬರುವ ಮೊದಲೇ ಕಿರಿಕ್​ ಮಾಡಿಕೊಂಡ ನಟಿ ಪಾಯಲ್​ ರಜಪೂತ್​
TV9 Web
| Edited By: |

Updated on:Apr 02, 2026 | 10:29 AM

Share

ಅಂಡರ್​ವರ್ಲ್ಡ್​​ ಡಾನ್​ ಆಗಿದ್ದ ಜಯರಾಜ್​ ಜೀವನ ಕಥೆ ಆಧರಿಸಿ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇದಕ್ಕೆ ‘ಹೆಡ್​ ಬುಷ್​’ ಎಂದು ನಾಮಕರಣ ಮಾಡಲಾಗಿದ್ದು, ಧನಂಜಯ ನಾಯಕ. ಈ ಸಿನಿಮಾದಲ್ಲಿ ಜಯರಾಜ್​ ಗರ್ಲ್​​ಫ್ರೆಂಡ್​ ಆಗಿ ಪಾಯಲ್​ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಸ್ಯಾಂಡಲ್​ವುಡ್​ಗೆ ಕಾಲಿಡುವುದಕ್ಕೂ ಮೊದಲೇ ಕಿರಿಕ್​ ಮಾಡಿಕೊಂಡಿದ್ದಾರೆ. ಹಾಗಂತ ಇದು ಭಾಷಾ ವಿಚಾರಕ್ಕೆ ಅಲ್ಲ. ಅವರು ವೈಯಕ್ತಿಕ ವಿಚಾರಕ್ಕೆ.

ಪಾಯಲ್​ ರಜಪೂತ್​ ತೆಲಂಗಾಣದ ಪೆಡ್ಡಪಲ್ಲಿಗೆ ತೆರಳಿದ್ದರು. ಅಲ್ಲಿ ಅವರು ದೊಡ್ಡ ಮಾಲ್​ ಒಂದನ್ನು ಉದ್ಘಾಟನೆ ಮಾಡಿದ್ದರು. ಈ ವೇಳೆ ಅವರು ಮಾಸ್ಕ್​ ಧರಿಸಿರಲಿಲ್ಲ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಈ ಘಟನೆ ನಡೆದಿದ್ದು ಜುಲೈ 11ರಂದು. ಪಾಯಲ್ ನೋಡೋಕೆ ದೊಡ್ಡ ಅಭಿಮಾನಿ ಬಳಗ ಸೇರಿತ್ತು. ಆದರೆ ಪಾಯಲ್​ ಸೆಲೆಬ್ರಿಟಿ ಆಗಿದ್ದರೂ ಮಾಸ್ಕ್​ ಧರಿಸಿರಲಿಲ್ಲ.  ಸೆಲೆಬ್ರಿಟಿಗಳನ್ನು ಸಾಕಷ್ಟು ಜನರು ಫಾಲೋ ಮಾಡುತ್ತಿರುತ್ತಾರೆ. ಆದರೆ, ಇದನ್ನು ಪಾಯಲ್​ ಮರೆತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಕೋರ್ಟ್​ನಲ್ಲಿ ದೂರು ದಾಖಲು ಮಾಡಿದ್ದರು. ಪೊಲೀಸರಿಗೆ ಪ್ರಕರಣ ದಾಖಲು ಮಾಡಿಕೊಳ್ಳುವಂತೆ ಕೋರ್ಟ್​ ಆದೇಶಿಸಿದೆ.

ಜಯರಾಜ್​ ಗರ್ಲ್​ಫ್ರೆಂಡ್​ ಈಗಲೂ ಪಂಜಾಬ್​ನಲ್ಲಿ ಇಬ್ಬರು ಮಕ್ಕಳೊಂದಿಗೆ ಬದುಕಿದ್ದಾರೆ. ವಿಶೇಷ ಎಂದರೆ ಪಾಯಲ್​ ಅವರು ಭೇಟಿ ಮಾಡೋಕೆ ಉತ್ಸುಕರಾಗಿದ್ದಾರೆ. 70-80ರ  ಅವಧಿಯಲ್ಲಿ ಈ ಕಥೆ ಸಾಗಲಿದೆ. ಶೂನ್ಯ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

2017ರಲ್ಲಿ ತೆರೆಗೆ ಬಂದ ಪಂಜಾಬಿ ಸಿನಿಮಾ ‘ಚನ್ನ ಮೇರೆಯಾ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಪಾಯಲ್​. ಟಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ‘ಆರ್​ಎಕ್ಸ್​ 100’ ಸಿನಿಮಾದಲ್ಲಿ ಪಾಯಲ್​ ನಟಿಸಿದ್ದರು. ಇದು ಅವರ ಮೊದಲ ತೆಲುಗು ಸಿನಿಮಾ. ನಂತರ ‘ಆರ್​ಡಿಎಕ್ಸ್​ ಲವ್​’ ಸಿನಿಮಾ ಸೇರಿ ಸಾಕಷ್ಟು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಹೆಡ್​ ಬುಷ್​ ಅವರ ಮೊದಲ ಕನ್ನಡ ಸಿನಿಮಾ.

ಇದನ್ನೂ ಓದಿ: Raksha Bandhan: ‘ಡಾಲಿ’ ಧನಂಜಯ ಜೊತೆ ಮಂಗಳಮುಖಿಯರ ರಕ್ಷಾ ಬಂಧನ ಹಬ್ಬದ ಸಂಭ್ರಮ

Published On - 9:23 pm, Sat, 21 August 21

Follow Us
Web contact
Web contact

TV9 Kannada

Read More
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?