Hostel Hudugaru Bekagiddare: ‘ಆಪನ್​ಹೈಮರ್​’, ‘ಬಾರ್ಬಿ’ ಚಿತ್ರವನ್ನೂ ಮೀರಿಸಿ ‘ಬುಕ್​ ಮೈ ಶೋ’ ರೇಟಿಂಗ್​ ಪಡೆದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’

|

Updated on: Jul 26, 2023 | 5:20 PM

Oppenheimer Book My Show Rating: ಹಾಲಿವುಡ್​ನ ದೊಡ್ಡ ಸಿನಿಮಾಗಳು ರಿಲೀಸ್​ ಆದಾಗ ಕನ್ನಡದ ಚಿತ್ರಗಳು ಪೈಪೋಟಿ ನೀಡುವುದು ಎಂದರೆ ಸುಲಭದ ಮಾತಲ್ಲ. ಈ ವಿಚಾರದಲ್ಲಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಗೆದ್ದಿದೆ.

Hostel Hudugaru Bekagiddare: ‘ಆಪನ್​ಹೈಮರ್​’, ‘ಬಾರ್ಬಿ’ ಚಿತ್ರವನ್ನೂ ಮೀರಿಸಿ ‘ಬುಕ್​ ಮೈ ಶೋ’ ರೇಟಿಂಗ್​ ಪಡೆದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’
ಆಪನ್​ಹೈಮರ್​, ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ, ಬಾರ್ಬಿ
Follow us on

ಜುಲೈ 21ರಂದು ಸಿನಿಪ್ರಿಯರಿಗೆ ಹಬ್ಬ. ಅಂದು ಹಲವು ಸಿನಿಮಾಗಳು ಬಿಡುಗಡೆ ಆದವು. ಆ ಪೈಕಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಸದ್ದು ಮಾಡಿದ್ದು ‘ಆಪನ್​ಹೈಮರ್​’ (Oppenheimer) ಮತ್ತು ‘ಬಾರ್ಬಿ’ ಸಿನಿಮಾಗಳು. ಅದರ ನಡುವೆ ಕನ್ನಡದ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾ ಕೂಡ ಕೌತುಕ ಮೂಡಿಸಿತ್ತು. ಈ ಮೂರೂ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಉತ್ತಮವಾಗಿ ಕಮಾಯಿ ಮಾಡಿವೆ. ಮೂರೂ ಚಿತ್ರಗಳ ಶೈಲಿ ಬೇರೆ ಬೇರೆಯಾಗಿದೆ. ಜನರು ಈ ಚಿತ್ರಗಳನ್ನು ಮೆಚ್ಚಿಕೊಂಡಿದ್ದಾರೆ. ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾತ್ರವಲ್ಲದೇ ಬುಕ್​ ಮೈ ಶೋನಲ್ಲಿ ರೇಟಿಂಗ್​ ಪಡೆಯುವಲ್ಲಿಯೂ ಸಿನಿಮಾಗಳ ನಡುವೆ ಪೈಪೋಟಿ ಇರುತ್ತದೆ. ಹಾಗಾದರೆ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’, ‘ಆಪನ್​ಹೈಮರ್​’ ಮತ್ತು ‘ಬಾರ್ಬಿ’ (Barbie Movie) ಚಿತ್ರಗಳಿಗೆ ಬುಕ್​ ಮೈ ಶೋನಲ್ಲಿ ಸಿಕ್ಕ ರೇಟಿಂಗ್ ಎಷ್ಟು? ಆ ಬಗ್ಗೆ ಇಲ್ಲಿದೆ ಮಾಹಿತಿ..

ಭಾರಿ ನಿರೀಕ್ಷೆ ಇರುವ ಹಾಲಿವುಡ್​ ಸಿನಿಮಾಗಳು ರಿಲೀಸ್​ ಆದಾಗ ಕನ್ನಡದ ಚಿತ್ರಗಳು ಪೈಪೋಟಿ ನೀಡುವುದು ಎಂದರೆ ಸುಲಭದ ಮಾತಲ್ಲ. ಈ ವಿಚಾರದಲ್ಲಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಗೆದ್ದಿದೆ. ಹೊಸಬರೇ ಸೇರಿಕೊಂಡು ಮಾಡಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಈಗಲೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಜುಲೈ 26 ಸಂಜೆ 5 ಗಂಟೆ ವೇಳೆಗೆ ಬುಕ್​ ಮೈ ಶೋನಲ್ಲಿ ಈ ಚಿತ್ರಕ್ಕೆ 8.9 ರೇಟಿಂಗ್​ ಸಿಕ್ಕಿದೆ. 7.9 ಸಾವಿರ ಜನರು ವೋಟ್​ ಮಾಡಿದ್ದಾರೆ.

ಇದನ್ನೂ ಓದಿ: Oppenheimer: ಲೈಂಗಿಕ ಕ್ರಿಯೆ ವೇಳೆ ಭಗವದ್ಗೀತೆ ಓದುವ ದೃಶ್ಯ; ‘ಆಪನ್​ಹೈಮರ್​’ ಚಿತ್ರಕ್ಕೆ ಎದುರಾಯ್ತು ವಿರೋಧ

ಕ್ರಿಸ್ಟೋಫರ್​ ನೋಲನ್​ ನಿರ್ದೇಶನ ಮಾಡಿದ ‘ಆಪನ್​ಹೈಮರ್​’ ಸಿನಿಮಾದಲ್ಲಿ ಗಂಭೀರವಾದ ವಿಷಯಗಳಿವೆ. ಅಣುಬಾಂಬ್​ ಕಂಡುಹಿಡಿದ ಜೆ. ರಾಬರ್ಟ್​ ಆಪನ್​ಹೈಮರ್​ ಜೀವನದ ಕುರಿತು ಈ ಸಿನಿಮಾ ಸಿದ್ಧವಾಗಿದೆ. ಜುಲೈ 26 ಸಂಜೆ 5 ಗಂಟೆ ವೇಳೆಗೆ ಬುಕ್​ ಮೈ ಶೋನಲ್ಲಿ ಈ ಚಿತ್ರವು 8.8 ರೇಟಿಂಗ್​ ಪಡೆದುಕೊಂಡಿದೆ. ಒಟ್ಟು 62.7 ಸಾವಿರ ಜನರು ಈ ಚಿತ್ರಕ್ಕೆ ವೋಟ್​ ಮಾಡಿದ್ದಾರೆ. ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾಗೆ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಆಗಿದೆ.

ಇದನ್ನೂ ಓದಿ: Ram Gopal Varma: ‘ಆಪನ್​ಹೈಮರ್​’ ಚಿತ್ರದಲ್ಲಿನ ಭಗವದ್ಗೀತೆ ಕುರಿತ ವಿವಾದಾತ್ಮಕ ದೃಶ್ಯದ ಬಗ್ಗೆ ರಾಮ್​ ಗೋಪಾಲ್​ ವರ್ಮಾ ಪ್ರತಿಕ್ರಿಯೆ

ರಯಾನ್​ ಗಾಸ್ಲಿಂಗ್​ ನಟನೆಯ ‘ಬಾರ್ಬಿ’ ಚಿತ್ರಕ್ಕೆ ಬುಕ್​ ಮೈ ಶೋನಲ್ಲಿ 12 ಸಾವಿರ ಜನರು ವೋಟ್​ ಮಾಡಿದ್ದಾರೆ. ಈ ಚಿತ್ರಕ್ಕೆ 7.7 ರೇಟಿಂಗ್​ ಸಿಕ್ಕಿದೆ. ಎರಡು ಹಾಲಿವುಡ್​ ಚಿತ್ರಗಳನ್ನೂ ಮೀರಿಸಿ ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಚಿತ್ರ ಉತ್ತಮ ರೇಟಿಂಗ್​ (8.9) ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ವೋಟ್​ ಮಾಡುವವರ ಸಂಖ್ಯೆಯ ಆಧಾರದ ಮೇಲೆ ರೇಟಿಂಗ್​ನಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.