ನಾಚಿಕೆ ಸ್ವಭಾವದ ರೆಹಮಾನ್​ಗೆ ಸೈರಾ ಬಾನು ಸಿಕ್ಕಿದ್ದು ಹೇಗೆ?

AR Rahman: ಎಆರ್ ರೆಹಮಾನ್ ಮತ್ತು ಸಾಯಿರಾ ಬಾನು ತಮ್ಮ 29 ವರ್ಷದ ದಾಂಪತ್ಯ ಅಂತ್ಯಗೊಳಿಸಿದ್ದಾರೆ. ಸಂಕೋಚ ಸ್ವಭಾವದವರಾಗಿದ್ದ ಎಆರ್ ರೆಹಮಾನ್, ಸಾಯಿರಾ ಭಾನು ಒಂದಾಗಿದ್ದು ಹೇಗೆ?

ನಾಚಿಕೆ ಸ್ವಭಾವದ ರೆಹಮಾನ್​ಗೆ ಸೈರಾ ಬಾನು ಸಿಕ್ಕಿದ್ದು ಹೇಗೆ?
ಸೈರಾ-ರೆಹಮಾನ್
Edited By:

Updated on: Nov 20, 2024 | 10:56 AM

ಎಆರ್ ರೆಹಮಾನ್ ಹಾಗೂ ಅವರ ಪತ್ನಿ ಸೈರಾ ಬಾನು ಬೇರೆ ಆಗಿದ್ದಾರೆ. ಇಬ್ಬರೂ 29 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಬೇರೆ ಆಗುವ ಬಗ್ಗೆ ಮಂಗಳವಾರ ಘೋಷಣೆ ಮಾಡಿದ್ದಾರೆ. ಈ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದೆ. ಇಷ್ಟು ವರ್ಷಗಳ ಕಾಲ ಇವರು ಒಟ್ಟಾಗಿದ್ದು ಈಗ ಬೇರೆ ಆಗಿದ್ದು ಏಕೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ. ಸದ್ಯ ರೆಹಮಾನ್ ಅವರ ಹಳೆಯ ಸಂದರ್ಶನ ಒಂದು ವೈರಲ್ ಆಗಿದೆ.

ರೆಹಮಾನ್ ಹಾಗೂ ಸೈರಾ ಬಾನು ಸುಮಾರು ಮೂರು ದಶಕ ಒಟ್ಟಾಗಿ ಇದ್ದರು. ಇಬ್ಬರ ಮಧ್ಯೆ ಪ್ರೀತಿ ಇತ್ತು, ಒಳ್ಳೆಯ ಹೊಂದಾಣಿಕೆ ಇತ್ತು. ಆದರೆ, ಈ ಹೊಂದಾಣಿಕೆ ಈಗ ಮುರಿದಿದೆ. ಇಬ್ಬರೂ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಅವರ ನಿರ್ಧಾರವನ್ನು ಅನೇಕರು ಒಪ್ಪಿದ್ದಾರೆ.

‘1994ರಲ್ಲಿ ನಾನು ಸುಮಾರು ಇಪ್ಪತ್ತೇಳು ವರ್ಷದವನಾಗಿದ್ದೆ. ನಾನು ಮದುವೆಯಾಗಲು ನಿರ್ಧರಿಸಿದೆ. ನನಗೆ ವಯಸ್ಸಾಯಿತು ಎಂದು ಅನಿಸುತ್ತಿತ್ತು. ನಾನು ಯಾವಾಗಲೂ ತುಂಬಾ ನಾಚಿಕೆಪಡುತ್ತಿದ್ದೆ ಮತ್ತು ಹುಡುಗಿಯರೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ನಾವು ಕೆಲಸ ಮಾಡುವಾಗ ನನ್ನ ಸ್ಟುಡಿಯೋದಲ್ಲಿ ನಾನು ಅನೇಕ ಯುವ ಮಹಿಳಾ ಗಾಯಿಕಿಯಕರನ್ನು ಭೇಟಿಯಾದೆ. ಅವರ ಬಗ್ಗೆ ನನಗೆ ಅಪಾರ ಗೌರವವಿತ್ತು. ಅಲ್ಲಿ ಇದ್ದ ಯಾರನ್ನೂ ಮದುವೆ ಆಗಬೇಕು ಎಂಬ ದೃಷ್ಟಿಯಿಂದ ನೋಡಿಲ್ಲ. ಹುಡುಗಿಯರ ಬಗ್ಗೆ ಯೋಚಿಸಲು ನನಗೆ ಸಮಯವಿರಲಿಲ್ಲ. ನಾನು ಹಗಲಿರುಳು ಕೆಲಸ ಮಾಡುತ್ತಿದ್ದೆ’ ಎಂದಿದ್ದರು ರೆಹಮಾನ್.

ಇದನ್ನೂ ಓದಿ:‘ನಾವು ಊಹಿಸದ ಅಂತ್ಯ ಸಿಕ್ಕಿದೆ’; ವಿಚ್ಛೇದನದ ಬಗ್ಗೆ ಎಆರ್ ರೆಹಮಾನ್ ಮಾತು

‘ಅವಳು ಸುಂದರ ಮತ್ತು ಸೌಮ್ಯವಾಗಿದ್ದಳು. ನಾವು ಮೊದಲ ಬಾರಿಗೆ 6 ಜನವರಿ 1995ರಂದು ನನ್ನ ಇಪ್ಪತ್ತೆಂಟನೇ ಹುಟ್ಟುಹಬ್ಬದಂದು ಭೇಟಿಯಾದೆವು. ಆ ಬಳಿಕ ನಾವು ಹೆಚ್ಚಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ನನ್ನನ್ನು ಮದುವೆಯಾಗಲು ಬಯಸುತ್ತೀರಾ ಎಂದು ನಾನು ಅವಳನ್ನು ಇಂಗ್ಲಿಷ್‌ನಲ್ಲಿ ಕೇಳಿದ್ದೆ. ಆ ದಿನಗಳಲ್ಲಿ ಸಾಯಿರಾ ತುಂಬಾ ಶಾಂತವಾಗಿದ್ದಳು. ಈಗಲೂ ಅವಳು ಸುಮ್ಮನಿರುತ್ತಾಳೆ’ ಎಂದಿದ್ದರು ರೆಹಮಾನ್.

ಈ ಜೋಡಿ 1995ರ ಮಾರ್ಚ್ 12ರಂದು ಮದುವೆ ಆಗಿತ್ತು. ಬಹುತೇಕ ಮೂರು ದಶಕಗಳ ಕಾಲ ಹೊಂದಾಣಿಕೆಯಿಂದ ಸಂಸಾರ ಮಾಡಿದ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು ಹೀಗೆ ಏಕಾಏಕಿ ವಿಚ್ಛೇದನ ಘೋಷಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ಗಾಯಕನಾಗಿಯೂ ಎ.ಆರ್. ರೆಹಮಾನ್ ಅವರಿಗೆ ಬೇಡಿಕೆ ಇದೆ. ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಯ ಸಿನಿಮಾಗಳಿಗೆ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ