ಮಾಧುರಿ ಲವ್​ಸ್ಟೋರಿ ಹುಟ್ಟಲು ಕಾರಣವಾಗಿದ್ದು ಇದೇ ವ್ಯಕ್ತಿ..

| Updated By: ರಾಜೇಶ್ ದುಗ್ಗುಮನೆ

Updated on: May 15, 2024 | 8:00 AM

ಮಾಧುರಿ ದೀಕ್ಷಿತ್ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ತಳುಕು ಹಾಕಿಕೊಂಡಿತ್ತು. ಅನೇಕ ಸೆಲೆಬ್ರಿಟಿಗಳ ಜೊತೆ ಮಾಧುರಿ ಪ್ರೀತಿಯಲ್ಲಿ ಇದ್ದರು ಎನ್ನಲಾಗಿದೆ. ಮಾಧುರಿ ಮನಸ್ಸನ್ನು ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಕದ್ದಿದ್ದರು. ಇಬ್ಬರೂ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು.

ಮಾಧುರಿ ಲವ್​ಸ್ಟೋರಿ ಹುಟ್ಟಲು ಕಾರಣವಾಗಿದ್ದು ಇದೇ ವ್ಯಕ್ತಿ..
ಶ್ರೀರಾಮ್​-ಮಾಧುರಿ
Follow us on

ಮಾಧುರಿ ದೀಕ್ಷಿತ್ (Madhuri Dixit) ಹಾಗೂ ಅವರ ಪತಿ ಶ್ರೀರಾಮ್​ ಅವರು ಅನೇಕರಿಗೆ ಮಾದರಿ. ಈ ದಂಪತಿ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಇಂದು (ಮೇ 15) ಮಾಧುರಿ ದೀಕ್ಷಿತ್​ಗೆ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಡ್ಯಾನ್ಸ್​ ಮೂಲಕ ಎಲ್ಲರ ಮನ ಗೆದ್ದವರು ಮಾಧುರಿ. ಮಾಧುರಿ ದೀಕ್ಷಿತ್ ಹಾಗೂ ಶ್ರೀರಾಮ್ ಅವರದ್ದು ಅರೇಂಜ್ ಮ್ಯಾರೇಜ್ ಎಂದು ಅನೇಕರು ನಂಬಿದ್ದಾರೆ. ಆದರೆ, ಅಸಲಿಗೆ ಇವರದ್ದು ಪ್ರೇಮ ವಿವಾಹ. ಇವರ ಮಧ್ಯೆ ಮಧ್ಯವರ್ತಿ ಕೆಲಸ ಮಾಡಿದ್ದು ಮಾಧುರಿ ಸಹೋದರ ಅಜಿತ್ ದೀಕ್ಷಿತ್.

ಮಾಧುರಿ ದೀಕ್ಷಿತ್ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ತಳುಕು ಹಾಕಿಕೊಂಡಿತ್ತು. ಅನೇಕ ಸೆಲೆಬ್ರಿಟಿಗಳ ಜೊತೆ ಮಾಧುರಿ ಪ್ರೀತಿಯಲ್ಲಿ ಇದ್ದರು ಎನ್ನಲಾಗಿದೆ. ಮಾಧುರಿ ಮನಸ್ಸನ್ನು ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಕದ್ದಿದ್ದರು. ಇಬ್ಬರೂ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆದರೆ ಈ ಸಂಬಂಧವು ಮದುವೆವರೆಗೆ ಹೋಗಲಿಲ್ಲ. ಇದರಿಂದ ಅವರು ಬೇಸರಗೊಂಡಿದ್ದರು. ಆ ಬಳಿಕ ಅವರಿಗೆ ಪ್ರೀತಿ ಮೇಲಿದ್ದ ನಂಬಿಕೆಯೇ ಹೋಗಿತ್ತು. ಆಗ ಮಾಧುರಿ ಸಹೋದರ ಅಜಿತ್ ಅವರು ಬಂದು ಮಾಧುರಿ ಬಳಿ ವಿಶೇಷ ಮನವಿ ಮಾಡಿಕೊಂಡರು. ‘ಶ್ರೀರಾಮ್ ಎಂಬ ನನ್ನ ಗೆಳೆಯನಿದ್ದಾನೆ. ಹೃದಯನಾಳದ ಸರ್ಜನ್. ಒಮ್ಮೆ ಭೇಟಿ ಮಾಡಿ’ ಎಂದು ಅಜಿತ್ ಅವರು ಮಾಧುರಿ ಬಳಿ ಕೇಳಿಕೊಂಡಿದ್ದರು.

ಅಜಿತ್ ಅವರ ಕೋರಿಕೆಗೆ ಒಪ್ಪಿದ ಮಾಧುರಿ ಅವರು ಶ್ರೀರಾಮ್​ ಹಾಗೂ ಅವರ ಕುಟುಂಬದವರನ್ನು ಭೇಟಿ ಮಾಡಿದರು. ಶ್ರೀರಾಮ್ ಅವರ ಚಾರ್ಮ್ ಹಾಗೂ ಅವರ ಕಾಳಜಿಗೆ ಮಾರು ಹೋದರು. ನಿಧಾನವಾಗಿ ಇಬ್ಬರ ಮಧ್ಯೆ ಪ್ರೀತಿ ಬೆಳೆಯುತ್ತಾ ಹೋಯಿತು. ಮಾಧುರಿ ಇಷ್ಟು ದೊಡ್ಡ ಸ್ಟಾರ್ ಎಂಬುದು ಶ್ರೀರಾಮ್​ಗೆ ಗೊತ್ತಿರಲಿಲ್ಲ. ‘ಸಿನಿಮಾಗಳಲ್ಲಿ ನಾನು ನಟಿಸುತ್ತೇನೆ’ ಎಂದಷ್ಟೇ ಮಾಧುರಿ ತಿಳಿಸಿದ್ದರು. ಹೆಚ್ಚಾಗಿ ಹೇಳಲು ಮಾಧುರಿಯೂ ಹೋಗಲಿಲ್ಲ, ಶ್ರೀರಾಮ್ ಕೂಡ ಹೆಚ್ಚಿನದ್ದನ್ನು ಕೇಳಿಲ್ಲ, ಹುಡುಕಿಲ್ಲ. ಆ ಬಳಿಕ ಮಾಧುರಿಯ ಖ್ಯಾತಿ ತಿಳಿಯಿತು.

ಕೆಲವು ವರ್ಷ ಡೇಟ್ ಮಾಡಿದ ಬಳಿಕ ಇಬ್ಬರೂ ಮದುವೆ ಆಗಲು ನಿರ್ಧರಿಸಿದರು. 1999ರ ಅಕ್ಟೋಬರ್ 17ರಂದು ಮಾಧುರಿ ಹಾಗೂ ಶ್ರೀರಾಮ್ ಮದುವೆ ಆಗಲು ನಿರ್ಧಿರಿಸಿದರು. ಮಾಧ್ಯಮಗಳಿಂದ ದೂರ ಇರಬೇಕು ಎನ್ನುವ ಕಾರಣಕ್ಕೆ ಇವರ ಮದುವೆ ಅಮೆರಿಕದಲ್ಲಿ ನಡಯಿತು. ಮೊದಲ ಮಗುವಿನ ಅರಿನ್ ಹಾಗೂ ಎರಡನೇ ಮದುವೆಗೆ ರಾಯನ್ ಎಂದು ಹೆಸರನ್ನು ಇಟ್ಟಿದ್ದಾರೆ.

ಇದನ್ನೂ ಓದಿ: ಮಾಧುರಿ ದೀಕ್ಷಿತ್ ಈ ರಾಜಮನೆತನದ ಸೊಸೆ ಆಗಬೇಕಿತ್ತು; ಒಂದು ಅಪೂರ್ಣ ಪ್ರೇಮಕಥೆ

ಮಾಧುರಿ ದೀಕ್ಷಿತ್ ಅವರು ‘ಏಕ್ ದೋ ತೀನಾ ಚಾರ್..’ ಹಾಡಿನ ಮೂಲಕ ರಾತ್ರೋರಾತ್ರಿ ಸ್ಟಾರ್ ಆದರು. ಸಲ್ಮಾನ್ ಖಾನ್, ಶ್ರೀದೇವಿಗೆ ಸರಿಸಾಟಿಯಾಗಿ ಅವರು ಸಂಭಾವನೆ ಪಡೆಯುತ್ತಿದ್ದರು. ಸದ್ಯ ಅವರು ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ಜಡ್ಜ್​ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.