ಬಿಗ್​ ಬಾಸ್​​ಗೆ ಬರೋಕೆ ರೆಡಿ ಆದ ‘ಹುಚ್ಚ’ ನಟಿ ರೇಖಾ?

ತೆಲುಗು ಬಿಗ್ ಬಾಸ್ 10ನೇ ಸೀಸನ್‌ಗೆ ಸಿದ್ಧತೆ ಜೋರಾಗಿದೆ. ‘ಹುಚ್ಚ’ ಚಿತ್ರ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಸ್ಪರ್ಧಿಯಾಗಿ ಭಾಗವಹಿಸುವ ಬಗ್ಗೆ ಭಾರಿ ಚರ್ಚೆ ನಡೆದಿದೆ. ಆರಂಭದಲ್ಲಿ ಬಿಗ್ ಬಾಸ್‌ಗೆ ಸ್ಪರ್ಧಿಯಾಗಿ ಹೋಗುವ ಧೈರ್ಯವಿಲ್ಲ, ಅತಿಥಿಯಾಗಿ ಬರುತ್ತೇನೆ ಎಂದಿದ್ದ ರೇಖಾ, ಈಗ ಅಭಿಮಾನಿಗಳ ವಲಯದಲ್ಲಿ ಮತ್ತೆ ಕುತೂಹಲ ಮೂಡಿಸಿದ್ದಾರೆ. ಹಿಂದೆ ಬಿಗ್ ಬಾಸ್‌ಗೆ ಬರುವುದಿಲ್ಲ ಎಂದವರೇ ಅಚ್ಚರಿ ಮೂಡಿಸಿದ ಉದಾಹರಣೆಗಳಿವೆ. ಹಾಗಾಗಿ, ರೇಖಾ ಕೂಡ ಮನೆ ಪ್ರವೇಶಿಸಬಹುದು ಎಂದು ಅಂದಾಜಿಸಲಾಗಿದೆ.

ಬಿಗ್​ ಬಾಸ್​​ಗೆ ಬರೋಕೆ ರೆಡಿ ಆದ ‘ಹುಚ್ಚ’ ನಟಿ ರೇಖಾ?
ರೇಖಾ

Updated on: Jun 30, 2026 | 10:54 AM

ಮುಖ್ಯಾಂಶಗಳು

  • ಬಿಗ್ ಬಾಸ್ 10ನೇ ಸೀಸನ್‌ಗೆ ಕೌಂಟ್‌ಡೌನ್: 'ಹುಚ್ಚ' ಬೆಡಗಿ ರೇಖಾ ವೇದವ್ಯಾಸ್ ಸ್ಪರ್ಧಿಯಾಗಿ ಬರುವರೇ?
  • 'ಹುಚ್ಚ' ಹಾಗೂ 'ಅಂಡಮಾನ್' ತಾರೆಯ ರಿಯಾಲಿಟಿ ಶೋ ಎಂಟ್ರಿ: ಹರಿದಾಡುತ್ತಿರುವ ಸಂಭಾವ್ಯ ಪಟ್ಟಿಯ ಮಾಹಿತಿ
  • ಬಿಗ್ ಬಾಸ್ ಮನೆ ಪ್ರವೇಶದ ಬಗ್ಗೆ ನಟಿ ರೇಖಾ ಮಾತು: ಅಚ್ಚರಿಯ ಮೂವ್ ನಿರೀಕ್ಷಿಸುತ್ತಿರುವ ಅಭಿಮಾನಿಗಳು

ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮತ್ತೆ ಸದ್ದು ಮಾಡುತ್ತಿದೆ. ಈ ಬಾರಿ ಕನ್ನಡ,ತೆಲುಗು ಮೊದಲಾದ ಭಾಷೆಗಳಲ್ಲಿ ಒಟ್ಟಿಗೆ ಆರಂಭ ಆಗುವ ಸಾಧ್ಯತೆ ಇದೆ. ತೆಲುಗಿನಲ್ಲಿ ಈಗಾಗಲೇ 9 ಸೀಸನ್‌ಗಳು ಪೂರ್ಣಗೊಂಡಿವೆ. ಈ ಶೋ ಈಗ ಹತ್ತನೇ ಸೀಸನ್‌ಗೆ ಸಜ್ಜಾಗುತ್ತಿದೆ. ಈ ಬಾರಿ ತೆಲುಗಿನಲ್ಲಿ ದೊಡ್ಡ ಸೆಲೆಬ್ರಿಟಿಗಳನ್ನು ಸ್ಪರ್ಧಿಗಳಾಗಿ ಕರೆತರಲು ಸಿದ್ಧತೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಭಾವ್ಯ ಸ್ಪರ್ಧಿಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ಪಟ್ಟಿಯಲ್ಲಿ ತೇಜಸ್ವಿನಿ ಗೌಡ, ಪಲ್ಲವಿ ಗೌಡ, ಜಬರ್ದಸ್ತ್ ವರ್ಷ, ಪವಿತ್ರ, ವರ್ಷಿಣಿ, ಎಕ್ಸ್‌ಪ್ರೆಸ್ ಹರಿ ಮತ್ತು ನೂಕರಾಜು ಸೇರಿದಂತೆ ಹಲವು ಪ್ರಸಿದ್ಧ ಹೆಸರುಗಳು ಕೇಳಿಬರುತ್ತಿವೆ. ಇದರ ನಡುವೆ ಬಹುಭಾಷಾ ನಟಿ ರೇಖಾ ಹೆಸರು ಜೋರಾಗಿ ಕೇಳಿ ಬರುತ್ತಿದೆ.

ರೇಖಾ ವೇದವ್ಯಾಸ್ ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ ‘ಹುಚ್ಚ’ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಚಿತ್ರಗಳ ಮೂಲಕ ಅವರು ಕನ್ನಡಿಗರ ನೆಚ್ಚಿನ ನಟಿಯಾಗಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ‘ಆನಂದಮ್’’, ‘ಜಾನಕಿ ವೆಡ್ಸ್ ಶ್ರೀರಾಮ್’ ‘ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರೇಖಾ ಅವರು ಸಿನಿಮಾಗಳನ್ನು ಮಾಡುತ್ತಿಲ್ಲ. 2014ರ ನಂತರ ಅವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

ದೀರ್ಘ ಬಿಡುವಿನ ಬಳಿಕ ರೇಖಾ ಬಣ್ಣದ ಲೋಕಕ್ಕೆ ಮರಳಲು ರೆಡಿ ಆಗಿದ್ದಾರೆ. ಇದರ ಭಾಗವಾಗಿ ಅವರು ಸರಣಿ ಸಂದರ್ಶನಗಳನ್ನು ನೀಡುತ್ತಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಅವರು ಬಿಗ್ ಬಾಸ್ ಬಗ್ಗೆ ಮಾತನಾಡಿದ್ದರು.‘ಬಿಗ್ ಬಾಸ್ ಮನೆಗೆ ಹೋಗಲು ದೊಡ್ಡ ಧೈರ್ಯ ಬೇಕು. ಅಷ್ಟೊಂದು ಜನರ ನಡುವೆ ಸ್ಪರ್ಧಿಸುವ ಮತ್ತು ಕ್ಯಾಮೆರಾಗಳ ಮುಂದೆ ಟಾಸ್ಕ್ ಮಾಡುವ ಸ್ಪರ್ಧಿಗಳಿಗೆ ನಾನು ಸೆಲ್ಯೂಟ್ ಮಾಡುತ್ತೇನೆ’ ಎಂದು ರೇಖಾ ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಸುರೇಶ್‌ಗೆ ಕಹಿ ಅನುಭವ; ಯುವಕನ ವಿಕೃತ ವರ್ತನೆ

‘ನನಗೆ ಆ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಹೋಗಲು ಅಷ್ಟೊಂದು ಧೈರ್ಯವಿಲ್ಲ. ಅತಿಥಿಯಾಗಿ ಹೋಗಲು ನಾನು ಸಿದ್ಧಳಿದ್ದೇನೆ. ಆದರೆ ಸ್ಪರ್ಧಿಯಾಗಿ ಮನೆ ಒಳಗೆ ಹೋಗಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಆದರೆ ಈ ಹಿಂದೆ ಬಿಗ್ ಬಾಸ್ ಹೋಗಲ್ಲ ಎಂದವರೇ ಶೋಗೆ ಎಂಟ್ರಿ ಕೊಟ್ಟು ಶಾಕ್ ನೀಡಿದ ಉದಾಹರಣೆಗಳಿವೆ. ಹಾಗಾಗಿ ರೇಖಾ ವೇದವ್ಯಾಸ್ ಕೂಡ ಅದೇ ರೀತಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂದು ಸಿನಿಮಾ ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us