Pawan Kalyan: ಪವನ್ ಕಲ್ಯಾಣ್​ನಿಂದಾಗಿ ಆಫರ್​ ಕಳೆದುಕೊಂಡಿದ್ದೇನೆ ಎಂದ ಪೊಸಾನಿ

ಪವನ್ ಕಲ್ಯಾಣ್ ವಿರುದ್ಧ ಪೊಸಾನಿ ಆಗಾಗ ಗುಡುಗುತ್ತಾರೆ. ಅವರ ವಿರುದ್ಧ ಸಾಕಷ್ಟು ಆರೋಪಗಳನ್ನು ಅವರು ಮಾಡುತ್ತಾರೆ. ಇತ್ತೀಚೆಗೆ ಅವರು ಪವನ್ ಕಲ್ಯಾಣ್ ಬಗ್ಗೆ ಕೆಲ ಆರೋಪ ಮಾಡಿದ್ದಾರೆ.

Pawan Kalyan: ಪವನ್ ಕಲ್ಯಾಣ್​ನಿಂದಾಗಿ ಆಫರ್​ ಕಳೆದುಕೊಂಡಿದ್ದೇನೆ ಎಂದ ಪೊಸಾನಿ
ಪವನ್ ಕಲ್ಯಾಣ್

Updated on: Jun 27, 2023 | 7:54 AM

ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಪೊಸಾನಿ ಕೃಷ್ಣ ಮುರಳಿ (Posani Murali Krishna) ಕೂಡ ಒಬ್ಬರು. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಆಗಾಗ ವಿವಾದದ ಮೂಲಕ ಸುದ್ದಿ ಆಗುತ್ತಾರೆ. ತೆಲುಗು ನಟ ಪವನ್​ ಕಲ್ಯಾಣ್ (Pawan Kalyan)​ ಬಗ್ಗೆ ಅನೇಕ ಆರೋಪಗಳನ್ನು ಅವರು ಮಾಡುತ್ತಾ ಇರುತ್ತಾರೆ. ಈಗ ಅವರು ಹೊಸ ಆರೋಪ ಮಾಡಿದ್ದಾರೆ. ‘ನನಗೆ ಬರಬೇಕಿದ್ದ ಆಫರ್​ಗಳು​​​ ಕಳೆದು ಹೋಗೋಕೆ ಪವನ್ ಕಲ್ಯಾಣ್ ಕಾರಣ’ ಎಂದು ಪೊಸಾನಿ ಕೃಷ್ಣ ಮುರಳಿ ಇತ್ತೀಚೆಗೆ ಹೇಳಿದ್ದಾರೆ.

ಪವನ್ ಕಲ್ಯಾಣ್ ವಿರುದ್ಧ ಪೊಸಾನಿ ಆಗಾಗ ಗುಡುಗುತ್ತಾರೆ. ಅವರ ವಿರುದ್ಧ ಸಾಕಷ್ಟು ಆರೋಪಗಳನ್ನು ಅವರು ಮಾಡುತ್ತಾರೆ. ಇತ್ತೀಚೆಗೆ ಅವರು ಪವನ್ ಕಲ್ಯಾಣ್ ಬಗ್ಗೆ ಕೆಲ ಆರೋಪ ಮಾಡಿದ್ದಾರೆ. ಪೊಸಾನಿಗೆ ಇತ್ತೀಚೆಗೆ ಸಿನಿಮಾಗಳಲ್ಲಿ ಸಾಕಷ್ಟು ಆಫರ್​ಗಳು ಬರುತ್ತಿಲ್ಲ. ಇದಕ್ಕೆ ಪವನ್ ಕಲ್ಯಾಣ್ ಕಾರಣ ಎಂದಿದ್ದಾರೆ ಅವರು. ‘ನನಗೆ ಹೆಚ್ಚಿನ ಆಫರ್ ಬರುತ್ತಿಲ್ಲ. ಇದಕ್ಕೆ ಪವನ್ ಕಲ್ಯಾಣ್ ಕಾರಣ. ಆದರೆ, ಈ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಆ ನಟನಿಗೆ ಕೆಟ್ಟ ಸಾವು ಬರುತ್ತೆ’; ಪೊಸಾನಿಗೆ ಬಂಡ್ಲ ಗಣೇಶ್​ ಶಾಪ: ಪವನ್​ ಕಲ್ಯಾಣ್​ ಬಗ್ಗೆ ಮಾತಾಡಿದ್ದೇ ತಪ್ಪಾಯ್ತು

ಪೊಸಾನಿ ಕೃಷ್ಣ ಮುರಳಿ ಅವರು ತೆಲುಗಿನ ಜನಪ್ರಿಯ ಪೋಷಕ ನಟ. ಅವರು ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಸದಸ್ಯ ಕೂಡ ಹೌದು. ಈ ಹಿಂದೆಯೂ ಪವನ್ ಕಲ್ಯಾಣ್ ಹಾಗೂ ಸಿಎಂ ಜಗನ್ ವಿರುದ್ಧ ಗುಡುಗಿದ್ದರು. ಪವನ್ ಕಲ್ಯಾಣ್​ ಅವರರ ಖಾಸಗಿ ಜೀವನದ ಬಗ್ಗೆ, ಅವರ ಪತ್ನಿಯ ಬಗ್ಗೆ ಅವಾಚ್ಯವಾಗಿ ಬೈದಿದ್ದರು ಪೊಸಾನಿ. ಅವರ ಮೇಲೆ ಪವನ್ ಫ್ಯಾನ್ಸ್ ಹಲ್ಲೆ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us