ಚುನಾವಣೆಗಾಗಿ ಹಳೆಯ ದ್ವೇಷ ಪಕ್ಕಕ್ಕಿಟ್ಟ ಪವನ್ ಕಲ್ಯಾಣ್, ಸಹನಟರ ಬಗ್ಗೆ ಮಾತು

Pawan Kalyan: ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಕೆಲವು ನಟರೊಟ್ಟಿಗೆ ಭಿನ್ನಾಭಿಪ್ರಾಯ ಹೊಂದಿದ್ದರು, ಆದರೆ ಚುನಾವಣೆಗಾಗಿ ಎಲ್ಲವನ್ನೂ ಬದಿಗಿಟ್ಟಿರುವ ಪವನ್, ಸಹನಟರ ಬಗ್ಗೆ ಮಾತನಾಡಿದ್ದಾರೆ.

ಚುನಾವಣೆಗಾಗಿ ಹಳೆಯ ದ್ವೇಷ ಪಕ್ಕಕ್ಕಿಟ್ಟ ಪವನ್ ಕಲ್ಯಾಣ್, ಸಹನಟರ ಬಗ್ಗೆ ಮಾತು
ಪವನ್-ಅಲ್ಲು ಅರ್ಜುನ್
Follow us
ಮಂಜುನಾಥ ಸಿ.
|

Updated on: Jun 22, 2023 | 10:12 PM

ನಟ, ರಾಜಕಾರಣಿ ಪವನ್ ಕಲ್ಯಾಣ್ (Pawan Kalyan) ಇದೀ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಭರ್ಜರಿಯಾಗಿ ತಯಾರಿ ನಡೆಸಿದ್ದಾರೆ. ಇತರೆ ಪಕ್ಷಗಳಿಗೂ ಮುನ್ನವೇ ಪ್ರಚಾರ ಕಾರ್ಯ ಆರಂಭಿಸಿರುವ ಪವನ್ ಕಲ್ಯಾಣ್, ವಾರಾಹಿ (Varahi Yatra) ಯಾತ್ರೆಯನ್ನು ಪ್ರಾರಂಭಿಸಿದ್ದು ಆಂಧ್ರದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಭಾಷಣಗಳನ್ನು ಮಾಡುತ್ತಾ ಆಡಳಿತ ಪಕ್ಷವನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಇದರ ಜೊತೆಗೆ ಹೋದಲ್ಲೆಲ್ಲ ತೆಲುಗು ಚಿತ್ರರಂಗದ ಇತರೆ ನಟರುಗಳ ಬಗ್ಗೆಯೂ ಮಾತನಾಡುತ್ತಿದ್ದಾರೆ ಆ ಮೂಲಕ ಸಹನಟರ ಅಭಿಮಾನಿಗಳನ್ನು (Fan) ತಮ್ಮ ಮತದಾರರನ್ನಾಗಿ ಬದಲಾಯಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ಇತ್ತೀಚೆಗಿನ ಸಭೆಯೊಂದರಲ್ಲಿ ಭಾಷಣ ಮಾಡಿದ ಪವನ್ ಕಲ್ಯಾಣ್, ”ಕೆಲವರು ಹೇಳುತ್ತಾರೆ ಜೂ ಎನ್​ಟಿಆರ್ ಹಾಗೂ ಪವನ್ ಅಭಿಮಾನಿಗಳು ಸದಾ ಜಗಳವಾಡುತ್ತಾರೆ ಎಂದು ಆದರೆ ನನಗೆ ನಟರಲ್ಲಿ ಭೇದ ಭಾವವಿಲ್ಲ. ನನಗೆ ಎಲ್ಲ ನಟರೂ ಇಷ್ಟ. ಜೂ ಎನ್​ಟಿಆರ್, ಅಲ್ಲು ಅರ್ಜುನ್, ಪ್ರಭಾಸ್, ಬಾಲಕೃಷ್ಣ, ಚಿರಂಜೀವಿ, ರಾಮ್ ಚರಣ್ ಹೀಗೆ ಎಲ್ಲ ನಟರ ಸಿನಿಮಾಗಳನ್ನೂ ನೋಡುತ್ತೇನೆ. ಅವರೆಂದರೆ ನನಗೆ ಬಹಳ ಇಷ್ಟ ಎದುರು ಸಿಕ್ಕರೆ ಮಾತನಾಡಿಕೊಳ್ಳುತ್ತೇವೆ. ಅವರನ್ನು ನಾನು ಗೌರವಿಸುತ್ತೇನೆ. ಸಿನಿಮಾ ನಟರ ಮೇಲಿನ ನಿಮ್ಮ ಇಷ್ಟವನ್ನು ರಾಜಕೀಯದಲ್ಲಿ ತೋರಿಸಬೇಡಿ” ಎಂದು ಮನವಿ ಮಾಡಿದ್ದಾರೆ ಪವನ್ ಕಲ್ಯಾಣ್.

”ಪ್ರಭಾಸ್, ಮಹೇಶ್ ಬಾಬು ಅವರುಗಳು ನನಗಿಂತ ದೊಡ್ಡ ಸ್ಟಾರ್​ಗಳು ನನಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಅವರುಗಳು ಪ್ಯಾನ್ ಇಂಡಿಯಾ ಸ್ಟಾರ್​ಗಳು. ರಾಮ್ ಚರಣ್ ಹಾಗೂ ಜೂ ಎನ್​ಟಿಆರ್ ಅಂಥೂ ಗ್ಲೋಬಲ್ ಸ್ಟಾರ್​ಗಳಾಗಿದ್ದಾರೆ. ಪ್ರಪಂಚದ ಜನ ಅವರನ್ನು ಗುರುತಿಸುತ್ತಾರೆ. ಆದರೆ ನನ್ನನ್ನು ಪ್ರಪಂಚದಾದ್ಯಂತ ಗುರುತಿಸುವುದಿಲ್ಲ. ನನಗೆ ಗೊತ್ತು, ಆದರೆ ನನಗೆ ಅದರ ಬಗ್ಗೆ ಯೋಚನೆ ಇಲ್ಲ. ನನಗೆ ಇಗೋ ಇಲ್ಲ. ನನಗೆ ಬೇಕಿರುವುದು ಎಲ್ಲರೂ ಚೆನ್ನಾಗಿರಬೇಕು ಅದರಲ್ಲಿಯೂ ಕಷ್ಟದಲ್ಲಿರುವ ವ್ಯಕ್ತಿ ಪ್ರಗತಿ ಸಾಧಿಸಬೇಕು” ಎಂದಿದ್ದಾರೆ ಪವನ್ ಕಲ್ಯಾಣ್.

ಇದನ್ನೂ ಓದಿ: ಪವನ್ ಕಲ್ಯಾಣ್ ಡ್ರಗ್ಸ್ ತೆಗೆದುಕೊಳ್ಳುತ್ತಾನೆ, ಆತನೊಬ್ಬ ರಾಜಕೀಯ ವ್ಯಭಿಚಾರಿ

”ಹಾಗಾಗಿ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ನಮ್ಮಲ್ಲಿ ನಾವು ಜಗಳವಾಡುವುದು ಬೇಡ. ಎಲ್ಲ ನಾಯಕ ನಟರನ್ನೂ ಆರಾಧಿಸಿರಿ ಆದರೆ ರಾಜಕೀಯದ ವಿಷಯ ಬಂದಾಗ ದಯವಿಟ್ಟು ಎಲ್ಲರೂ ಒಂದಾಗಿ ಒಂದು ಗುರಿಯ ಪರವಾಗಿ ಆಲೋಚನೆ ಮಾಡಿ. ಪವನ್ ಕಲ್ಯಾಣ್ ಎಂಬ ಒಬ್ಬ ವ್ಯಕ್ತಿ ನಿಂತರೆ ಆತ ಎಷ್ಟು ಲಕ್ಷ ರೈತರ ಪರವಾಗಿ ದನಿಯಾಗಬಲ್ಲ ಎಂಬುದನ್ನು ಯೋಚಿಸಿರಿ. ಹಾಗಾಗಿ ನಾವು ಐಕ್ಯತೆಯಿಂದ ಇರೋಣ, ಅಭಿವೃದ್ಧಿಯ ಕಡೆಗೆ ಸಾಗೋಣ” ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

ಆಂಧ್ರ-ತೆಲಂಗಾಣಗಳಲ್ಲಿ ಸ್ಟಾರ್ ವಾರ್ ಹೆಚ್ಚು. ಒಬ್ಬ ಸ್ಟಾರ್ ನಟನ ಅಭಿಮಾನಿಗಳಿಗೆ ಮತ್ತೊಬ್ಬ ಸ್ಟಾರ್ ನಟನ ಅಭಿಮಾನಿಗಳೆಂದರೆ ಆಗದು. ಹಾಗಾಗಿ ಇದು ಪವನ್ ಕಲ್ಯಾಣ್​ಗೆ ತಲೆನೋವಾಗಿ ಪರಿಣಮಿಸಿದ್ದು ಅದನ್ನು ನಿವಾರಿಸುವ ಉದ್ದೇಶದಿಂದ ಪವನ್ ಕಲ್ಯಾಣ್ ವಾರಾಹಿ ಯಾತ್ರೆಯಲ್ಲಿ ಹೋದಲ್ಲೆಲ್ಲ ಇತರೆ ನಟರ ಬಗ್ಗೆ ತಮಗೆ ಗೌರವವೆಂದು, ಇತರೆ ನಟರ ಅಭಿಮಾನಿಗಳು ತಮಗೆ ಮತ ಹಾಕಬೇಕೆಂದು ಮನವಿ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?