ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಅವರ ಜೀವನದ ಕುರಿತು ಸಿನಿಮಾ (Ilaiyaraaja Biopic) ಸಿದ್ಧವಾಗುತ್ತಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಹೊಸ ಸುದ್ದಿ ಹೊರಬಿದ್ದಿದೆ. ವಿಶೇಷ ಏನೆಂದರೆ, ಇಳೆಯರಾಜ (Ilaiyaraaja) ಅವರ ಪಾತ್ರವನ್ನು ಖ್ಯಾತ ಕಾಲಿವುಡ್ ನಟ ಧನುಷ್ (Dhanush) ಅವರು ಮಾಡಲಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಇಳೆಯರಾಜ ಅವರು ನೀಡಿದ ಕೊಡುಗೆ ಅಪಾರ. 7 ಸಾವಿರಕ್ಕೂ ಅಧಿಕ ಹಾಡುಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. 1 ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಇಂಥ ಮಹಾನ್ ಸಾಧಕನ ಜೀವನದ ವಿವರಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗುತ್ತಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
‘ಇಸೈಗ್ನಾನಿ’ ಎಂದು ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಈ ಪ್ರಾಜೆಕ್ಟ್ ಅನೌನ್ಸ್ ಆಗುತ್ತಿದ್ದಂತೆಯೇ ಇಳೆಯರಾಜ ಮತ್ತು ಧನುಷ್ ಅವರು ಜೊತೆಯಾಗಿ ಇರುವ ಫೋಟೋಗಳು ವೈರಲ್ ಆಗಿವೆ. ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಕಮೆಂಟ್ ಮೂಲಕ ಈ ಸಿನಿಮಾ ಬಗ್ಗೆ ತಮಗೆ ಇರುವ ಎಗ್ಸೈಟ್ಮೆಂಟ್ ತೋಡಿಕೊಂಡಿದ್ದಾರೆ.
Filming for the much-anticipated Official Biopic based on the life and times of the Music Maestro, Isaignani #ILAIYARAAJA with the very versatile and talented #Dhanush portraying the legendary composer on screen to commence on October 2024.
Film will… pic.twitter.com/9sS8n4NfVc
— Manobala Vijayabalan (@ManobalaV) November 10, 2023
ಎಲ್ಲವೂ ಅಂದುಕೊಂಡಂತೆ ನಡೆದರೆ 2024ರ ಅಕ್ಟೋಬರ್ನಲ್ಲಿ ಇಳೆಯರಾಜ ಅವರ ಬಯೋಪಿಕ್ಗೆ ಶೂಟಿಂಗ್ ಆರಂಭ ಆಗಲಿದೆ. 2025ರ ಮಧ್ಯಭಾಗದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇಳೆಯರಾಜ ಅವರ ವೃತ್ತಿಜೀವನ ಮತ್ತು ಖಾಸಗಿ ಬದುಕಿನ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗುವುದು. ಧನುಷ್ ಅವರನ್ನು ಇಳೆಯರಾಜ ಅವರ ಪಾತ್ರದಲ್ಲಿ ನೋಡಲು ಫ್ಯಾನ್ಸ್ ಕಾತರರಾಗಿದ್ದಾರೆ. ಮರ್ಕ್ಯುರಿ ಮೂವೀಸ್ ಮತ್ತು ಕನೆಕ್ಟ್ ಮೀಡಿಯಾ ಸಂಸ್ಥೆಗಳು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿವೆ.
ಇದನ್ನೂ ಓದಿ: Dhanush: ತಲೆ ಬೋಳಿಸಿಕೊಂಡ ಖ್ಯಾತ ನಟ ಧನುಷ್; ಅಭಿಮಾನಿಗಳಲ್ಲಿ ಮೂಡಿತು ಗುಮಾನಿ
ಕನ್ನಡ ಚಿತ್ರರಂಗದ ಜೊತೆಗೂ ಇಳೆಯರಾಜ ಅವರಿಗೆ ನಂಟು ಇದೆ. ಕನ್ನಡದಲ್ಲೂ ಅವರು ಅನೇಕ ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ‘ನಾನು ಕೂಡ ಕನ್ನಡದವನು’ ಎಂದು ಅವರು ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಕರ್ನಾಟಕದಲ್ಲಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಕನ್ನಡದ ಮಂದಿಗೂ ಈ ಸಿನಿಮಾ ಮೇಲೆ ಕುತೂಹಲ ಸೃಷ್ಟಿ ಆಗಿದೆ. ಈಗಾಗಲೇ ಅನೇಕ ಸಾಧಕರ ಬಯೋಪಿಕ್ ನಿರ್ಮಾಣ ಆಗಿ ಯಶಸ್ಸು ಕಂಡಿವೆ. ಇಂಥ ಸಿನಿಮಾಗಳನ್ನು ಮಾಡುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಇಳೆಯರಾಜ ಜೀವನಾಧಾರಿತ ಸಿನಿಮಾದ ತೆರೆಹಿಂದೆ ಕೆಲಸ ಮಾಡಲಿರುವ ತಾಂತ್ರಿಕ ಬಳಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.