Sign In

By signing in or creating an account, you agree with Associated Broadcasting Company's Terms & Conditions and Privacy Policy.

33 ವರ್ಷಗಳ ಬಳಿಕ ಇಬ್ಬರು ದಿಗ್ಗಜ ನಟರ ಸಮ್ಮಿಲನ: ರಜನೀಕಾಂತ್ ಜೊತೆಗೂಡುತ್ತಿರುವುದು ಯಾರು?

Rajinikanth: ರಜನೀಕಾಂತ್ ದಶಕಗಳ ಹಿಂದೆ ನಟಸಿದ್ದ ಪರಭಾಷೆ ಸ್ಟಾರ್ ನಟರೊಟ್ಟಿಗೆ ಈಗ ಮತ್ತೊಮ್ಮೆ ನಟಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ತಾವು ನಟಿಸುತ್ತಿರುವುದು ಘೋಷಿಸಿದ ಬೆನ್ನಲ್ಲೆ 33 ವರ್ಷಗಳ ಹಿಂದೆ ಒಟ್ಟಿಗೆ ನಟಿಸಿದ್ದ ಪರಭಾಷೆ ಸ್ಟಾರ್ ನಟನೊಡನೆ ಮತ್ತೆ ನಟಿಸಲು ಸಜ್ಜಾಗಿದ್ದಾರೆ.

33 ವರ್ಷಗಳ ಬಳಿಕ ಇಬ್ಬರು ದಿಗ್ಗಜ ನಟರ ಸಮ್ಮಿಲನ: ರಜನೀಕಾಂತ್ ಜೊತೆಗೂಡುತ್ತಿರುವುದು ಯಾರು?
ರಜನೀಕಾಂತ್
Follow us
ಮಂಜುನಾಥ ಸಿ.
|

Updated on: Nov 10, 2023 | 9:16 PM

ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಜಮಾನ ಆಗಿರುವ ಕಾರಣ ಅವಶ್ಯಕತೆ ಇರಲಿ, ಇಲ್ಲದಿರಲಿ ಪರಭಾಷೆಯ ಜನಪ್ರಿಯ ನಟರನ್ನು ಸಿನಿಮಾಗಳಿಗೆ ಹಾಕಿಕೊಳ್ಳುವ ಪರಿಪಾಠ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮಾರುಕಟ್ಟೆ ಉದ್ದೇಶದಿಂದಾಗಿ ಈ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಹಾಗೆಂದು ಈ ಟ್ರೆಂಡ್ ಮುಂಚೆ ಇರಲಿಲ್ಲವೆಂದೇನಿಲ್ಲ, ಆದರೆ ಪಾತ್ರದ ಅವಶ್ಯಕತೆಗೆ ತಕ್ಕಂತೆ ಮಾತ್ರವೇ ಹಿಂದೆ ಪರಭಾಷೆಯ ಸ್ಟಾರ್ ನಟರನ್ನು ಸಿನಿಮಾಗಳಲ್ಲಿ ಹಾಕಿಕೊಳ್ಳಲಾಗುತ್ತಿತ್ತು. ಒಮ್ಮೊಮ್ಮೆ ನಟರ ನಡುವಿನ ಸ್ನೇಹವೂ ಸಹ ಇದಕ್ಕೆ ಕಾರಣವಾಗಿದ್ದಿದೆ. ರಜನೀಕಾಂತ್ ಸಹ ಹಿಂದೆ ಪರಭಾಷೆಯ ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಇದೀಗ 33 ವರ್ಷಗಳ ಬಳಿಕ ಮತ್ತೊಮ್ಮೆ ನೆರೆಯ ಚಿತ್ರರಂಗದ ಸ್ಟಾರ್ ನಟರೊಬ್ಬರೊಡನೆ ತೆರೆ ಹಂಚಿಕೊಳ್ಳಲಿದ್ದಾರೆ.

1991 ರಲ್ಲಿ ರಜನೀಕಾಂತ್ ನಟಿಸಿದ್ದ ‘ದಳಪತಿ’ ಭಾರಿ ದೊಡ್ಡ ಹಿಟ್ ಆಗಿತ್ತು. ರಜನೀಕಾಂತ್​ರ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಅದೂ ಸಹ ಒಂದು. ಅದೇ ಸಿನಿಮಾದಲ್ಲಿ ರಜನೀಕಾಂತ್​ರ ಆತ್ಮೀಯ ಗೆಳೆಯನ ಪಾತ್ರದಲ್ಲಿ ಮಲಯಾಳಂನ ಸೂಪರ್ ಸ್ಟಾರ್ ಮಮ್ಮುಟಿ ಸಹ ನಟಿಸಿದ್ದರು. ಅದಾದ ಬಳಿಕ ಈ ಇಬ್ಬರೂ ನಟರು ಮತ್ತೆ ಒಟ್ಟಿಗೆ ನಟಿಸಿಯೇ ಇಲ್ಲ. ಇದೀಗ 33 ವರ್ಷಗಳ ಬಳಿಕ ಇಬ್ಬರೂ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಮತ್ತೆ ನಟಿಸಲಿದ್ದಾರೆ.

ಇದನ್ನೂ ಓದಿ:ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಸಿನಿಮಾದ ಹಾರ್ಡ್ ಡಿಸ್ಕ್ ನಾಪತ್ತೆ! ಮುಂದೇನು ಗತಿ

ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್, ರಜನೀಕಾಂತ್​ರ 171ನೇ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿ ಮಮ್ಮುಟಿ ಅವರೂ ಸಹ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ಈ ಇಬ್ಬರು ಬರೋಬ್ಬರಿ 33 ವರ್ಷಗಳ ಬಳಿಕ ಒಟ್ಟಿಗೆ ನಟಿಸಿದಂತಾಗುತ್ತದೆ. ರಜನೀಕಾಂತ್​ರ ಈ ಹಿಂದಿನ ಸಿನಿಮಾ ‘ಜೈಲರ್​’ನಲ್ಲಿ ರಜನೀಕಾಂತ್ ಮಲಯಾಳಂನ ಮತ್ತೊಬ್ಬ ಸೂಪರ್ ಸ್ಟಾರ್ ಮೋಹನ್​ಲಾಲ್ ಜೊತೆಗೆ ನಟಿಸಿದ್ದರು. ಈಗ ತಮ್ಮ ಮುಂದಿನ ಸಿನಿಮಾದಲ್ಲಿ ಮಮ್ಮುಟಿ ಜೊತೆಗೆ ನಟಿಸಲಿದ್ದಾರೆ. ಮತ್ತೊಂದು ವಿಶೇಷವೆಂದರೆ ದಶಕಗಳ ಹಿಂದೆ ಅಮಿತಾಬ್ ಬಚ್ಚನ್ ಜೊತೆ ರಜನೀಕಾಂತ್ ನಟಿಸಿದ್ದರು, ಈಗ ಮತ್ತೆ ಬೇರೊಂದು ಸಿನಿಮಾದಲ್ಲಿ ರಜನೀಕಾಂತ್ ಹಾಗೂ ಅಮಿತಾಬ್ ಬಚ್ಚನ್ ಒಟ್ಟಿಗೆ ನಟಿಸುತ್ತಿದ್ದಾರೆ. ಆ ಮೂಲಕ ರಜನೀಕಾಂತ್​ರ ಸಿನಿಮಾ ಚಕ್ರ ಒಂದು ಸುತ್ತು ಬಂದಂತಾಗಿದೆ.

ರಜನೀಕಾಂತ್ ಪ್ರಸ್ತುತ ‘ಲಾಲ್ ಸಲಾಂ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಅವರ ಪುತ್ರಿಯೇ ಆಗಿರುವ ಐಶ್ವರ್ಯಾ ರಜನೀಕಾಂತ್ ನಿರ್ದೇಶನ ಮಾಡಿದ್ದು, ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಸಿನಿಮಾದಲ್ಲಿ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ರಜನೀಕಾಂತ್ ನಟಿಸಿದ್ದಾರೆ. ಈ ಸಿನಿಮಾ ಕ್ರಿಕೆಟ್ ಆಟದ ಕುರಿತಾದ ಕತೆ ಹೊಂದಿದ್ದು, ಸಿನಿಮಾದಲ್ಲಿ ಕಪಿಲ್ ದೇವ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಲಾಲ್ ಸಲಾಂ’ ಸಿನಿಮಾ ಮುಗಿದ ಬಳಿಕ ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
WITT: ಟಿವಿ9 ಶೃಂಗಸಭೆಯಲ್ಲಿ ಕೇಂದ್ರ ಸಚಿವರ ಸಂದರ್ಶನ, ಲೈವ್ ನೋಡಿ
Shani Sanchara 2025: ಶನಿ ಸಂಚಾರ ರಾಶಿ ಭವಿಷ್ಯ, ಲೈವ್ ವೀಕ್ಷಿಸಿ
Shani Sanchara 2025: ಶನಿ ಸಂಚಾರ ರಾಶಿ ಭವಿಷ್ಯ, ಲೈವ್ ವೀಕ್ಷಿಸಿ