Ilaiyaraaja Biopic: ಇಳೆಯರಾಜ ಬಯೋಪಿಕ್​ನಲ್ಲಿ ಧನುಷ್​ ನಟನೆ; ಭಾರಿ ನಿರೀಕ್ಷೆ ಮೂಡಿಸಿದ ಸಿನಿಮಾ

Dhanush: 2024ರ ಅಕ್ಟೋಬರ್​ನಲ್ಲಿ ಇಳೆಯರಾಜ ಅವರ ಬಯೋಪಿಕ್​ಗೆ ಶೂಟಿಂಗ್​ ಆರಂಭ ಆಗಲಿದೆ. 2025ರ ಮಧ್ಯಭಾಗದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇಳೆಯರಾಜ ಅವರ ವೃತ್ತಿಜೀವನ ಮತ್ತು ಖಾಸಗಿ ಬದುಕಿನ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗುವುದು. ಧನುಷ್​ ಅವರನ್ನು ಇಳೆಯರಾಜ ಅವರ ಪಾತ್ರದಲ್ಲಿ ನೋಡಲು ಫ್ಯಾನ್ಸ್​ ಕಾತರರಾಗಿದ್ದಾರೆ.

Ilaiyaraaja Biopic: ಇಳೆಯರಾಜ ಬಯೋಪಿಕ್​ನಲ್ಲಿ ಧನುಷ್​ ನಟನೆ; ಭಾರಿ ನಿರೀಕ್ಷೆ ಮೂಡಿಸಿದ ಸಿನಿಮಾ
ಧನುಷ್​, ಇಳೆಯರಾಜ
Follow us
ಮದನ್​ ಕುಮಾರ್​
|

Updated on: Nov 10, 2023 | 7:03 PM

ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಅವರ ಜೀವನದ ಕುರಿತು ಸಿನಿಮಾ (Ilaiyaraaja Biopic) ಸಿದ್ಧವಾಗುತ್ತಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಹೊಸ ಸುದ್ದಿ ಹೊರಬಿದ್ದಿದೆ. ವಿಶೇಷ ಏನೆಂದರೆ, ಇಳೆಯರಾಜ (Ilaiyaraaja) ಅವರ ಪಾತ್ರವನ್ನು ಖ್ಯಾತ ಕಾಲಿವುಡ್​ ನಟ ಧನುಷ್​ (Dhanush) ಅವರು ಮಾಡಲಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಇಳೆಯರಾಜ ಅವರು ನೀಡಿದ ಕೊಡುಗೆ ಅಪಾರ. 7 ಸಾವಿರಕ್ಕೂ ಅಧಿಕ ಹಾಡುಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. 1 ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಇಂಥ ಮಹಾನ್​ ಸಾಧಕನ ಜೀವನದ ವಿವರಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಆಗುತ್ತಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

‘ಇಸೈಗ್ನಾನಿ’ ಎಂದು ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಈ ಪ್ರಾಜೆಕ್ಟ್​ ಅನೌನ್ಸ್​ ಆಗುತ್ತಿದ್ದಂತೆಯೇ ಇಳೆಯರಾಜ ಮತ್ತು ಧನುಷ್​ ಅವರು ಜೊತೆಯಾಗಿ ಇರುವ ಫೋಟೋಗಳು ವೈರಲ್​ ಆಗಿವೆ. ಟ್ರೇಡ್​ ಅನಲಿಸ್ಟ್​ ಮನೋಬಲ ವಿಜಯಬಾಲನ್​ ಅವರು ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಅಭಿಮಾನಿಗಳು ಕಮೆಂಟ್​ ಮೂಲಕ ಈ ಸಿನಿಮಾ ಬಗ್ಗೆ ತಮಗೆ ಇರುವ ಎಗ್ಸೈಟ್​ಮೆಂಟ್​ ತೋಡಿಕೊಂಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದರೆ 2024ರ ಅಕ್ಟೋಬರ್​ನಲ್ಲಿ ಇಳೆಯರಾಜ ಅವರ ಬಯೋಪಿಕ್​ಗೆ ಶೂಟಿಂಗ್​ ಆರಂಭ ಆಗಲಿದೆ. 2025ರ ಮಧ್ಯಭಾಗದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇಳೆಯರಾಜ ಅವರ ವೃತ್ತಿಜೀವನ ಮತ್ತು ಖಾಸಗಿ ಬದುಕಿನ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗುವುದು. ಧನುಷ್​ ಅವರನ್ನು ಇಳೆಯರಾಜ ಅವರ ಪಾತ್ರದಲ್ಲಿ ನೋಡಲು ಫ್ಯಾನ್ಸ್​ ಕಾತರರಾಗಿದ್ದಾರೆ. ಮರ್ಕ್ಯುರಿ ಮೂವೀಸ್​ ಮತ್ತು ಕನೆಕ್ಟ್​ ಮೀಡಿಯಾ ಸಂಸ್ಥೆಗಳು ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿವೆ.

ಇದನ್ನೂ ಓದಿ: Dhanush: ತಲೆ ಬೋಳಿಸಿಕೊಂಡ ಖ್ಯಾತ ನಟ ಧನುಷ್​; ಅಭಿಮಾನಿಗಳಲ್ಲಿ ಮೂಡಿತು ಗುಮಾನಿ

ಕನ್ನಡ ಚಿತ್ರರಂಗದ ಜೊತೆಗೂ ಇಳೆಯರಾಜ ಅವರಿಗೆ ನಂಟು ಇದೆ. ಕನ್ನಡದಲ್ಲೂ ಅವರು ಅನೇಕ ಸೂಪರ್​ ಹಿಟ್​ ಗೀತೆಗಳನ್ನು ನೀಡಿದ್ದಾರೆ. ‘ನಾನು ಕೂಡ ಕನ್ನಡದವನು’ ಎಂದು ಅವರು ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಕರ್ನಾಟಕದಲ್ಲಿ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಕನ್ನಡದ ಮಂದಿಗೂ ಈ ಸಿನಿಮಾ ಮೇಲೆ ಕುತೂಹಲ ಸೃಷ್ಟಿ ಆಗಿದೆ. ಈಗಾಗಲೇ ಅನೇಕ ಸಾಧಕರ ಬಯೋಪಿಕ್​ ನಿರ್ಮಾಣ ಆಗಿ ಯಶಸ್ಸು ಕಂಡಿವೆ. ಇಂಥ ಸಿನಿಮಾಗಳನ್ನು ಮಾಡುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಇಳೆಯರಾಜ ಜೀವನಾಧಾರಿತ ಸಿನಿಮಾದ ತೆರೆಹಿಂದೆ ಕೆಲಸ ಮಾಡಲಿರುವ ತಾಂತ್ರಿಕ ಬಳಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.